ಬೆರಳಚ್ಚು ವಿಭಾಗದ ಎಎಸ್ಐ ಎಸ್ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಸಾವು !

04-03-22 09:57 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಬೆರಳಚ್ಚು ತನಿಖಾ ವಿಭಾಗದಲ್ಲಿ ಎಎಸ್ಐ ಆಗಿದ್ದ ಬೆಳಗಾವಿ ಮೂಲದ ತಿಪ್ಪಣ್ಣ ನಾಗವ್ವ ಮಾದರ (37) ನಗರದ ಎಸ್ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮಂಗಳೂರು, ಮಾ.4: ದಕ್ಷಿಣ ಕನ್ನಡ ಜಿಲ್ಲಾ ಬೆರಳಚ್ಚು ತನಿಖಾ ವಿಭಾಗದಲ್ಲಿ ಎಎಸ್ಐ ಆಗಿದ್ದ ಬೆಳಗಾವಿ ಮೂಲದ ತಿಪ್ಪಣ್ಣ ನಾಗವ್ವ ಮಾದರ (37) ನಗರದ ಎಸ್ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇಂದು ಸಂಜೆ ನಾಲ್ಕು ಗಂಟೆ ವೇಳೆಗೆ ಎಸ್ಪಿ ಕಚೇರಿಯಲ್ಲಿರುವ ಬೆರಳಚ್ಚು ವಿಭಾಗದ ಕಚೇರಿಗೆ ಪೊಲೀಸ್ ಲೇನ್ ಬಳಿಯ ವಸತಿ ಗೃಹದಿಂದ ನಡೆದುಕೊಂಡು ಹೋಗುತ್ತಿದ್ದಾಗ, ಎಬಿ ಶೆಟ್ಟಿ ವೃತ್ತದ ಬಳಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಿಎಆರ್ ಸಿಬಂದಿ ರಮೇಶ್ ಉಪಚರಿಸಿ, ಅಲ್ಲಿಯೇ ಇರುವ ಎಂವಿ ಶೆಟ್ಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಆಂಬುಲೆನ್ಸ್ ಮೂಲಕ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಲುಪುವಾಗಲೇ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸೂರು ಚಿಪ್ಪಾಲ್ ಕಟ್ಟಿ ನಿವಾಸಿಯಾಗಿರುವ ತಿಪ್ಪಣ್ಣ ಮಾದರ 2011ರಲ್ಲಿ ಪೊಲೀಸ್ ಇಲಾಖೆಗೆ ಕರ್ತವ್ಯಕ್ಕೆ ಸೇರಿದ್ದರು. ಬಾಗಲಕೋಟೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಂಡು ಕರ್ತವ್ಯದಲ್ಲಿದ್ದರು. ಬಳಿಕ ಎಎಸ್ಐ ಆಗಿ ಭಡ್ತಿ ಪಡೆದು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪತ್ನಿ ದೀಪಾ ತಿಪ್ಪಣ್ಣ ಮಾದರ, ಮಕ್ಕಳಾದ ನಿಹಾರಿಕಾ, ಅನ್ವಿತಾ, ನಿಶಾಂತ್ ಅವರನ್ನು ಅಗಲಿದ್ದಾರೆ.

Forensic ASI dies walking on the way to SP office in Mangalore. The deceased has been identified as Tippana (37).