ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಂಗಳೂರಿಗೆ ; ಕುದ್ರೋಳಿ ದೇವಸ್ಥಾನಕ್ಕೆ ಭೇಟಿ, ಸಂಜೆ ಕಾರ್ಕಳ ಉತ್ಸವಕ್ಕೆ

14-03-22 02:20 pm       Mangalore Correspondent   ಕರಾವಳಿ

ಎರಡು ದಿನಗಳ ಕರಾವಳಿ ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೇಗುಲದ ಆಡಳಿತ ಮಂಡಳಿ ಸದಸ್ಯರು ರಾಜ್ಯಪಾಲರನ್ನು ಬರಮಾಡಿಕೊಂಡು ಸ್ವಾಗತಿಸಿದರು.

ಮಂಗಳೂರು, ಮಾ.14: ಎರಡು ದಿನಗಳ ಕರಾವಳಿ ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೇಗುಲದ ಆಡಳಿತ ಮಂಡಳಿ ಸದಸ್ಯರು ರಾಜ್ಯಪಾಲರನ್ನು ಬರಮಾಡಿಕೊಂಡು ಸ್ವಾಗತಿಸಿದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಆರತಿ ಸ್ವೀಕರಿಸಿದರು. ಶಿಷ್ಟಚಾರ ಪ್ರಕಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಜೊತೆಗಿದ್ದರು. ದೇವರ ದರ್ಶನದ ಬಳಿಕ ದೇವಸ್ಥಾನದ ಟ್ರಸ್ಟಿಗಳು ರಾಜ್ಯಪಾಲರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಇದೇ ವೇಳೆ, ದೇಗುಲದ ಅಭಿವೃದ್ಧಿಯ ರೂವಾರಿ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಆತ್ಮಚರಿತ್ರೆ ಪುಸ್ತಕವನ್ನು ಅವರಿಗೆ ನೀಡಲಾಯಿತು. ದೇವಸ್ಥಾನದ ಪ್ರವಾಸಿಗರ ಸಂದರ್ಶನದ ಪುಸ್ತಕದಲ್ಲಿ ಸಹಿ ಹಾಕಿ, ಅಲ್ಲಿಂದ ಸರ್ಕಿಟ್ ಹೌಸ್ ಗೆ ನಿರ್ಗಮಿಸಿದರು.

ಮಧ್ಯಾಹ್ನ 2.45ಕ್ಕೆ ರಾಜ್ಯಪಾಲರು ಮಂಗಳೂರಿನಿಂದ ಮೂಡುಬಿದ್ರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ನಾಲ್ಕು ಗಂಟೆಗೆ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಆನಂತರ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಕಳ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂಟು ಗಂಟೆಗೆ ಅಲ್ಲಿಂದ ಮರಳಿ ಮಂಗಳೂರಿಗೆ ಬರಲಿದ್ದು ಸರ್ಕಿಟ್ ಹೌಸ್ ನಲ್ಲಿ ರಾತ್ರಿ ತಂಗಲಿದ್ದಾರೆ. ಮಾ.15ರಂದು ಬೆಳಗ್ಗೆ ಹತ್ತು ಗಂಟೆಗೆ ಬಜ್ಪೆ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು ತಲುಪಲಿದ್ದಾರೆ.

Governor of Karnataka Thawar Chand Gehlot is touring Dakshina Kannada (DK) and Udupi districts on March 14 and 15.