ಬ್ರೇಕಿಂಗ್ ನ್ಯೂಸ್
01-01-22 05:33 pm Mangalore Correspondent ಕರಾವಳಿ
ಉಡುಪಿ, ಜ.1 : ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಕೋಟತಟ್ಟು ಗ್ರಾಮದ ಕೊರಗರ ಕಾಲನಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ.
ಲಾಠಿಚಾರ್ಜ್ ಘಟನೆ ನಡೆದ ಮನೆಗೆ ಭೇಟಿ ನೀಡಿದ ಸಚಿವ ಆರಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಲನಿ ನಿವಾಸಿಗಳ ಅಹವಾಲು ಆಲಿಸಿದರು. ಪೊಲೀಸರ ಕಾರ್ಯ ವೈಖರಿ ಬಗ್ಗೆ ನೋವು ವ್ತಕ್ತಪಡಿಸಿದ ಮದುವೆ ಮನೆಯ ಕುಟುಂಬಸ್ಥರು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನುವ ಭೇದ ಇಲ್ಲದೆ ಲಾಠಿ ಏಟು ನೀಡಿದ್ದಾರೆ. ನಾವು ಏನು ತಪ್ಪು ಮಾಡಿದ್ದೇವೆ, ಯಾಕಾಗಿ ಹೊಡೆಯುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರ ಇರಲಿಲ್ಲ. ಮದುಮಗನಿಗೂ ಹೊಡೆದಿದ್ದಾರೆ ಎಂದು ಹೇಳಿದರು.
ಮರುದಿನ ನಮ್ಮನ್ನು ಠಾಣೆಗೆ ಕರೆದೊಯ್ದು ಬರಿಮೈಯಲ್ಲಿ ನಿಲ್ಲಿಸಿ ಹೊಡೆದಿದ್ದಾರೆ. ನಾವು ಮದ್ಯವ್ಯಸನಿಗಳು ಎಂದು ಆರೋಪಿಸಿ ಹೊಡೆದಿದ್ದಾರೆ. ನಾನು ಜೀವಮಾನದಲ್ಲಿ ಕುಡಿದವನೇ ಅಲ್ಲ. ಕಾಲನಿಯ ನಿವಾಸಿಗಳು ಮದ್ಯ ಕುಡಿಯದಂತೆ ಜಾಗೃತಿ ಮಾಡುತ್ತಿದ್ದೇವೆ.ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತೆ ಅಭಿಯಾನ ಮಾಡಿದ್ದೇವೆ. ನಾವು ಕಾಲನಿ ನಿವಾಸಿಗಳು ಯಾವುದೇ ಪೊಲೀಸ್ ಕೇಸು ಮಾಡಿಕೊಂಡವರೂ ಅಲ್ಲ. ನಮಗೆ ಬದುಕುವ ಹಕ್ಕು ಇಲ್ಲವೇ.. ನನ್ನ ತಮ್ಮ ಸರಕಾರಿ ಕೆಲಸದಲ್ಲಿದ್ದು ಅವನೇ ಕಾಲನಿ ನಿವಾಸಿಗಳಿಗೆ ಸ್ಫೂರ್ತಿ ಎಂದು ಮದುಮಗನ ಅಣ್ಣ ಗೃಹ ಸಚಿವರ ಬಳಿ ಅಲವತ್ತುಕೊಂಡರು.
ಪೊಲೀಸ್ ದೌರ್ಜನ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವ ಆರಗ ಜ್ಞಾನೇಂದ್ರ, ಪೊಲೀಸರ ಅತಿರೇಕದ ವರ್ತನೆಯಿಂ ಬೇಸರವಾಗಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವ ಸಲುವಾಗಿ ಪ್ರಕರಣವನ್ನು ಸಿಓಡಿಗೆ ಒಪ್ಪಿಸುತ್ತೇವೆ. ಸಿಓಡಿ ಸಂಸ್ಥೆಯ ಮೂಲಕ ಸಮಗ್ರ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಪೊಲೀಸರ ಪ್ರತಿ ದೂರಿನ ಬಗ್ಗೆಯೂ ತನಿಖೆ ಮಾಡುತ್ತೇವೆ. ಸಂತ್ರಸ್ತ ಸಮುದಾಯಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕೊರಗ ಕುಟುಂಬದ ಜೊತೆ ರಾಜ್ಯ ಸರಕಾರ ಇದೆ. ಈ ಬಗ್ಗೆ ಯಾವುದೇ ಬೇಸರ ನಿಮಗೆ ಬೇಡ ಎಂದ ಗೃಹ ಸಚಿವರು, ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದರು. ಅಲ್ಲದೆ, ಸ್ಥಳದಲ್ಲೇ ಸಂತ್ರಸ್ತ 6 ಕುಟುಂಬಗಳಿಗೆ 50 ಸಾವಿರದ ಚೆಕ್ ಹಸ್ತಾಂತರ ಮಾಡಿದರು.
ಕೊರಗರ ಜೊತೆ ಅಕ್ಕಿ ಮೂಟೆ ಹೊರುತ್ತಿದ್ದೆ..
ಇದೇ ವೇಳೆ, ತನ್ನ ಹಳೆಯ ಜೀವನವನ್ನು ನೆನಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಾನು ಕೂಡಾ ಕೊರಗ ಸಮುದಾಯದ ಜೊತೆ ಬೆಳೆದಿದ್ದವನು. ಅಕ್ಕಿ ಗಿರಣಿಯಲ್ಲಿ ಕೊರಗ ಸಮುದಾಯದವರೊಂದಿಗೆ ಮೂಟೆ ಹೊರುತ್ತಿದ್ದೆ. ಅವರ ನೋವು, ನಲಿವು ನನಗೆ ಗೊತ್ತಿದೆ. ತಳಸ್ತರದ ಮುಗ್ದ ಸಮುದಾಯ ಇಂತಹ ಕಾರ್ಯಕ್ರಮ ಮಾಡಿದ್ದೇ ಅಪರೂಪ. ಈ ಘಟನೆಯಿಂದ ಸಮುದಾಯಕ್ಕೆ ನೋವಾಗಿದೆ. ಕುಟುಂಬಕ್ಕೆ ಆಘಾತವಾಗಿದೆ ಎಂದು ಹೇಳಿದರು.
ಕೋಟದಲ್ಲಿ ಪೊಲೀಸ್ ದೌರ್ಜನ್ಯ ; ಡಿಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ - ಎಸ್ಪಿ ವಿಷ್ಣುವರ್ಧನ್
ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿದ ಪೊಲೀಸರಿಂದ ಲಾಠಿಚಾರ್ಜ್ ! ಸಚಿವ ಕೋಟ ಊರಲ್ಲೇ ಬಡವರ ಮೇಲೆ ಪೊಲೀಸರ ದೌರ್ಜನ್ಯ !
ಕೊರಗ ಕಾಲನಿಯಲ್ಲಿ ಲಾಠಿಚಾರ್ಜ್ ; ಘಟನೆ ಬಗ್ಗೆ ಎಸ್ಪಿಯಿಂದ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ
Udupi Kota Police atrocity on Koraga community Home Minister Araga Dnyanendra Visits spot orders compensation for those hit by police.
29-04-25 01:04 pm
HK News Desk
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 12:40 pm
Mangalore Correspondent
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm