ಹಿಂದು ಕಾರ್ಯಕರ್ತರ ಕೊಲೆಗಳಾದಾಗ ಸಿದ್ದರಾಮಯ್ಯ ಬುದ್ಧಿ ಕಳೆದುಕೊಂಡಿದ್ದೇಕೆ ? ಕೇಸುಗಳ‌ನ್ನು ಹಿಂಪಡೆದಿದ್ದೇಕೆ ? ನಾವು ಮಾತಾಡಲ್ಲ, ಆ್ಯಕ್ಷನ್ ಮಾತಾಡುತ್ತೆ ! 

11-04-22 02:48 pm       Udupi Correspondent   ಕರಾವಳಿ

ಸಿಎಂ ಬೊಮ್ಮಾಯಿ ಮೌನಿ, ನಾಲಿಗೆ ಕಳೆದುಕೊಂಡಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಹತ್ತು ಹಲವು ಕೊಲೆಗಳಾಗಿದ್ದವು.‌

ಉಡುಪಿ, ಎ.11 : ಸಿಎಂ ಬೊಮ್ಮಾಯಿ ಮೌನಿ, ನಾಲಿಗೆ ಕಳೆದುಕೊಂಡಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಹತ್ತು ಹಲವು ಕೊಲೆಗಳಾಗಿದ್ದವು.‌ ಸರಣಿಯಾಗಿ ಹಿಂದು ಕಾರ್ಯಕರ್ತರನ್ನು ಕೊಲೆ ಮಾಡಲಾಗಿತ್ತು.‌ ಆದರೆ ಕೊಲೆ ಮಾಡಿದವರ ಕೇಸನ್ನೇ ಅವರು ಹಿಂದೆ ತೆಗೆದುಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಬುದ್ಧಿ ಕಳೆದುಕೊಂಡಿದ್ದರಾ? ಎಂದು ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ. 

ಕಾರ್ಯಕ್ರಮ ನಿಮಿತ್ತ ಉಡುಪಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಬಂದಿಳಿದ ವೇಳೆ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರು ಏನೇ ವಿಶ್ಲೇಷಣೆ ಮಾಡಲಿ. ನಾವು ಸಂವಿಧಾನ ಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು.‌ ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಏನೂ ತೊಂದರೆ ಇಲ್ಲ.‌ ಆದರೆ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಯಾರೇ ಆಗಲಿ, ಹಿಂಸೆಗೆ ಇಳಿದರೆ ಸರಕಾರ ಸಹಿಸುವುದಿಲ್ಲ. ಈ ಸಂದೇಶವನ್ನು ಈಗಾಗಲೇ ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.‌

ನಾವು ಮಾತನಾಡುವುದಿಲ್ಲ.‌ ನಮ್ಮ ಆಕ್ಷನ್ ಮಾತನಾಡುತ್ತದೆ.  ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು. ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನೂ ಇಲ್ಲ.‌ ಯಾವ ಸಂದರ್ಭದಲ್ಲಿ ಯಾವ ಕ್ರಮ ಕೈಗೊಳ್ಳಬೇಕೆಂದು ನಮಗೆ ಗೊತ್ತಿದೆ. ಇವರ ಕಾಲದಲ್ಲಿ ಎಷ್ಟು ಕೊಲೆ ಪ್ರಕರಣಗಳನ್ನು, ಎಷ್ಟು ಸಂಸ್ಥೆಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು ಅನ್ನೋದು ಗೊತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

Investors shunning Karnataka, says Siddaramaiah | Deccan Herald

ಮಂಗಳೂರಿನಲ್ಲಿ ಲವ್ ಜಿಹಾದ್ ವಿರುದ್ಧ ಹಿಂದು ಸಂಘಟನೆಗಳಿಂದ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ, ತಮ್ಮ ರಕ್ಷಣೆ ಮಾಡಿಕೊಳ್ಳಲು ಎಲ್ಲರೂ ಸ್ವತಂತ್ರರಿದ್ದಾರೆ. ಇದರ ಬಗ್ಗೆ ತಪ್ಪು ವಿಶ್ಲೇಷಣೆ ಸರಿಯಲ್ಲ. ಸರಕಾರ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ. ಕೆಲವೊಂದು ಕಾನೂನುಗಳನ್ನು ಹಿಂದಿನ ಸರಕಾರವೇ ಮಾಡಿದ್ದು ನಾವೇನು ಹೊಸ ಕಾನೂನುಗಳನ್ನು ಮಾಡಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.‌

CM Bommai slams Siddaramaiah in Udupi, I am man of action not words. Siddaramaiah was a man of just words but nothing came to action he slammed.