ಮಲ್ಪೆ ಬಂದರಿನಲ್ಲಿ ಬಲೆಗೆ ಬಿದ್ದ ಬೃಹತ್ ಗರಗಸ ಮೀನು ! ಮುಖದಲ್ಲಿ ಗರಗಸದ ಅಲಗು ಇರುವ ಅಪರೂಪದ ಮೀನು ನೋಡಲು ಜನಸಾಗರ 

10-03-22 10:25 pm       Udupi Correspondent   ಕರಾವಳಿ

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಅತ್ಯಂತ ಅಪರೂಪದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಗರಗಸ ಮೀನು ಅಥವಾ ಕಾರ್ಪೆಂಟರ್ ಫಿಶ್ ಎಂದು ಕರೆಯಲ್ಪಡುವ ಈ ಮೀನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. 

ಉಡುಪಿ, ಮಾ.10: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಅತ್ಯಂತ ಅಪರೂಪದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಗರಗಸ ಮೀನು ಅಥವಾ ಕಾರ್ಪೆಂಟರ್ ಫಿಶ್ ಎಂದು ಕರೆಯಲ್ಪಡುವ ಈ ಮೀನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. 

ಬೋಟಿನಲ್ಲಿ ಬಲೆಗೆ ಬಿದ್ದ ಮೀನನ್ನು ಬಂದರಿಗೆ ತರಲಾಗಿತ್ತು. 250 ಕೇಜಿ ತೂಗುತ್ತಿದ್ದ ಮೀನನ್ನು ಬೋಟಿನಿಂದ ಕ್ರೇನ್ ಮೂಲಕ ಎತ್ತಿ ಹೊರಕ್ಕೆ ಇಳಿಸಲಾಯ್ತು. ಬಳಿಕ ಆ ಮೀನನ್ನು ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು. ಮೀನಿನ ಮುಖದ ಭಾಗದಲ್ಲಿ ಗರಗಸ ಹೋಲುವ ಉದ್ದದ ಅಲಗು ಇದ್ದು ನೋಡಿದರೆ ರಕ್ಕಸ ಗಾತ್ರದಂತೆ ಕಾಣುತ್ತದೆ. 

ಆಳ ಸಮುದ್ರದಲ್ಲಿ ವಾಸವಿರುವ ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತದೆ. ಶಾರ್ಕ್ ಜಾತಿಯ ಮೀನುಗಳಲ್ಲಿ ಇದೂ ಒಂದಾಗಿದ್ದು ನೋಡಲು ಶಾರ್ಕಿಗಿಂತಲೂ ಆಕರ್ಷಕವಾಗಿದೆ.

An extremely rare and endangered species of sawfish or carpenter shark was caught by a fishermen boat in Malpe on Thursday, March 10.