ಬಜರಂಗದಳದಿಂದ ಹೆದ್ದಾರಿ ತಡೆದು ಪ್ರತಿಭಟನೆ ; ವಿಡಿಯೋ ಚಿತ್ರೀಕರಿಸುತ್ತಿದ್ದ ಅಪರಿಚಿತ ಪೊಲೀಸ್ ವಶಕ್ಕೆ

21-02-22 08:26 pm       Mangaluru Correspondent   ಕರಾವಳಿ

ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತನ ಕೊಲೆ ಖಂಡಿಸಿ ತೊಕ್ಕೊಟ್ಟಿನಲ್ಲಿ ಬಜರಂಗದಳ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟಿಸಿದ್ದು ಇದನ್ನ ಮೊಬೈಲಲ್ಲಿ ಚಿತ್ರೀಕರಿಸುತ್ತಿದ್ದ ಅನುಮಾನಸ್ಪದ ಅಪರಿಚಿತನೋರ್ವನನ್ನ ಪೊಲೀಸರು ವಶಕ್ಕೆ ತೆಗೆದಿದ್ದಾರೆ.

ಉಳ್ಳಾಲ, ಫೆ.21: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತನ ಕೊಲೆ ಖಂಡಿಸಿ ತೊಕ್ಕೊಟ್ಟಿನಲ್ಲಿ ಬಜರಂಗದಳ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟಿಸಿದ್ದು ಇದನ್ನ ಮೊಬೈಲಲ್ಲಿ ಚಿತ್ರೀಕರಿಸುತ್ತಿದ್ದ ಅನುಮಾನಸ್ಪದ ಅಪರಿಚಿತನೋರ್ವನನ್ನ ಪೊಲೀಸರು ವಶಕ್ಕೆ ತೆಗೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಬಜರಂಗದಳ ಕೋಟೆ ಪ್ರಖಂಡದ ಸಹ ಸಂಯೋಜಕ ಹರ್ಷ ಕಗ್ಗೊಲೆ ಖಂಡಿಸಿ ವಿಶ್ವ ಹಿಂದು ಪರಿಷತ್ , ಬಜರಂಗದಳ ಉಳ್ಳಾಲ ಪ್ರಖಂಡದ ಕಾರ್ಯಕರ್ತರು ಇಂದು ತೊಕ್ಕೊಟ್ಟಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಅನುಮಾನಾಸ್ಪದ ವ್ಯಕ್ತಿಯೋರ್ವನನ್ನ ಬಜರಂಗದಳದ ಕಾರ್ಯಕರ್ತರು ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ಅಪರಿಚಿತನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ವಿಶ್ವ ಹಿಂದು  ಪರಿಷತ್ , ಬಜರಂಗದಳ ಪ್ರಮುಖರಾದ ಹರಿದಾಸ್ ಮಾಡೂರು, ನಾರಾಯಣ ಕುಂಪಲ,ಗೋಪಾಲ ಕುತ್ತಾರ್ , ಪವಿತ್ರ ಕೆರೆಬೈಲ್, ಅರ್ಜುನ್ ಮಾಡೂರು, ರವಿ ಅಸೈಗೋಳಿ, ಆಶಿಕ್ ಗೋಪಾಲಕೃಷ್ಣ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Harsha Murder in Shivamogga, Bajrang dal members held protest in Ullal Mangalore. Meanwhile one was detained for video shooting.