ಬ್ರೇಕಿಂಗ್ ನ್ಯೂಸ್
31-01-22 10:14 pm Mangalore Correspondent ಕರಾವಳಿ
ಮಂಗಳೂರು, ಜ.31 : ಹಿಂದುತ್ವ ಸಿದ್ಧಾಂತ ಅನ್ನುವುದು ದೇಶದಲ್ಲೀಗ ರಾಷ್ಟ್ರೀಯ ಹಿತಾಸಕ್ತಿಯಾಗಿದೆ. ಇದು ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ, ಹಿಂದುತ್ವ ಅಂದರೆ ಕೆಕ್ಕರಿಸಿಕೊಂಡು ನೋಡುತ್ತಿದ್ದ ರಾಜಕೀಯ ಪಕ್ಷಗಳು ಕೂಡ ಹಿಂದುತ್ವದ ಪ್ರತಿಪಾದನೆಗೆ ಮುಂದಾಗಿವೆ. ಒಂದೊಮ್ಮೆ ವಿರೋಧಿ ಭಾವನೆಯಿದ್ದ ರಾಷ್ಟ್ರೀಯ ನಾಯಕರು ತಮ್ಮನ್ನು ತಾವು ಹಿಂದುಗಳೆಂದು ಸಾಬೀತು ಪಡಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ದೇಶದಲ್ಲಾಗಿರುವ ಅತ್ಯಂತ ಮಹತ್ವದ ಬದಲಾವಣೆ ಎಂದು ಆರೆಸ್ಸೆಸ್ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ರಾಮಮಾಧವ್ ಹೇಳಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಸಿಟಿಜನ್ ಕೌನ್ಸಿಲ್ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ The Hinduthva Paradigm ಎಂಬ ತಮ್ಮದೇ ಪುಸ್ತಕವನ್ನು ಅನಾವರಣಗೊಳಿಸಿ ರಾಮಮಾಧವ್ ಮಾತನಾಡಿದರು.

ಇತ್ತೀಚೆಗೆ ರಾಹುಲ್ ಗಾಂಧಿಯವರು ತಾನೊಬ್ಬ ನೈಜ ಹಿಂದು, ಯೋಗಿ ಆದಿತ್ಯನಾಥ್ ಅಲ್ಲ ಎನ್ನುವ ಹೇಳಿಕೆ ನೀಡಿದ್ದು ನೀವು ಕೇಳಿರಬಹುದು. ಈ ರೀತಿಯ ಹೇಳಿಕೆಯನ್ನು ಹತ್ತು ವರ್ಷಗಳ ಹಿಂದೆ ನಾವು ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಹಿಂದುತ್ವ ಎಂಬ ಪದವನ್ನು ಕೇಳಿದರೆ ಉರಿದು ಬೀಳುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈಗ ತಮ್ಮನ್ನು ಹಿಂದುತ್ವದ ಧಾಟಿಯಲ್ಲಿ ಸೇರಿಸಿಕೊಂಡಿದ್ದಾರೆ. ನಾನು ಕೂಡ ದುರ್ಗಾ ಮಾತೆಯ ಭಕ್ತೆ ಎಂದು ಹೇಳಿ ಜನರನ್ನು ಓಲೈಸಲು ತೊಡಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಅಯೋಧ್ಯೆಗೆ ತೆರಳುವ ಹಿರಿಯ ನಾಗರಿಕರ ಯಾತ್ರೆಗಾಗಿ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲಾ, ಕೇಜ್ರಿವಾಲ್ ತಾವೇ ಮೊದಲಿಗೆ ಅಯೋಧ್ಯೆ ಯಾತ್ರೆ ಕೈಗೊಂಡು ಆಕರ್ಷಣೆ ಮೂಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಸರಳ. ದೇಶದ ಕೋಟ್ಯಂತರ ಜನರು ತಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಗುರುತಿಸುವಿಕೆಯನ್ನು ತೋರಿಸಲು ಮುಂದಾಗುತ್ತಿದ್ದಾರೆ. ಹೀಗಾಗಿ ತಮ್ಮನ್ನು ಹಿಂದುಗಳೆಂದು ಹೇಳಿಕೊಳ್ಳಲು ಭಯ ಪಟ್ಟುಕೊಳ್ಳುವ, ಮುಜುಗರ ತೋರುತ್ತಿದ್ದ ದಿನಗಳು ಮಾಯವಾಗಿವೆ.

ಈವತ್ತಿನ ಭಾರತೀಯರು ತಮ್ಮ ಸಂಸ್ಕೃತಿ, ಇತಿಹಾಸ, ನಾಗರಿಕತೆಯನ್ನು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದಾರೆ. ಕಳೆದ ಬಾರಿ ರಾಮ ಮಂದಿರಕ್ಕಾಗಿ ಆರೆಸ್ಸೆಸ್ ದೇಣಿಗೆ ಸಂಗ್ರಹಕ್ಕೆ ತೊಡಗಿದಾಗ, ದೇಶದಲ್ಲಿ 13 ಕೋಟಿ ಜನರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡಿದ್ದರು. ಇಡೀ ಜಗತ್ತಿನಲ್ಲಿ ಈ ರೀತಿ ಒಂದು ಸಂಸ್ಕೃತಿ, ನಾಗರಿಕತೆ, ಇತಿಹಾಸದ ಪರಂಪರೆಯನ್ನು ಉಳಿಸಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಒಗ್ಗೂಡಿರುವ ಇತಿಹಾಸ ಬೇರೆಲ್ಲೂ ಇಲ್ಲ. ದೇಶದ ಅಸ್ಮಿತೆಯಾಗಿರುವ ಅಯೋಧ್ಯೆಯ ರಾಮ ಮಂದಿರಕ್ಕಾಗಿ ಹಿಂದು, ಮುಸ್ಲಿಂ, ಕ್ರಿಸ್ತಿಯನ್ ಹೀಗೆ ಎಲ್ಲ ಮತ- ಧರ್ಮಗಳ ಜನರು ಕೂಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ರಾಮಮಾಧವ್, ಸೆಕ್ಯುಲರಿಸಂ ವಾದದ ಗ್ರೇಟ್ ಚಾಂಪ್ಯನ್ ಗಳು ಕೂಡ ಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಶಶಿ ತರೂರ್ ರೀತಿಯ ವ್ಯಕ್ತಿಗಳು ಹತ್ತು ವರ್ಷಗಳ ಹಿಂದೆ ಹಿಂದುತ್ವದ ಬಗ್ಗೆ ಪುಸ್ತಕ ಬರೆಯುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿತ್ತೇ ? ಅವರಿಂದ ಸೆಕ್ಯುಲರಿಸಂ ಕುರಿತ ಪುಸ್ತಕವನ್ನಷ್ಟೇ ನಿರೀಕ್ಷಿಸಬಹುದಿತ್ತು. ಸೆಕ್ಯುಲರಿಸಂ ಅನ್ನುವುದು ಕೆಟ್ಟದ್ದಲ್ಲ. ಆದರೆ ನಮ್ಮ ದೇಶದಲ್ಲಿ ಜಾತ್ಯತೀತ ಹೆಸರಲ್ಲಿ ಅನುಸರಿಸುತ್ತಿರುವ ತಪ್ಪು ನಡೆಗಳು, ತಾರತಮ್ಯ ಧೋರಣೆಯಿಂದಷ್ಟೇ ಅದು ಕೆಟ್ಟದಾಗಿರುವುದು ಎಂದು ಹೇಳಿದರು.

ಅನ್ಸಾರಿಯಿಂದ ಭಾರತ ವಿರೋಧಿ ಭಾವನೆ
ಹಿಂದುತ್ವದ ಪರಿಕಲ್ಪನೆ ಹೆಚ್ಚು ಬಲಗೊಳ್ಳುತ್ತಿರುವುದನ್ನು ಅರಗಿಸಿಕೊಳ್ಳಲಾಗದವರು ಅಸಹಿಷ್ಣುತೆಯ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ಭಾರತದಲ್ಲಿ ಭಯದ ವಾತಾವರಣ ಇರುವುದಾಗಿ ವಿದೇಶದಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೇಗಿದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಅವರು ಹಬ್ಬಿಸುತ್ತಿರುವ ಸುಳ್ಳುಗಳನ್ನು ಈಗ ಯಾರೂ ನಂಬುವವರಿಲ್ಲ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ದೇಶದ ಬಗ್ಗೆ ಸುಳ್ಳುಗಳನ್ನು ಹಬ್ಬಿಸುತ್ತಿರುವ ಪ್ರಮುಖರಲ್ಲಿ ಒಬ್ಬರು. ಅನ್ಸಾರಿ ಇಂಡಿಯನ್ ಫಾರಿನ್ ಸರ್ವಿಸ್(ಐಎಫ್ಎಸ್) ಮಾಡಿ, ವಿದೇಶಾಂಗ ಇಲಾಖೆಯಲ್ಲಿ ಅಧಿಕಾರಿಯಾಗಿದ್ದವರು. ಆದರೆ, ಅಂಥ ವ್ಯಕ್ತಿ ಆಯ್ದುಕೊಂಡದ್ದು ಭಾರತ ವಿರೋಧಿ ನಿಲುವು ಹೊಂದಿರುವ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲನ್ನು. ದೇಶ ಇತ್ತ ಗಣರಾಜ್ಯದ ಸಡಗರದಲ್ಲಿದ್ದರೆ, ಹಮೀದ್ ಅನ್ಸಾರಿ ಎಂಬ ವ್ಯಕ್ತಿ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲಿನ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇಶದ ಸ್ಥಿತಿಗತಿ ಬಗ್ಗೆ, ದೇಶದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆ ಉದ್ದೀಪನ ಆಗುತ್ತಿರುವುದನ್ನು ಸಹಿಸದೆ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡಿದ್ದಾರೆ. ನಾವು ಮಾಡುವ ಸಾಂಸ್ಕೃತಿಕ ರಾಷ್ಟ್ರೀಯವಾದ ಎಂಬ ಪದಬಳಕೆಯ ಬದಲು ಅವರು ಹಿಂದು ಬಹುಸಂಖ್ಯಾತರು ಎಂದು ಹೇಳಿ ದೇಶದಲ್ಲೀಗ ಹಿಂದುಗಳ ಆಡಳಿತ ಇದೆಯೆಂದು ಹೇಳತೊಡಗಿದ್ದಾರೆ. ಅನ್ಸಾರಿಯ ವಾದ ಹೇಗಿದೆ ಅಂದರೆ, ದೇಶ ವಿಭಜನೆಯ ಕಾಲದಲ್ಲಿ ಮೊಹಮ್ಮದ್ ಆಲಿ ಜಿನ್ನಾ ಮಾಡಿದ್ದ ವಿಭಜನ ರಾಜಕೀಯದಂತಿದೆ ಎಂದು ರಾಮಮಾಧವ್ ಟೀಕಿಸಿದರು.
ದೇಶದಲ್ಲಿ ವಲಸಿಗರಿಲ್ಲ, ಎಲ್ಲರೂ ಭಾರತೀಯರೇ
ದೇಶದಲ್ಲೀಗ ವಲಸಿಗರು ಯಾರಿದ್ದಾರೆ.. ನಾಗರಿಕ ರಾಷ್ಟ್ರೀಯವಾದ ಎನ್ನುವ ಪ್ರಶ್ನೆ ಎಲ್ಲಿದೆ. ಈ ರೀತಿಯ ಪ್ರಶ್ನೆ ಎತ್ತುವ ಮಂದಿ ತಾವು ಕೂಡ ಈ ದೇಶದ ಆಂತರಿಕ ಭಾಗಗಳಲ್ಲಿ ಒಂದೆನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ತಮ್ಮನ್ನು ವಲಸಿಗರೆಂದೇ ಭಾವಿಸಿದ್ದಾರೆ. ನಾಗರಿಕ ರಾಷ್ಟ್ರೀಯವಾದದ ಪರ ವಾದ ಮಾಡುವ ಮಂದಿ ಯಾವುದೇ ನಿರ್ದಿಷ್ಟ ಮತಕ್ಕೆ ಸೇರಿದವರಲ್ಲ, ಬದಲಿಗೆ ಕೋಮುವಾದಿ ಮನಸ್ಥಿತಿ ಹೊಂದಿರುತ್ತಾರೆ. ದೇಶದಲ್ಲಿರುವ ಹಿಂದು ಮತ್ತು ಕ್ರಿಸ್ತಿಯನ್ನರು ಯಾರು ಕೂಡ ಹೊರಗಿನಿಂದ ಬಂದವರಲ್ಲ. ಕೆಲವು ನೂರು ವರ್ಷಗಳ ಹಿಂದೆ ಬಂದಿದ್ದ ವಲಸಿಗರಲ್ಲಿ ಬಹಳಷ್ಟು ಮಂದಿ ಹಿಂದೆ ಹೋಗಿದ್ದಾರೆ. ಉಳಿದವರು ಇಲ್ಲಿನ ಭಾರತೀಯರ ಜೊತೆ ಮಿಳಿತಗೊಂಡಿದ್ದಾರೆ.
1500 ವರ್ಷಗಳ ಹಿಂದೆ ಬಂದಿದ್ದ ವಲಸಿಗರಿಂದಾಗಿ ಭಾರತದಲ್ಲಿ ಮತ- ಧರ್ಮಗಳು ಬದಲಾವಣೆ ಆಗಿದ್ದಲ್ಲ. ಕೆಲವು ಸಂದರ್ಭಗಳಲ್ಲಿ ಜನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಬದಲಿಸಿದಾಗ, ಇಲ್ಲಿ ನಂಬಿಕೆಗಳು ಹೆಚ್ಚತೊಡಗಿವೆ. ಭಾರತದಲ್ಲಿರುವ ಮುಸ್ಲಿಂ ಮತ್ತು ಕ್ರಿಸ್ತಿಯನ್ನರು ಯುರೋಪಿನಿಂದ ಬಂದ ವಲಸಿಗ ಮುಸ್ಲಿಮರ ರೀತಿ ಇಲ್ಲ. ಇಲ್ಲಿರುವ ಮಂದಿ ಇಲ್ಲಿನ ಸಮಾಜದಲ್ಲಿ ಬೆರೆತು ದೇಶದ ಅಂಗವಾಗಿ ಹೋಗಿದ್ದಾರೆ. ಹಾಗಾದರೆ ಇವರಲ್ಲಿ ನಾಗರಿಕ ರಾಷ್ಟ್ರೀಯತೆ ಎನ್ನುವ ಪರಿಕಲ್ಪನೆ ಎಲ್ಲಿರುತ್ತದೆ.. ಇವರು ಯಾಕೆ ತಮ್ಮನ್ನು ಇಲ್ಲಿರುವ ಪುರಾತನ ಸಂಸ್ಕೃತಿ ಮತ್ತು ಹಿಂದುಗಳೊಂದಿಗೆ ಸೋದರ ಭಾವದಿಂದ ಇರಲಿಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಈ ನಾಗರಿಕ ರಾಷ್ಟ್ರೀಯವಾದ ಅನ್ನುವ ಪರಿಕಲ್ಪನೆಯೇ ತಪ್ಪಾದ ನೆಲೆಗಟ್ಟಿನಿಂದ ನಿಂತಿದೆ ಎನ್ನಬೇಕಷ್ಟೇ ಎಂದು ರಾಮಮಾಧವ್ ಹೇಳಿದರು.
ನಾವೆಲ್ಲ ಅನಾದಿ ಕಾಲದ ಸಂಸ್ಕೃತಿ, ಪರಂಪರೆಯ ವಾರೀಸುದಾರರಾಗಿ ಜೀವಿಸುತ್ತಿದ್ದೇವೆ. ಈ ದೇಶದಲ್ಲಿ ನಾವು ಯಾವುದೇ ಮತ- ಧರ್ಮಗಳನ್ನು ಆಚರಿಸಲು ಅಡ್ಡಿ ಇಲ್ಲ. ನಮ್ಮ ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿ ತನ್ನದೇ ಆದ ಹೊಸ ಧರ್ಮವನ್ನು ಅನುಸರಿಸಲು, ಉಪದೇಶ ಮಾಡಲು ಸಾಧ್ಯವಿದೆ. ಅದು ನಮಗೆ ಈ ದೇಶ ಕೊಟ್ಟಿರುವ ಸ್ವಾತಂತ್ರ್ಯ. ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಅತ್ಯುತ್ತಮ ಕಲ್ಪನೆ ಒಂದಿದ್ದರೆ ಅದಕ್ಕೆ ಜ್ವಲಂತ ನಿದರ್ಶನ ಭಾರತ ಮಾತ್ರ ಎಂದು ರಾಮಮಾಧವ್ ವಿಶ್ಲೇಷಿಸಿದರು. ವೇದಿಕೆಯಲ್ಲಿ ಆರೆಸ್ಸೆಸ್ ಪ್ರಾಂತ ಸಂಘಚಾಲಕ್ ಡಾ.ವಾಮನ ಶೆಣೈ, ಸಿಟಿಜನ್ ಕೌನ್ಸಿಲ್ ಅಧ್ಯಕ್ಷ, ವಕೀಲ ಚಿದಾನಂದ ಕೆದಿಲಾಯ ಉಪಸ್ಥಿತರಿದ್ದರು.
RSS central executive member Ram Madhav said that those champions who advocated secularism ten years ago are speaking the language of Hindutva now. Referring to statements of Congress leader Rahul Gandhi, West Bengal chief minister Mamata Banerjee and Delhi chief minister Arvind Kejriwal regarding their soft stand towards Hindutva, the RSS leader said various political leaders have been trying to prove their Hindutva identity. He was delivering a talk at the release of his book ‘The Hindutva Paradigm’ here on Sunday.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm