ಬುರ್ಖಾ ಧರಿಸಿ ಮಾಲ್, ಹೊಟೇಲ್, ಸಾರ್ವಜನಿಕ ಜಾಗದಲ್ಲಿ ಓಡಾಡುವಂತಿಲ್ಲ ; ಮುಸ್ಲಿಂ ಯುವಕರ ತಾಲಿಬಾನ್ ಫತ್ವಾ!  

25-02-22 04:04 pm       Mangalore Correspondent   ಕರಾವಳಿ

ಮಂಗಳೂರಿನ ಕೆಲವು ಮುಸ್ಲಿಮ್ ಯುವಕರು ಮುಸ್ಲಿಂ ಮಹಿಳೆಯರಿಗೆ ಫತ್ವಾ ಹೊರಡಿಸಲು ಮುಂದಾಗಿದ್ದಾರೆ. ಬುರ್ಖಾ ಧರಿಸಿಯೂ ಒಬ್ಬಂಟಿ ಓಡಾಟ ಮಾಡುವಂತಿಲ್ಲ. ಮಾಲ್, ಹೊಟೇಲ್ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡುವಂತಿಲ್ಲ ಎಂದು ತಾಲಿಬಾನ್ ರೀತಿ ಫತ್ವಾ ಜಾರಿಗೆ ಹೊರಟಿದ್ದಾರೆ.

ಮಂಗಳೂರು, ಫೆ.25 : ಶಾಲೆಗಳಲ್ಲಿ ಹಿಜಾಬ್ ಧರಿಸಿಯೇ ತೆರಳಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದು, ಅವರ ಪರವಾಗಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಇತ್ತೀಚೆಗೆ ವಿವಾದ ಆಗಿತ್ತು. ಆದರೆ, ಈಗ ಮಂಗಳೂರಿನ ಕೆಲವು ಮುಸ್ಲಿಮ್ ಯುವಕರು ಮುಸ್ಲಿಂ ಮಹಿಳೆಯರಿಗೆ ಫತ್ವಾ ಹೊರಡಿಸಲು ಮುಂದಾಗಿದ್ದಾರೆ. ಬುರ್ಖಾ ಧರಿಸಿಯೂ ಒಬ್ಬಂಟಿ ಓಡಾಟ ಮಾಡುವಂತಿಲ್ಲ. ಮಾಲ್, ಹೊಟೇಲ್ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡುವಂತಿಲ್ಲ ಎಂದು ತಾಲಿಬಾನ್ ರೀತಿ ಫತ್ವಾ ಜಾರಿಗೆ ಹೊರಟಿದ್ದಾರೆ.

ಮುಸ್ಲಿಮ್ ಡಿಫೆನ್ಸ್ ಫೋರ್ಸ್ ಎನ್ನುವ ಹೆಸರಲ್ಲಿ ಮೂಲಭೂತವಾದಿ ಯುವಕರು ಪ್ರತ್ಯೇಕ ಸಂಘಟನೆ ಮಾಡಿಕೊಂಡಿದ್ದು, ಈ ಬಗ್ಗೆ ಮುಸ್ಲಿಂ ಮಹಿಳೆಯರ ಪೋಷಕರಿಗೂ ವಾರ್ನಿಂಗ್ ಕೊಡುತ್ತಿದ್ದೇವೆ. ಜೊತೆಗೆ, ಮುಸ್ಲಿಮ್ ಮಹಿಳೆಯರು ಬುರ್ಖಾ, ಹಿಜಾಬ್ ಧರಿಸಿಯೂ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುತ್ತಿರುವುದು ಕಂಡುಬಂದಲ್ಲಿ ಅವರ ಮೇಲೆ ದಾಳಿ ನಡೆಸಲಾಗುವುದು. ಇದಕ್ಕಾಗಿ ಸಂಘಟನೆ ಮಾಡಿಕೊಳ್ಳಲಾಗಿದೆ ಎಂದು ವಾಟ್ಸಪ್ ಗ್ರೂಪ್ ಗಳಲ್ಲಿ ಯುವಕರು ಬೆದರಿಕೆ ಒಡ್ಡಿದ್ದಾರೆ.

ಕಮಿಷನರ್ ಕಚೇರಿಯಲ್ಲಿ ಹೊಸದಾಗಿ ಆರಂಭಿಸಿರುವ ಜಾಲತಾಣಗಳ ಮೇಲೆ ನಿಗಾ ಇಡುವ ಸೈಬರ್ ಕಚೇರಿ ಸಿಬಂದಿ ಈ ಬಗ್ಗೆ ಪತ್ತೆ ಮಾಡಿದ್ದು, ಈ ಗ್ರೂಪ್ ಹಿಂದೆ ಯಾರಿದ್ದಾರೆ, ಯಾರು ಮಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡುತ್ತೇವೆ. ಮಹಿಳೆಯರನ್ನು ಮತ್ತು ಅವರ ಕುಟುಂಬಸ್ಥರಿಗೆ ಬೆದರಿಕೆ ಹಾಕುವ ರೀತಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಂತಿಲ್ಲ ಎಂದು ಬೇರೆಯವರಿಗೆ ಹೇಳುವುದು ಅಪರಾಧ. ಈ ಬಗ್ಗೆ ನಿಗಾ ಇಟ್ಟಿದ್ದು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ರೆಡಿಯಾಗ್ತಿದೆ ಮುಸ್ಲಿಂ ಡಿಫೆನ್ಸ್ ಟೀಮ್ ; ಬುರ್ಖಾ ಮರೆಯಲ್ಲಿ ಮೈಮರೆಯುವವರೇ ಟಾರ್ಗೆಟ್ ! ಮಾಲ್ ದಾಳಿಗೆ ಸಜ್ಜಾಗಿದ್ಯಂತೆ ಗೂಂಡಾ ಗ್ಯಾಂಗ್ ! 

Muslim Defence force Facebook page threatens Muslim girls not to wear hijab inside malls and hotel in Mangalore. This page had recently posted that they would attack Muslim girls in mall if they were found wearing hijab and roaming with guys for love.