ಸರಕಾರಿ ಶಾಲೆಯಲ್ಲಿ ನಮಾಜ್ ವಿಡಿಯೋ ವೈರಲ್ ; ತುರ್ತು ಸಭೆ ನಡೆಸಿದ ಶಿಕ್ಷಣ ಅಧಿಕಾರಿಗಳು ; ಶಾಲಾಡಳಿತ ಮಂಡಳಿಗೆ ವಾರ್ನಿಂಗ್ 

12-02-22 09:54 pm       Mangalore Correspondent   ಕರಾವಳಿ

ಕಡಬ ತಾಲೂಕಿನ ಅಂಕತ್ತಡ್ಕ  ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತರಗತಿಯೊಳಗೆ ನಮಾಜ್ ಮಾಡುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ತಾಲೂಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು ತುರ್ತು ಶಾಲಾಡಳಿತ ಮಂಡಳಿಯ ಜೊತೆ ಸಭೆ ನಡೆಸಿದ್ದಾರೆ.

ಪುತ್ತೂರು, ಫೆ.12 : ಕಡಬ ತಾಲೂಕಿನ ಅಂಕತ್ತಡ್ಕ  ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತರಗತಿಯೊಳಗೆ ನಮಾಜ್ ಮಾಡುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ತಾಲೂಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು ತುರ್ತು ಶಾಲಾಡಳಿತ ಮಂಡಳಿಯ ಜೊತೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಶಾಲೆಯ ಆವರಣನ್ನು ಶೈಕ್ಷಣಿಕ ಉದ್ದೇಶಕ್ಕೆ ಹೊರತುಪಡಿಸಿ, ಇತರ ಯಾವುದೇ ಚಟುವಟಿಕೆ ಕೈಗೊಳ್ಳದಂತೆ ನಿರ್ಬಂಧಿಸಲು ನಿರ್ಧಾರ ಕೈಗೊಳ್ಳಲಾಗಿದೆ. ವಿಡಿಯೋ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಈ ವಿಚಾರವನ್ನು ಪುತ್ತೂರು ಬಿಇಓ ಸಿ. ಲೋಕೇಶ್ ಗಮನಕ್ಕೆ ತಂದಿದ್ದು ಅಧಿಕಾರಿ ಶಾಲೆಗೆ ಬಂದು ಸಭೆ ನಡೆಸಿದ್ದಾರೆ. ಅಲ್ಲದೆ, ಶಾಲೆಯಲ್ಲಿ ಈ ರೀತಿಯ ಯಾವುದೇ ಚಟುವಟಿಕೆ ನಡೆಸದಂತೆ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. 

ಶಾಲಾ ಆವರಣದಲ್ಲಿ ಶೈಕ್ಷಣಿಕ ವಾತಾವರಣದ ಮೇಲೆ ಅಡ್ಡಿಯಾಗದಂತೆ ನೋಡಿಕೊಳ್ಳುವುದಾಗಿ ಎಸ್ ಡಿಎಂಸಿ ಸದಸ್ಯರು ಒಮ್ಮತ ವ್ಯಕ್ತಪಡಿಸಿದ್ದಾರೆ. ಸಭೆಯ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಮೊಬೈಲ್ ಫೋನ್ ನಿರ್ಬಂಧಿಸಲಾಗಿತ್ತು. ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮತ್ತು ಸಾರ್ವಜನಿಕರು ಶಾಲೆಯ ಹೊರಗಡೆ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಹಿಜಾಬ್ ಕಿಚ್ಚಿನ ಬೆನ್ನಲ್ಲೇ ಸರಕಾರಿ ಶಾಲೆಯಲ್ಲಿ ನಮಾಜ್ ! ಕಡಬದ ವಿದ್ಯಾರ್ಥಿಗಳ ನಮಾಜ್ ವಿಡಿಯೋ ವೈರಲ್ ! 

Mangalore Namaz inside government school in Kadaba education officers warn teachers. A video of five students performing namaz inside the classroom had gone viral on social media.