ಬ್ರೇಕಿಂಗ್ ನ್ಯೂಸ್
01-01-22 06:49 pm Mangalore Correspondent ಕರಾವಳಿ
ಕುಂದಾಪುರ, ಜ.1 : ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರನ್ನು ನೇಮಕ ಮಾಡಿರುವುದು. ಪೊಲೀಸರೇ ರೌಡಿಗಳಾದರೆ ಯಾರು ಏನು ಮಾಡೋದು ? ಘಟನೆ ನಡೆದ ಎರಡು ದಿನಗಳ ನಂತರ ಒಬ್ಬ ಪೊಲೀಸ್ ಆಸ್ಪತ್ರೆ ದಾಖಲಾಗ್ತಾನೆ. ಕೌಂಟರ್ ಕೇಸ್ ಕೊಡ್ತಾನಂದ್ರೆ ಅದು ಸುಳ್ಳು ಕೇಸು ಅನ್ನೋದು ಗೊತ್ತಾಗತ್ತೆ. ಇದು ಅಪರಾಧ. ಕೋಟ ಪಿಎಸ್ಐ ಆಗಿದ್ದ ವ್ಯಕ್ತಿ ಪೊಲೀಸ್ ಇಲಾಖೆಗೆ ಫಿಟ್ಟೋ, ಅನ್ ಫಿಟ್ಟೋ ಅನ್ನೋದನ್ನು ನಮ್ಮ ಸರಕಾರ ನಿರ್ಧರಿಸುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಬ್ಬರಿಸಿದ್ದಾರೆ.
ಕೋಟತಟ್ಟು ಗ್ರಾಮದ ಕೊರಗರ ಕಾಲನಿಗೆ ಭೇಟಿ ನೀಡಿ, ಅಲ್ಲಿನ ಜನರ ಅಹವಾಲು ಆಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಒಂದು ಲಕ್ಷ ಪೊಲೀಸ್ ಸಿಬಂದಿ ಇದ್ದಾರೆ. ಕೋಟ ಪಿಎಸ್ಐ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿದ್ದಾನೆ. ಆತ ಒಂದು ದಾರ್ಷ್ಟ್ಯದ ವ್ಯಕ್ತಿ ಅಂತ ಕಾಣುತ್ತದೆ. ಯಾವುದೇ ವಿಚಾರ ಇದ್ದರೂ ಪೊಲೀಸರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ಕೊಡೋದು ಪದ್ಧತಿ. ಇಲ್ಲಿ ಆತ ಯಾರಿಗೂ ಮಾಹಿತಿ ಕೊಟ್ಟಿಲ್ವಂತೆ. ತಾನೇ ಸುಪ್ರೀಂ ಅಂತ ವರ್ತಿಸಿದ್ದಾನೆ. ಸರ್ಕಲ್, ಡಿವೈಎಸ್ಪಿ, ಎಸ್ಪಿಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ. ಆತನ ಅತಿರೇಕದ ವರ್ತನೆಯಿಂದಾಗಿ ಪೊಲೀಸ್ ಇಲಾಖೆಯ ಪರವಾಗಿ ನಾನು ತಲೆತಗ್ಗಿಸುವ ಸ್ಥಿತಿ ಬಂದಿದೆ.



ರಾಜ್ಯದಲ್ಲಿ ಒಳ್ಳೊಳ್ಳೆ ಪೊಲೀಸ್ ಅಧಿಕಾರಿಗಳು, ಸಿಬಂದಿ ಇದ್ದಾರೆ. ಇಂಥ ಘಟನೆಯಿಂದ ಅವರೆಲ್ಲ ತಲೆ ತಗ್ಗಿಸಬೇಕಾಗುತ್ತದೆ. ನಮ್ಮ ಇಲಾಖೆಯಲ್ಲಿ ಕೆಟ್ಟವರು ಇಲ್ಲ ಎನ್ನೋದಿಲ್ಲ. ಆದರೆ ಹೆಚ್ಚಿನವರು ಒಳ್ಳಯವರಿದ್ದಾರೆ. ಒಳ್ಳೆಯ ವ್ಯಕ್ತಿಗಳಿಂದಾಗಿ, ಪೊಲೀಸರಿಂದಾಗಿ ನಾವು ನೆಮ್ಮದಿಯಿಂದ ಮಲಗುವಂತಾಗಿದೆ. ಆದರೆ ತಪ್ಪು ಮಾಡಿದವರಿಗೆ ಏನು ಶಿಕ್ಷೆ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಆರಗ ಹೇಳಿದರು.


ಪೊಲೀಸ್ ಕಾನ್ಸ್ ಟೇಬಲ್, ಎರಡು ದಿನಗಳ ನಂತರ ದೂರು ಕೊಟ್ಟು ತಪ್ಪು ಮಾಡಿದ್ದಾನೆ. ಇದೊಂದು ದೊಡ್ಡ ಅಪರಾಧ. ಜನಸಾಮಾನ್ಯರು ಈ ರೀತಿ ಮಾಡ್ತಾರೆ. ಆದರೆ ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಇಂಥ ಕೆಲಸ ಮಾಡಬಾರದು. ಪಿಎಸ್ಐ ಅಮಾನತು ಮಾಡಿದ್ದೇವೆ. ಐವರು ಪೊಲೀಸರನ್ನು ವರ್ಗಾವಣೆ ಮಾಡಿದ್ದೇವೆ. ತನಿಖೆಯ ಬಳಿಕ ಅವರ ತಪ್ಪಿಗೂ ಶಿಕ್ಷೆ ಆಗುತ್ತದೆ. ಪೊಲೀಸರು ಕೌಂಟರ್ ಕೇಸ್ ಕೊಟ್ಟಿದ್ದಾರೆಂದು ಕಾಲನಿ ನಿವಾಸಿಗಳು ಯಾರು ಕೂಡ ಹೆದರಬೇಕಾಗಿಲ್ಲ. ಜನರ ಜೊತೆ ರಾಜ್ಯ ಸರಕಾರ ನಿಲ್ಲುತ್ತದೆ ಎಂದು ಗೃಹ ಸಚಿವರು ಹೇಳಿದರು.
ಕೋಟದಲ್ಲಿ ಪೊಲೀಸ್ ದೌರ್ಜನ್ಯ ; ಡಿಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ - ಎಸ್ಪಿ ವಿಷ್ಣುವರ್ಧನ್
ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿದ ಪೊಲೀಸರಿಂದ ಲಾಠಿಚಾರ್ಜ್ ! ಸಚಿವ ಕೋಟ ಊರಲ್ಲೇ ಬಡವರ ಮೇಲೆ ಪೊಲೀಸರ ದೌರ್ಜನ್ಯ !
ಕೊರಗ ಕಾಲನಿಯಲ್ಲಿ ಲಾಠಿಚಾರ್ಜ್ ; ಘಟನೆ ಬಗ್ಗೆ ಎಸ್ಪಿಯಿಂದ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ
Atrocity on Koraga community SI suspended, home minister Araga Dnyanendra states we will investigate wether case is true or false
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am