ಸೋಮೇಶ್ವರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ  ಜನ್ಮದಿನಕ್ಕೆ ವಿಶೇಷ ಪೂಜೆ, ವೃದ್ಧಾಶ್ರಮದಲ್ಲಿ ಸಂಭ್ರಮಾಚರಣೆ 

28-02-22 03:24 pm       Mangalore Correspondent   ಕರಾವಳಿ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ನೀಡಿದ ಯೋಜನೆಗಳು ಎಂದಿಗೂ ಪ್ರಸ್ತುತ ಎಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. 

Photo credits : Headline Karnataka

ಉಳ್ಳಾಲ, ಫೆ.28 : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ನೀಡಿದ ಯೋಜನೆಗಳು ಎಂದಿಗೂ ಪ್ರಸ್ತುತ ಎಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. 

ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನದ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು ದಂಪತಿ ಪುರಾಣ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ರವೀಂದ್ರ ಶೆಟ್ಟಿ ಅವರು ಮಾಜಿ ಮುಖ್ಯಮಂತ್ರಿ‌ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿಯಂತಹ ಜನಪರ ಯೋಜನೆಗಳು, ರೈತರ ಪರವಾದ ನಿಲುವು, ಹೋರಾಟಗಳನ್ನ ರಾಜ್ಯದ ಜನರು ಎಂದಿಗೂ ಮರೆಯುವಂತಿಲ್ಲ.

ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ಗಡಗಡ ನಡುಗುತ್ತಿತ್ತು. ಅವರಿಂದು ಅಧಿಕಾರದಲ್ಲಿಲ್ಲದಿದ್ದರೂ ಸಹ ಇಂದಿಗೂ ಅನೇಕರು ಯಡಿಯೂರಪ್ಪರೇ ಮುಖ್ಯಮಂತ್ರಿಗಳೆಂದು ಹೇಳುವಷ್ಟು ಜನಪ್ರಿಯತೆ ಪಡೆದಿದ್ದಾರೆ. ದೇವರು ಇನ್ನೂ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ನೀಡಿ ಜನಸೇವೆ ಮಾಡುವ ಶಕ್ತಿ ನೀಡುವಂತೆ ವರ್ಷಂಪ್ರತಿ ಅವರ ಹುಟ್ಟು ದಿನದಂದು ಸೋಮನಾಥನಿಗೆ ವಿಶೇಷ ಪೂಜೆ ನೀಡುತ್ತಾ ಬಂದಿರುವುದಾಗಿ ಹೇಳಿದರು. 

ಬಿಎಸ್ ವೈ ಹುಟ್ಟು ದಿನದ ಪ್ರಯುಕ್ತ ರವೀಂದ್ರ ಶೆಟ್ಟಿ ದಂಪತಿ ದೇರಳಕಟ್ಟೆ ಬೆಳ್ಮದ ಸೇವಾಶ್ರಮದ ವೃದ್ಧರಿಗೆ ವಸ್ತ್ರ , ಫಲಗಳನ್ನು ನೀಡಿ ಸಂಭ್ರಮಾಚರಿಸಿದರು. ಆಶ್ರಮವಾಸಿ ವೃದ್ಧರು ಕುಣಿದು ಸಂಭ್ರಮಾಚರಿಸಿದರು. ಜತೆಗೆ ಬಿಎಸ್ ವೈ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. 

ರವೀಂದ್ರ ಶೆಟ್ಟಿ ಉಳಿದೊಟ್ಟು ಅವರ ಧರ್ಮಪತ್ನಿ ಸೌಮ್ಯ ಕೆ .ಆರ್. ಶೆಟ್ಟಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ರವಿಶಂಕರ್ ಸೋಮೇಶ್ವರ, ಹೇಮಂತ್ ಶೆಟ್ಟಿ, ಜೀವನ್ ತೊಕ್ಕೊಟ್ಟು, ಆನಂದ ಶೆಟ್ಟಿ, ಸಚಿನ್ ಮೋರೆ, ರಾಕೇಶ್ ಉಲ್ಲೋಡಿ, ಜಯರಾಮ ಭಂಡಾರಿ, ಪ್ರಕಾಶ್ ಸಿಂಫೋಣಿ, ದೀಕ್ಷಿತ್, ಸೇವಾಶ್ರಮದ ಟ್ರಸ್ಟಿ ಜಿ.ಆರ್ ಶೆಟ್ಟಿ, ಗೀತಾ ಆರ್ ಶೆಟ್ಟಿ, ಶೀಲಾ ಶೆಟ್ಟಿ ಮೊದಲಾದವರು ಜತೆಗಿದ್ದರು.

Mangalore Special Pooja offered at Someshwara temple for the Birthday of B S Yediyurappa by Ravindra Shetty.