ಮಂಗಳೂರು ಮೆಸ್ಕಾಂ ಇಂಜಿನಿಯರ್ ಮನೆಗೆ ಎಸಿಬಿ ದಾಳಿ ; ದಾಖಲೆ ಪರಿಶೀಲನೆ

16-03-22 11:56 am       Mangalore Correspondent   ಕರಾವಳಿ

ರಾಜ್ಯಾದ್ಯಂತ ಎಸಿಬಿ ದಾಳಿ ನಡೆದಿದ್ದು ಮಂಗಳೂರಿನಲ್ಲಿ ಮೆಸ್ಕಾಂ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು, ಮಾ.16 : ರಾಜ್ಯಾದ್ಯಂತ ಎಸಿಬಿ ದಾಳಿ ನಡೆದಿದ್ದು ಮಂಗಳೂರಿನಲ್ಲಿ ಮೆಸ್ಕಾಂ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ದಿಢೀರ್ ದಾಳಿ ನಡೆದಿದ್ದು ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದಯಾಲು ಸುಂದರ್ ರಾಜ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ‌. ನಗರದ ಮಲ್ಲಿಕಟ್ಟೆ ಸಮೀಪ ಬಾಡಿಗೆ ಮನೆ ಹೊಂದಿರುವ ವಿಜಯ ಅಪಾರ್ಟ್​​​ಮೆಂಟ್ ಹಾಗೂ ಮೆಸ್ಕಾಂ ಕಚೇರಿ ಮೇಲೆ ದಾಳಿ ‌ಮಾಡಲಾಗಿದೆ. ಎಸಿಬಿ ಎಸ್​ಪಿ ಸಿ.ಎ.ಸೈಮನ್ ಹಾಗೂ ಕಾರವಾರ ಎಸಿಬಿ‌ ನೇತೃತ್ವದ ತಂಡ ದಾಳಿ ‌ನಡೆಸಿದೆ. 

ಎಸಿಬಿ‌ ಅಧಿಕಾರಿಗಳು ಅಧಿಕಾರಿ ಕುರಿತ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ದಯಾಲು ಸುಂದರ್ ರಾಜ್ ಮಂಗಳೂರಿನಲ್ಲಿ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Teams of the Anti-Corruption Bureau (ACB), in an early morning operation on Wednesday March 16, raided a number of officials all over the state. Assistant executive engineer (AEE) of Karnataka Power Transmission Corporation Ltd (KPTCL), Dayasundar Raju based in Mangaluru happens to be one of the targetted officials.