ಮಂಗಳೂರಿನಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆ ಬಂದ ವಿವಿಧ ಮಠಗಳ ಸ್ವಾಮೀಜಿಗಳು ; ವಿಹಿಂಪ ಟಿಕೆಟ್ ವ್ಯವಸ್ಥೆ

28-03-22 06:43 pm       Mangalore Correspondent   ಕರಾವಳಿ

ಕಾಶ್ಮೀರಿ ಪಂಡಿತರ ನರಮೇಧ ಬಿಂಬಿಸುವ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡಲು ಕರಾವಳಿಯ ವಿವಿಧ ಮಠಗಳ ಮಠಾಧೀಶರು ಬಂದಿದ್ದಾರೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿರುವ ಸಿನಿಪೊಲಿಸ್ ಮಲ್ಪಿಫ್ಲೆಕ್ಸ್ ನಲ್ಲಿ ಸ್ವಾಮೀಜಿಗಳು ಚಿತ್ರ ವೀಕ್ಷಿಸಲು ವಿಶ್ವ ಹಿಂದು ಪರಿಷತ್ತಿನಿಂದ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು, ಮಾ.28: ಕಾಶ್ಮೀರಿ ಪಂಡಿತರ ನರಮೇಧ ಬಿಂಬಿಸುವ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡಲು ಕರಾವಳಿಯ ವಿವಿಧ ಮಠಗಳ ಮಠಾಧೀಶರು ಬಂದಿದ್ದಾರೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿರುವ ಸಿನಿಪೊಲಿಸ್ ಮಲ್ಪಿಫ್ಲೆಕ್ಸ್ ನಲ್ಲಿ ಸ್ವಾಮೀಜಿಗಳು ಚಿತ್ರ ವೀಕ್ಷಿಸಲು ವಿಶ್ವ ಹಿಂದು ಪರಿಷತ್ತಿನಿಂದ ವ್ಯವಸ್ಥೆ ಮಾಡಲಾಗಿದೆ.

ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಕದ್ರಿ ಯೋಗೀಶ್ವರ ಮಠದ ನಿರ್ಮಲನಾಥಜೀ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ, ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಚಿಲಿಂಬಿ ಮಠದ ವಿದ್ಯಾನಂದ ಸರಸ್ವತಿ ಮಾತಾಶ್ರೀ, ಕಾವೂರು ಆದಿಚುಂಚನಗಿರಿ ಮಠದ ಧರ್ಮಪಾಲನಾಥ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಈ ಸ್ವಾಮೀಜಿಗಳ ಶಿಷ್ಯವರ್ಗ ಚೀತ್ರ ವೀಕ್ಷಣೆಗೆ ಆಗಮಿಸಿದೆ.

ಸಾಮಾನ್ಯವಾಗಿ ಸಿನಿಮಾ ವೀಕ್ಷಣೆಗೆ ಸ್ವಾಮೀಜಿಗಳು ಚಿತ್ರ ಮಂದಿರಗಳಿಗೆ ಬರುವುದಿಲ್ಲ. ಕಾಶ್ಮೀರ್ ಫೈಲ್ಸ್ ಕಾಶ್ಮೀರಿ ಪಂಡಿತರ ನರಮೇಧ ಕುರಿತ ನೈಜ ಕತೆಯಾಗಿದ್ದು, ಹೀಗಾಗಿ ಬಿಜೆಪಿ ಮತ್ತು ಹಿಂದು ಸಂಘಟನೆಗಳು ದೇಶಾದ್ಯಂತ ತಮ್ಮ ಕಾರ್ಯಕರ್ತರಿಗೆ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತಿದೆ. ಮಂಗಳೂರಿನಲ್ಲಿಯೂ ಹಿಂದು ಸಂಘಟನೆಗಳು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಪ್ರತ್ಯೇಕವಾಗಿ ಟಿಕೆಟ್ ಬುಕ್ ಮಾಡಿ, ಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ.

Mangalore Mutt heads watch The Kashmir Files at cinepolis in City center.