ಬ್ರೇಕಿಂಗ್ ನ್ಯೂಸ್
11-02-22 07:24 pm HK Desk news ಕರಾವಳಿ
ಉಡುಪಿ, ಫೆ.11 : ಹಿಜಾಬ್ ಹೋರಾಟದ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ. ದೊಡ್ಡ ಮಟ್ಟದಲ್ಲಿ ಗಲಭೆ ಎಬ್ಬಿಸಲು ಷಡ್ಯಂತ್ರ ಮಾಡಲಾಗಿತ್ತು. ಹೋರಾಟ ತೀವ್ರಗೊಳಿಸಲು ಮತ್ತು ಇಲ್ಲಿನ ವಿದ್ಯಾರ್ಥಿನಿಯರ ಮೇಲೆ ಪ್ರಭಾವ ಬೀರಲು ಹೊರಗಿನವರು ಉಡುಪಿಗೆ ಬಂದಿದ್ದರು. ಇದಕ್ಕಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಲು ಎನ್ಐಎಗೆ ಒಪ್ಪಿಸಬೇಕು ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, 2021 ರ ನವೆಂಬರ್ ತಿಂಗಳಲ್ಲೇ ಹೋರಾಟದ ರೂಪುರೇಷೆ ನಡೆದಿತ್ತು. ಹೈದರಾಬಾದ್, ಕೇರಳದಿಂದ ತಂಡ ಉಡುಪಿಗೆ ಬಂದು ಇಲ್ಲಿನ ಶಾಂತಿಯ ವಾತಾವರಣ ಕೆಡಿಸಲು ಪ್ಲಾನ್ ಹಾಕಿತ್ತು. ಹೊರ ರಾಜ್ಯಗಳಿಂದ ಟ್ರೈನರ್ಸ್ ಬಂದಿದ್ದಾರೆಂಬ ಮಾಹಿತಿ ಇದೆ. ಹೊರಗಿನಿಂದ ಇಲ್ಲಿಗೆ ಬಂದು ಸಂಚು ನಡೆಸುವ ಉದ್ದೇಶ ಏನಿದೆ. ಉಡುಪಿಯಲ್ಲಿರುವ ಮುಸ್ಲಿಂ ಒಕ್ಕೂಟ ಆಗಲೀ, ಯಾವುದೇ ಮುಸ್ಲಿಂ ವ್ಯಕ್ತಿಯಾಗಲೀ ಈ ಕೆಲಸ ಮಾಡಿದ್ದಲ್ಲ. ಇಲ್ಲಿನ ಮುಸ್ಲಿಮರಲ್ಲಿ ಆ ರೀತಿಯ ಮನಸ್ಥಿತಿ ಇಲ್ಲ.
ಉಡುಪಿ ಜಿಲ್ಲೆಯ ಮುಸ್ಲಿಂ ಮುಖಂಡರಲ್ಲಿ ಮಾತನಾಡಿದ್ದೇನೆ. ಅವರು ನಮ್ಮ ಜೊತೆ ಚೆನ್ನಾಗಿದ್ದಾರೆ. ಆದರೆ ಹಿಜಾಬ್ ವಿವಾದ ಎಬ್ಬಿಸಿದ್ದರ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ. ವಿದ್ಯಾರ್ಥಿನಿಯರು ಹೊರಗೆ ಕೂತ ದಿನವೇ ಇಲ್ಲಿನ ಮಾಧ್ಯಮಗಳಲ್ಲಿ ಬರುವ ಮೊದಲೇ ವಿದೇಶಿ ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿಯಾಗುತ್ತದೆ ಅಂದರೆ ನಾವು ಅರ್ಥ ಮಾಡಬೇಕು. ಇದರಲ್ಲಿ ದೇಶ ಒಡೆಯುವ, ದೇಶದ ಘನತೆಗೆ ಕುಂದು ತರುವಂತಹ ಸಂಚು ಇರುವುದು ಕಂಡುಬರುತ್ತದೆ. ಉಡುಪಿಯಲ್ಲಿ ಆರಂಭಗೊಂಡ ವಿವಾದ ಇಡೀ ದೇಶಕ್ಕೆ ವ್ಯಾಪಿಸಿದೆ. ಇದರ ಹಿಂದಿರುವ ಸಂಚನ್ನು ಬಯಲು ಮಾಡಬೇಕು. ಈ ಬಗ್ಗೆ ಗೃಹ ಸಚಿವರಿಗೆ ದೂರು ಕೊಡುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ವಿದ್ಯಾರ್ಥಿನಿಯರು ಟ್ವೀಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಾನೂನು ಬಾಹಿರ ಎಂದು ಬರೆದುಕೊಂಡಿದ್ದಾರೆ. ಕ್ಯಾಂಪಸ್ ಫ್ರಂಟ್ ಸಂಘಟನೆ ಈ ವಿದ್ಯಾರ್ಥಿನಿಯರನ್ನು ದಾಳ ಮಾಡಿಕೊಂಡಿದ್ದಾರೆ ಎಂದರು.
ಇಷ್ಟು ದಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಹೋರಾಟಕ್ಕೆ ಬೆಂಬಲ ನೀಡಿತ್ತು. ಪ್ರಕರಣಕ್ಕೆ ಸಿದ್ದರಾಮಯ್ಯ ಎಂಟ್ರಿಯಾಗುವ ಮೂಲಕ ಕಾಂಗ್ರೆಸ್ ಕೂಡ ಎಂಟ್ರಿಯಾಗಿದೆ. ಈಗ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕಾಂಗ್ರೆಸಿನ ನಿಲುವು ಏನು ಎಂಬುದು ಗೊತ್ತಾಗಿದೆ. ನಾವು ದೇಶದಲ್ಲಿ ಹಿಜಬ್ ಸಂಪೂರ್ಣ ಬ್ಯಾನ್ ಮಾಡಲು ಮುಂದಾಗಿಲ್ಲ. ನಾವು ತರಗತಿಗೆ ಹಿಜಬ್ ಬೇಡ ಎಂಬುದು ಮಾತ್ರ ನಮ್ಮ ನಿಲುವು. ಆದರೆ ಇವರು ದೇಶದಲ್ಲಿ ದೊಡ್ಡ ರಾದ್ಧಾಂತ ಆಗಿರುವ ರೀತಿ ವರ್ತಿಸುತ್ತಿದ್ದಾರೆ ಎಂದು ರಘುಪತಿ ಭಟ್ ಹೇಳಿದರು.
MLA Raghupati Bhat demanded NIA investigation into the Hijab controversy that originated in the government PU college for girls in the city by six Muslim students. In a statement given to media on Friday February 11, Bhat said, “Even after the high court gave the order, they have approached the Supreme Court. They have utilized the opportunity of appealing in higher court. This is not done by the students themselves. They are supported by Campus Front of India (CFI). We have given these evidences to the department.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm