ಮುಸ್ಲಿಂ ಮತಕ್ಕಾಗಿ ಎಸ್ಡಿಪಿಐ ಹಿಜಾಬ್ ವಿವಾದ ಸೃಷ್ಟಿಸುತ್ತಿದೆ ; ರಘುಪತಿ ಭಟ್ 

09-02-22 09:36 pm       HK Desk news   ಕರಾವಳಿ

ರಾಜ್ಯದಲ್ಲಿ ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದು ಎಸ್.ಡಿ.ಪಿ.ಐ ಪಕ್ಷ. ಮುಸ್ಲಿಂ ಮತಗಳನ್ನು ಸೆಳೆಯುವುದಕ್ಕಾಗಿ ಇಂತಹ ವಿವಾದವನ್ನು ಸೃಷ್ಟಿಸಿದೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಉಡುಪಿ, ಫೆ.9 : ರಾಜ್ಯದಲ್ಲಿ ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದು ಎಸ್.ಡಿ.ಪಿ.ಐ ಪಕ್ಷ. ಮುಸ್ಲಿಂ ಮತಗಳನ್ನು ಸೆಳೆಯುವುದಕ್ಕಾಗಿ ಇಂತಹ ವಿವಾದವನ್ನು ಸೃಷ್ಟಿಸಿದೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ. 

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಮಧ್ಯೆ ಮುಸ್ಲಿಂ ಮತಗಳಿಗಾಗಿ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಹಿಜಾಬ್ ವಿವಾದದ ಹಿಂದಿರುವ ಷಡ್ಯಂತ್ರವನ್ನು ಬಯಳಿಗೆಳೆಯಬೇಕಿದೆ ಎಂದು ಹೇಳಿದ್ದಾರೆ. ಕಾಪು ಪುರಸಭೆಯಲ್ಲಿ ಎಸ್.ಡಿ.ಪಿ.ಐ ಮೂರು ಸ್ಥಾನವನ್ನು ಗೆದ್ದಿತ್ತು. ಮುಸ್ಲಿಂ ಪ್ರಾಬಲ್ಯ ಇರುವಲ್ಲಿ ಮತ್ತಷ್ಟು ಸ್ಥಾನ ಗೆಲ್ಲಲು ಕಸರತ್ತು ನಡೆಸಿದೆ. 

ಉಡುಪಿ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಇದುವರೆಗೂ ಇಲ್ಲದಿದ್ದ ಹಿಜಾಬ್ ವಿವಾದವನ್ನು ಈಗ ಎಸ್ಡಿಪಿಐ ಸೃಷ್ಟಿಸಿದೆ. ಇದರಿಂದ ಮತ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ಅದರ ಜೊತೆಗೆ ಕೈಜೋಡಿಸಿದೆ. ಆರಂಭದಲ್ಲಿ ಕಾಂಗ್ರೆಸ್ ನಾಯಕರು ಹಿಜಾಬ್ ವಿರುದ್ದ ನಿಂತಿದ್ದರು. ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಅವರಿಗೆ ಬೆಂಬಲಿಸುತ್ತಿದ್ದಾರೆ ಎಂದರು. ಬಿಜೆಪಿ ಚುನಾವಣೆ ಹಿನ್ನೆಲೆಯಲ್ಲಿ ಈ ವಿವಾದವನ್ನು ಹಬ್ಬಿಸುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ರಘುಪತಿ ಭಟ್, ಶಿಕ್ಷಣ ಕೇಂದ್ರವಾಗಿದ್ದ ಉಡುಪಿಯ ಸರಕಾರಿ ಕಾಲೇಜು ಈಗ ಧಾರ್ಮಿಕ ವಿಚಾರದಲ್ಲಿ ವಿವಾದಕ್ಕೆ ತುತ್ತಾಗಿರುವುದು ವಿಷಾದನೀಯ. ಈ ವಿವಾದ ಯಾವಾಗ ಮುಗಿಯುತ್ತದೆ ಎಂದು ಕಾಯುತ್ತಿದ್ದೇವೆ.

ಎರಡು ಗುಂಪಿನ ವಿದ್ಯಾರ್ಥಿಗಳು ನ್ಯಾಯಾಲಯದ ತೀರ್ಪು ಬರುವವರೆಗೆ ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು. ಯಾವುದೇ ತೀರ್ಪು ಬಂದರೂ, ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಹಿಜಾಬ್ ವಿರುದ್ದ ತೀರ್ಪು ಬಂದರೆ ಹೈಕೋರ್ಟ್ ಗೆ ಹೋಗಲು ಅವರಿಗೆ ಅವಕಾಶ ಇರುವಂತೆ ಹಿಜಾಬ್ ಪರವಾಗಿ ಬಂದರೆ ಸರಕಾರವು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದ್ದು ಒಂದೆರಡು ದಿನಗಳಲ್ಲಿ ಸರಕಾರದ ಪರವಾಗಿ ತೀರ್ಪು ಬರುವ ನಿರೀಕ್ಷೆಯಿದೆ. ನ್ಯಾಯಾಲಯಕ್ಕಿಂತ ಸರಕಾರ ದೊಡ್ಡದ್ದಲ್ಲ. ಯಾವುದೇ ರೀತಿ ತೀರ್ಪು ಬಂದರೂ ಸರಕಾರ ಅದನ್ನು ಪಾಲಿಸಲಿದೆ. 

ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಳಿದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೇ ಇರಲು ಒಪ್ಪಿದ್ದರೂ ಈ ಆರು ಮಂದಿ ವಿದ್ಯಾರ್ಥನಿಯರು ಹಿಜಾಬ್ ಧರಿಸಲು ಪಟ್ಟು ಹಿಡಿದಿರುವುದರಿಂದ ಈ ವಿವಾದ ಸೃಷ್ಟಿಯಾಗಿದೆ. ಇದೀಗ ಈ ವಿವಾದ ರಾಜ್ಯದಾದ್ಯಂತ ವ್ಯಾಪಿಸಿದೆ. ಇದಕ್ಕೆಲ್ಲ ಇಲ್ಲಿ‌ನ ವಿದ್ಯಾರ್ಥಿನಿಯರೇ ಕಾರಣ ಎಂದವರು ಆರೋಪಿಸಿದರು.

Hijab row is a SDPI vote Bank game slams MLA Raghupathi Bhat in Udupi. Amid an escalating row on allowing students to wear hijabs in educational institutions, the Karnataka government on Tuesday announced that all high schools and colleges in the state will remain shut for three days between February 9 and February 11.