ಹಿಜಾಬ್ ; ಉಪ್ಪಿನಂಗಡಿ ಕಾಲೇಜಿನಲ್ಲಿ ಮತ್ತೆ ಹೈಡ್ರಾಮಾ, ಸಿದ್ಧತಾ ಪರೀಕ್ಷೆ ಬಹಿಷ್ಕರಿಸಿ ಹೊರ ನಡೆದ ವಿದ್ಯಾರ್ಥಿನಿಯರು ! 

18-03-22 01:24 pm       Mangalore Correspondent   ಕರಾವಳಿ

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಬಂದು ಕಾಲೇಜು ಮುಂದೆ ಹೈಡ್ರಾಮಾ ನಡೆಸಿದ ಘಟನೆ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.‌

ಪುತ್ತೂರು, ಮಾ.18: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಬಂದು ಕಾಲೇಜು ಮುಂದೆ ಹೈಡ್ರಾಮಾ ನಡೆಸಿದ ಘಟನೆ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.‌

ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು ಅದಕ್ಕೆ ಹಾಜರಾಗಲು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು.‌ ಆದರೆ ಕಾಲೇಜು ಸಿಬಂದಿ ತರಗತಿ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಹೊರಗೆ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜು ಸಿಬಂದಿ, ಹಿಜಾಬ್ ತೆಗೆದಿಟ್ಟು ತರಗತಿಗೆ ಬನ್ನಿ ಎಂದು ಹೇಳಿದರೂ ಕೇಳಲಿಲ್ಲ.

ವಿದ್ಯಾರ್ಥಿನಿಯರು ಸಿಬಂದಿ ಮಾತು ಕೇಳದೆ ಹೊರಗೆ ನಿಂತಿದ್ದು ಬಳಿಕ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಅಲ್ಲದೆ, ಪರೀಕ್ಷೆ ಬರೆಯುತ್ತಿರುವ ಇತರ ವಿದ್ಯಾರ್ಥಿಗಳಿಗೆ ಅಡಚಣೆಯಾಗುವ ರೀತಿ ಕಾಲೇಜು ಹೊರಗಡೆ ಜಮಾಯಿಸಿ ಘೋಷಣೆ ಕೂಗಿದ್ದಾರೆ. ವಿದ್ಯಾರ್ಥಿಗಳ ಜೊತೆ ಪೋಷಕರೂ ಬಂದಿದ್ದು ಬಳಿಕ ಮುಸ್ಲಿಂ ಸಮುದಾಯದ ನಾಯಕರು ವಿದ್ಯಾರ್ಥಿಗಳ ಮನವೊಲಿಕೆ ಮಾಡಿದ್ದಾರೆ. ಸಮುದಾಯದ ನಾಯಕರ ಮನವೊಲಿಕೆ ಬಳಿಕ ಪರೀಕ್ಷೆ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಮನೆಗೆ ವಾಪಸ್ ತೆರಳಿದ್ದಾರೆ.

Mangalore Hijab row sparks in Uppinangady college, high drama.