ನಾನೇ ಬೇರೆ, ನಮ್ಮದು ಪ್ರತ್ಯೇಕ ಅನ್ನೋದು ಅಪಾಯಕಾರಿ, ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು ; ಸಿಟಿ ರವಿ ಪ್ರಶ್ನೆ 

08-02-22 10:29 pm       HK Desk news   ಕರಾವಳಿ

ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು ಎನ್ನುವ ಪ್ರಶ್ನೆ ಕೇಳಬೇಕಾಗುತ್ತದೆ.‌ ಹಿಜಾಬ್ ಬೇಕೂಂತ ಹೇಳಿದರೆ, ಅದನ್ನೇ ಶಾಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹಿಜಾಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚಿಕ್ಕಮಗಳೂರು, ಫೆ.8 : ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು ಎನ್ನುವ ಪ್ರಶ್ನೆ ಕೇಳಬೇಕಾಗುತ್ತದೆ.‌ ಹಿಜಾಬ್ ಬೇಕೂಂತ ಹೇಳಿದರೆ, ಅದನ್ನೇ ಶಾಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹಿಜಾಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾನೇ ಬೇರೇ ಎನ್ನುವ ಮನಸ್ಥಿತಿ ಅಪಾಯಕಾರಿ. ಬಹಳ ಸಂಕಷ್ಟವನ್ನು ಅನುಭವಿಸಿ ಎದುರಿಸುತ್ತಾ ಬಂದಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ.‌ ಸಂಕಷ್ಟ ಅನುಭವಿಸಿ ಪ್ರತೀಕಾರ ಮಾಡದಿರುವ ರಾಷ್ಟ್ರಕೂಡ ಭಾರತ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವ ಘಟನೆಗಳು ಜಗತ್ತಿನೆಲ್ಲೆಡೆ ಕಂಡುಬರುತ್ತದೆ. ಜಗತ್ತಿನಾದ್ಯಂತ ಅಲ್ಪಸಂಖ್ಯಾತರು ನಮಗೆ ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಾರೆ.‌

ಆದರೆ ದುರ್ದೈವ, ನಮ್ಮ ದೇಶದಲ್ಲಿ ಬಹುಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ.‌ ಬಹುಸಂಖ್ಯಾತರು ಸಮಾನತೆ ಇರಲಿ ಎಂದು ಹೇಳುತ್ತಿದ್ದಾರೆ.‌ ಅಲ್ಪಸಂಖ್ಯಾತರು ನಮ್ಮದೇ ಬೇರೆ, ನಮ್ಮದೇ ನಡೀಬೇಕು ಎಂದು ಹೇಳುತ್ತಿದ್ದಾರೆ.‌ ಜಗತ್ತಿನಲ್ಲಿ ಎಲ್ಲೂ ನಡೆಯಲು ಸಾಧ್ಯವಾಗದ್ದು ಭಾರತದಲ್ಲಿ ಮಾತ್ರ ನಡೀತಿದೆ. ಅದಕೊಸ್ಕರನೇ ಶಾಲೆಯಲ್ಲಿ ಯೂನಿಫಾರಂ ಇರುವುದು. 

ಅಲ್ಲಿ ನಾನು ಬೇರೆ ಎಂದರೆ ಅಲ್ಲಿಂದಲೇ ಪ್ರತ್ಯೇಕತೆ ಹುಟ್ಟಿಕೊಳ್ಳುತ್ತದೆ. ನಾನೇ ಬೇರೆ, ನೀನೇ ಬೇರೆ ಎನ್ನುವುದು ಜಾತ್ಯಾತೀತತೆ ಆಗಲ್ಲ ಎಂದು ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

Chikkamagaluru, Why is there not a controversy this year. BJP's national general secretary CT Ravi has expressed outrage against the hijab saying that the hijab uniforms in school and college. Speaking to reporters, he said the mood of being myself is dangerous. India is one of the world's hardest hit countries.