ಬ್ರೇಕಿಂಗ್ ನ್ಯೂಸ್

ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಪಾಕ್ ಮಾಜಿ ಸಚಿವ ಮೆಚ್ಚುಗೆ, ಕಾಂಗ್ರೆಸ್ ಕೇ ಹಾತ್, ಪಾಕಿಸ್ತಾನ್ ಕೆ ಸಾಥ್ ಎಂದು ಬಿಜೆಪಿ ಕೌಂಟರ್ ಪೋಸ್ಟ್, ಕಾಂಗ್ರೆಸ್ ನಾಯಕರು ಪಾಕ್ ಸ್ಲೀಪರ್ ಸೆಲ್‌ಗಳು ಎಂದ ಅಮಿತ್ ಮಾಳವೀಯ    |    Kudupu Murder, Mangalore Crime, Police: ಕುಡುಪು ಬಳಿ ಸಂಶಯಾಸ್ಪದ ಸಾವು ಪ್ರಕರಣಕ್ಕೆ ತಿರುವು ; ಕ್ರಿಕೆಟ್ ಆಡುತ್ತಿದ್ದ ಗುಂಪಿನಿಂದ ಹಲ್ಲೆ ಕೃತ್ಯ, ಹೊಟ್ಟೆಯೊಳಗೆ ರಕ್ತಸ್ರಾವದಿಂದ ಸಾವು, ಸಂತ್ರಸ್ತನ ಗುರುತು ಪತ್ತೆಗೆ ತಂಡ ರಚನೆ, 15 ಮಂದಿ ಬಂಧನ     |    Praveen Nettaru, Mohsin Shukur, Karwar Police: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಟ್ರೈನಿಂಗ್, ಕೆಜಿ ಹಳ್ಳಿ- ಡಿಜೆ ಹಳ್ಳಿ ಕೇಸಿನ ಕ್ರಿಮಿನಲ್ ಶಿರಸಿಯಲ್ಲಿ ಅರೆಸ್ಟ್! ತಲೆಮರೆಸಿಕೊಂಡ ಆರೇ ವರ್ಷದಲ್ಲಿ ಐವರು ಮಕ್ಕಳಿಗೆ ಅಪ್ಪ! ಆರೋಪಿ ಬಚ್ಚಿಟ್ಟ ಕುಟುಂಬಸ್ಥರ ವಿರುದ್ಧ ಕೇಸು       |   

ಪುಂಜಾಲಕಟ್ಟೆಯ ಯುವಕ ಅಪಘಾತದಲ್ಲಿ ಮೃತ್ಯು ; ಬೆಂಗಳೂರು, ಮಣಿಪಾಲಕ್ಕೆ ಅಂಗಾಂಗ ರವಾನೆ

29-12-21 09:00 pm       Mangalore Correspondent   ಕರಾವಳಿ

ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ದೇಹದ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು, ಮಂಗಳೂರು ಮತ್ತು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು.

Photo credits : Headline Karnataka

ಮಂಗಳೂರು, ಡಿ.29 : ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ದೇಹದ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು, ಮಂಗಳೂರು ಮತ್ತು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು.

ಡಿ.26ರಂದು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿಯ ಮೂರ್ಜೆ ನಿವಾಸಿ ಸತೀಶ್ (32) ಎಂಬವರು ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಯುವಕನ ತಲೆಗೆ ಪೆಟ್ಟಾಗಿದ್ದರಿಂದ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದ್ದರು. ಇದರಂತೆ, ಕುಟುಂಬಸ್ಥರು ಯುವಕನ ದೇಹದ ಅಂಗಗಳನ್ನು ದಾನ ಮಾಡಲು ಮುಂದಾಗಿದ್ದರು.

ಸತೀಶ್ ಅವರ ಹೃದಯವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದರೆ, ಲಿವರ್ ಅನ್ನು ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ. ಕಿಡ್ನಿಗಳನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮತ್ತು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಗತ್ಯ ಉಳ್ಳವರಿಗೆ ಅಂಗಗಳನ್ನು ರವಾನೆ ಮಾಡಿದ್ದು, ಇದಕ್ಕಾಗಿ ಬುಧವಾರ ಬೆಳಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಮತ್ತು ಮಣಿಪಾಲಕ್ಕೆ ಮುಟ್ಟಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರು, ಅಲ್ಲಿನ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Punjalkatte youth dies of accident donates organs, deliverd to hospital in Bangalore and Manipal. Satish had died of road accident on December 26th.