ಶಿವಮೊಗ್ಗದಲ್ಲಿ ಗಲಾಟೆ, ಹಿಜಾಬ್ ಪ್ರಕರಣ ; ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ರೂಟ್ ಮಾರ್ಚ್, ಟ್ರಾಫಿಕ್ ಜಾಮ್ ನಿಂದ ಹೈರಾಣಾದ ವಿದ್ಯಾರ್ಥಿಗಳು !

21-02-22 12:33 pm       Mangaluru Correspondent   ಕರಾವಳಿ

ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತನ ಕೊಲೆ ಪ್ರಕರಣ, ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ನೂರಾರು ಪೊಲೀಸರು ಬೆಳ್ಳಂಬೆಳಗ್ಗೆ ರೂಟ್ ಮಾರ್ಚ್ ನಡೆಸಿದ್ದಾರೆ.

ಮಂಗಳೂರು, ಫೆ.21: ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತನ ಕೊಲೆ ಪ್ರಕರಣ, ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ನೂರಾರು ಪೊಲೀಸರು ಬೆಳ್ಳಂಬೆಳಗ್ಗೆ ರೂಟ್ ಮಾರ್ಚ್ ನಡೆಸಿದ್ದಾರೆ.

ನಗರದ ಬಳ್ಳಾಲ್ ಬಾಗ್ ನಿಂದ ಬೆಳಗ್ಗೆ 7.30ಕ್ಕೆ ಹೊರಟ 300ಕ್ಕೂ ಹೆಚ್ಚಿದ್ದ ಪೊಲೀಸರು ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆಯಿಂದ ಬಾವುಟಗುಡ್ಡೆ, ಜ್ಯೋತಿ ಸರ್ಕಲ್ ಆಗಿ ಮರಳಿ ಬಲ್ಮಠ, ಹಂಪನಕಟ್ಟೆಯ ಮೂಲಕ ಕ್ಲಾಕ್ ಟವರ್ ಆಗಿ ಕಮಿಷನರ್ ಕಚೇರಿಯ ವರೆಗೆ ಸಾಗಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ನೇತೃತ್ವ ವಹಿಸಿದ್ದಾರೆ.

ಉಡುಪಿ, ಕುಂದಾಪುರದಲ್ಲಿ ಹಿಜಾಬ್ ಗಲಾಟೆ ನಡೆದಿದ್ದರೂ, ಮಂಗಳೂರು ನಗರದಲ್ಲಿ ಹಿಜಾಬ್ ಕುರಿತಾಗಿ ಗುಲ್ಲು ಎದ್ದಿಲ್ಲ. ಆದರೂ, ಕೆಲವು ಕಾಲೇಜುಗಳಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದ ಅನ್ವಯ ವಿದ್ಯಾರ್ಥಿನಿಯರು ಹಿಂದಕ್ಕೆ ತೆರಳಿದ ಘಟನೆ ನಡೆದಿತ್ತು. ಹಿಜಾಬ್ ಗಲಾಟೆ ಮರುಕಳಿಸಬಾರದು, ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿಯಲ್ಲಿದ್ದಾರೆ ಎಂದು ತೋರಿಸುವುದು, ವಿದ್ಯಾರ್ಥಿಗಳಲ್ಲಿಯೂ ಭಯ ಮೂಡಿಸುವ ಯತ್ನವಾಗಿ ಈ ಕೆಲಸ ಮಾಡಲಾಗಿದೆ. ಶಿವಮೊಗ್ಗದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನ ಕೊಲೆಯಾಗಿ ಕೋಮು ಗಲಭೆ ಹೊತ್ತಿಕೊಂಡಿದ್ದರಿಂದ ಕರಾವಳಿಯಲ್ಲೂ ಎಚ್ಚರ ಮೂಡಿಸುವುದಕ್ಕಾಗಿ ಪೊಲೀಸರ ರೂಟ್ ಮಾರ್ಚ್ ನಡೆಸಲಾಗಿದೆ.

ನಗರದಲ್ಲಿ ಪೂರ್ತಿ ಟ್ರಾಫಿಕ್ ಜಾಮ್

ದಿಢೀರ್ ಆಗಿ ಪೊಲೀಸರು ರಸ್ತೆಗಳನ್ನು ಬ್ಲಾಕ್ ಮಾಡಿ, ರೂಟ್ ಮಾರ್ಚ್ ನಡೆಸಿದ್ದರಿಂದ ಮಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಪೂರ್ತಿಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯನ್ನು ಒಂದು ಬದಿಯಿಂದ ಬ್ಲಾಕ್ ಮಾಡಿದ್ದರಿಂದ ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಕೆನರಾ, ಅಲೋಶಿಯಸ್ ನಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿಗೆ ಪೂರ್ವಭಾವಿ ಪರೀಕ್ಷೆ ಇದ್ದುದರಿಂದ ಮಕ್ಕಳು ಸಕಾಲದಲ್ಲಿ ತಲುಪಲಾಗದೆ ಸಂಕಷ್ಟ ಅನುಭವಿಸಿದರು. 7.30ರಿಂದ 9 ಗಂಟೆ ವರೆಗೂ ರೂಟ್ ಮಾರ್ಚ್ ನಿಂದಾಗಿ ಟ್ರಾಫಿಕ್ ಜಾಮ್ ಆಗಿದ್ದು ಕೆಲಸಕ್ಕೆ ತೆರಳುವ ಸಾರ್ವಜನಿಕರು, ಶಾಲೆಗಳಿಗೆ ತೆರಳುತ್ತಿದ್ದ ವಾಹನಗಳು ಟ್ರಾಫಿಕ್ ಮಧ್ಯೆ ಬಾಕಿಯಾಗಿತ್ತು. ವಾಹನ ಸಂಚಾರಕ್ಕೆ ಬದಲಿ ರಸ್ತೆ ಮಾಡದೆ ಬಂದ್ ಮಾಡಿದ್ದರಿಂದ ಸಂಕಷ್ಟ ಉಂಟಾಗಿತ್ತು. 

The city police on Monday February 21 held a peace march in the wake of the controversial Hijab versus saffron shawl issue that has rocked the state. The police led by commissioner N Shashi Kumar and DCP (law and order) Hariram Shankar marched Ballalbagh to the police commissionerate via Ambedkar circle. Close to 300 police staff participated in the march. Among them were personnel of central subdivision, traffic police, CCB and CCRB staff.