ರಷ್ಯಾ ಬಾಂಬ್ ದಾಳಿಗೆ ನವೀನ್ ಮೃತಪಟ್ಟ ಸ್ಥಳದಲ್ಲೇ ಇದ್ದಳು ಉಜಿರೆಯ ವಿದ್ಯಾರ್ಥಿನಿ ! ಸಾವಿನ ದವಡೆಯಿಂದ ಪಾರಾಗಿ ಬಂದ ಕನ್ನಡಿಗರು ! 

03-03-22 12:00 pm       Mangalore Correspondent   ಕರಾವಳಿ

ಉಕ್ರೇನಿನ ಯುದ್ಧಪೀಡಿತ ಪ್ರದೇಶ ಖಾರ್ಕಿವ್ ನಗರದಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವೈದ್ಯ ವಿದ್ಯಾರ್ಥಿ ನವೀನ್ ಇದ್ದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿಯೂ ಸಿಕ್ಕಿಬಿದ್ದಿದ್ದಿದ್ದು ಸದ್ಯಕ್ಕೆ ರಾಯಭಾರ ಕಚೇರಿ ಸೂಚನೆ ಮೇರೆಗೆ ಆಕೆಯನ್ನು ಕರೆತರುವ ಕೆಲಸ ನಡೆದಿದೆ. 

ಮಂಗಳೂರು, ಮಾ.3: ಉಕ್ರೇನಿನ ಯುದ್ಧಪೀಡಿತ ಪ್ರದೇಶ ಖಾರ್ಕಿವ್ ನಗರದಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವೈದ್ಯ ವಿದ್ಯಾರ್ಥಿ ನವೀನ್ ಇದ್ದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿಯೂ ಸಿಕ್ಕಿಬಿದ್ದಿದ್ದಿದ್ದು ಸದ್ಯಕ್ಕೆ ರಾಯಭಾರ ಕಚೇರಿ ಸೂಚನೆ ಮೇರೆಗೆ ಆಕೆಯನ್ನು ಕರೆತರುವ ಕೆಲಸ ನಡೆದಿದೆ. 

ಮಂಗಳವಾರ ಬೆಳಗ್ಗೆ ರಷ್ಯಾ ಬಾಂಬ್ ದಾಳಿ ವೇಳೆ, ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಅಲ್ಲಿಯೇ ಸನಿಹದ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದರು. ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಉಕ್ರೇನ್ ನಾಡಿನಲ್ಲಿ ದಾವಿನ ದವಡೆಗೆ ಸಿಲುಕಿದ್ದವರು. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಹೀನಾ ಬಾಂಬ್ ದಾಳಿಗೆ ಸಾವನ್ನಪ್ಪಿದ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದರು ಎಂದು ಅವರ ಮಾವ ಆಬಿದ್ ಅಲಿ ಮಾಹಿತಿ ನೀಡಿದ್ದಾರೆ. 

ನವೀನ್ ಸಾವಿಗೆ ಕಾರಣವಾದ ರಷ್ಯಾ ನಡೆಸಿದ ಬಾಂಬ್ ದಾಳಿ ಹೀನಾ ಇದ್ದ ಕಟ್ಟಡಕ್ಕಿಂತ ಕೇವಲ 100 ಮೀ. ಅಂತರದಲ್ಲಿ ನಡೆದಿತ್ತು. ಕಟ್ಟಡದ ತಳಹಂತದ ಬಂಕರ್‌ನಲ್ಲಿ‌ ಹೀನಾ ಫಾತಿಮಾ ಸೇರಿದಂತೆ ಒಟ್ಟು 7 ಮಂದಿ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಂಡಿದ್ದರು. ಇದೀಗ ಭಾರತದ ವಿದೇಶಾಂಗ ಇಲಾಖೆ ವಿದ್ಯಾರ್ಥಿಗಳ ಜೊತೆ ಸಂಪರ್ಕ ಸಾಧಿಸಿದ್ದು, ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಬುಧವಾರ ಕೂಡಲೇ ಹಿಂತಿರುಗುವಂತೆ ಅವರಿಗೆ ನಿರ್ದೇಶನ ನೀಡಿದ್ದು, ರೈಲಿನ ಮೂಲಕ 1000 ಕಿ‌.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಇದೆ. 

ಒಂದು ದಿನ ಪ್ರಯಾಣ ನಡೆಸಿ ಗಡಿ ಸೇರಿದರೆ ಅಲ್ಲಿಂದ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆ ರಾಯಭಾರ ಕಚೇರಿ ಯೋಜನೆ ರೂಪಿಸಿದೆ. ಹೀನಾ ಫಾತಿಮಾ ಅವರ ಜೊತೆ ಚಿಕ್ಕಮಗಳೂರು, ಬೆಂಗಳೂರಿನ ಇತರ ಆರು ಮಂದಿ ಇದ್ದಾರೆ ಎನ್ನಲಾಗುತ್ತಿದೆ.

Two Ujre students of Mangalore stranded in Ukraine where Naveen of Haveri lost his life. The two students are doing their second year medicine in Ukraine.