ಬ್ರೇಕಿಂಗ್ ನ್ಯೂಸ್
25-12-21 08:36 pm Mangalore Correspondent ಕರಾವಳಿ
ಮಂಗಳೂರು, ಡಿ.25 : ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಸುದ್ದಿ ಕೇಳಿಬಂದಿದೆ. ಬಸವರಾಜ್ ಬೊಮ್ಮಾಯಿ ಅವರನ್ನು ಬದಲಾಯಿಸುತ್ತಾರೆ ಎನ್ನುವ ಸುದ್ದಿ ಹಬ್ಬುತ್ತಲೇ ಹಲವರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿ ತಮ್ಮ ಹೆಸರನ್ನು ತೇಲಿಬಿಡುತ್ತಿದ್ದಾರೆ. ಇತ್ತೀಚೆಗೆ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಅವರು ಬಹಿರಂಗವಾಗಿಯೇ ಮುರುಗೇಶ್ ನಿರಾಣಿಯನ್ನು ಭವಿಷ್ಯದಲ್ಲಿ ಸಿಎಂ ಆಗುತ್ತಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ, ನಿರಾಣಿಯ ಬಗ್ಗೆ ಈಶ್ವರಪ್ಪ ಶಹಭಾಷ್ ಗಿರಿ ಹೇಳಿದ ಬೆನ್ನಲ್ಲೇ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದರು.
ನಿರಾಣಿ ಒಬ್ಬ ಭ್ರಷ್ಟ. ಆತ ಸಿಎಂ ಆದರೆ ಕರ್ನಾಟಕ ಅಲ್ಲ, ಇಡೀ ಭಾರತವನ್ನೇ ಮಾರಿ ತಿಂದು ಬಿಟ್ಟಾನು. ಆತ ಯಾವುದೇ ಕಾರಣಕ್ಕೂ ಸಿಎಂ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಯತ್ನಾಳ್ ಹೇಳಿದ್ದು ಭಾರೀ ಸುದ್ದಿಯಾಗಿತ್ತು. ಕಳೆದ ಬಾರಿ ಸಹಕಾರಿ ಇಲಾಖೆಯಿಂದ ನೀಡಲಾಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕುಗಳ ಕುರಿತ ವರದಿಯೊಂದು ಅಚ್ಚರಿಯ ಮಾಹಿತಿ ಹೊರಗೆಡವಿತ್ತು. ರಾಜ್ಯದಲ್ಲಿ ಬಹಳಷ್ಟು ಸಹಕಾರಿ ಬ್ಯಾಂಕುಗಳಲ್ಲಿ ರಾಜಕಾರಣಿಗಳು ಸೇರಿಕೊಂಡಿದ್ದಾರೆ. ತಮ್ಮ ಹೆಸರಲ್ಲಿ ಸಾಲಗಳನ್ನು ಪಡೆದು ಮರು ಪಾವತಿಸದೆ ಈಗ ಅದರ ಜುಟ್ಟು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದರಿಂದಾಗಿ ಸಹಕಾರಿ ಬ್ಯಾಂಕುಗಳು ತೀವ್ರ ನಷ್ಟಕ್ಕೀಡಾಗಿ ದಿವಾಳಿಯಾಗುವತ್ತ ಹೋಗಿದೆ ಎನ್ನಲಾಗಿತ್ತು. ಈ ವರದಿಯಲ್ಲಿ ರಾಜಕಾರಣಿಗಳ ಪೈಕಿ ಮುಂಚೂಣಿಯಲ್ಲಿ ಇದ್ದುದು ಮುರುಗೇಶ್ ನಿರಾಣಿ ಹೆಸರು.
ಮುರುಗೇಶ್ ನಿರಾಣಿ ವಿವಿಧ ಸಕ್ಕರೆ ಕಾರ್ಖಾನೆಗಳ ಹೆಸರಲ್ಲಿ ನೂರಾರು ಕೋಟಿ ಸಾಲ ಪಡೆದಿದ್ದಾರೆ. ಇದನ್ನು ಮರು ಪಾವತಿ ಮಾಡಿಲ್ಲ ಅನ್ನೋದ್ರ ಬಗ್ಗೆ ಬಹಳಷ್ಟು ಆರೋಪಗಳಿವೆ. ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ ಒಂದರಲ್ಲೇ 250 ಕೋಟಿಗೂ ಹೆಚ್ಚು ಸಾಲ ಹೊಂದಿದ್ದಾರೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ನಿರಾಣಿ ಒಡೆತನದ ಎಂಆರ್ ಎನ್ ಕೇನ್ ಪವರ್ ಇಂಡಿಯಾ ಲಿಮಿಟೆಡ್ ಹೆಸರಲ್ಲಿ 2018ರಲ್ಲಿ 65 ಕೋಟಿ ಸಾಲ ನೀಡಲಾಗಿತ್ತು. 2019ರಲ್ಲಿ ಅದೇ ಕಂಪನಿಗೆ ಮತ್ತೆ 50 ಕೋಟಿ ಸಾಲ ನೀಡಲಾಗಿತ್ತು. ನಿರಾಣಿ ಶುಗರ್ಸ್ ಲಿಮಿಟೆಡ್ ಹೆಸರಲ್ಲಿ 2017ರಲ್ಲಿ 80 ಕೋಟಿ ಸಾಲ ನೀಡಲಾಗಿತ್ತು. ಇದೇ ನಿರಾಣಿ ಶುಗರ್ಸ್ ಹೆಸರಿಗೆ 2019ರಲ್ಲಿ ಮತ್ತೆ 9 ಕೋಟಿ ಸಾಲ ನೀಡಲಾಗಿತ್ತು. ಮುರುಗೇಶ್ ನಿರಾಣಿಗೆ ಸೇರಿದ ಶ್ರೀ ಸಾಯಿ ಪ್ರಿಯಾ ಸುಗರ್ ಮಿಲ್ ಲಿಮಿಟೆಡ್ ಎಂ.ಎನ್. ಹೆಸರಲ್ಲಿ ಮತ್ತೊಂದು ಕಂಪನಿ ಇದ್ದು ಅದಕ್ಕೆ ಎಸ್ಸಿಡಿಸಿಸಿ ಬ್ಯಾಂಕಿನಿಂದ 2019ರಲ್ಲಿ 30 ಕೋಟಿ ಸಾಲ ನೀಡಲಾಗಿತ್ತು. ಹೀಗೆ ಒಟ್ಟು 235 ಕೋಟಿ ರೂಪಾಯಿ ಸಾಲವನ್ನು ಮೂರು ಸಕ್ಕರೆ ಕಾರ್ಖಾನೆಗಳ ಹೆಸರಲ್ಲಿ ಪಡೆದಿದ್ದು ಅವುಗಳನ್ನು ಮರು ಪಾವತಿಸದೇ ಬಾಕಿ ಇರಿಸಲಾಗಿದೆ ಎನ್ನುವ ಮಾಹಿತಿಗಳಿವೆ.
ನಿರಾಣಿಯವರು ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ 235 ಕೋಟಿ ರೂಪಾಯಿ ಸಾಲ ಹೊಂದಿರುವ ಬಗ್ಗೆ ದಾಖಲೆ ಸಿಕ್ಕಿದೆ. ಇದಲ್ಲದೆ, ಇದೇ ಸಕ್ಕರೆ ಕಾರ್ಖಾನೆಗಳ ಹೆಸರಲ್ಲಿ ಬೇರೆ ಜಿಲ್ಲೆಗಳ ಸಹಕಾರಿ ಬ್ಯಾಂಕುಗಳಲ್ಲಿಯೂ ಸಾಲ ಪಡೆದಿದ್ದಾರೆ ಅನ್ನುವ ಆರೋಪಗಳಿವೆ. ಈ ಅಕ್ರಮಗಳಿಗೆಲ್ಲ ರಾಜ್ಯ ಅಪೆಕ್ಸ್ ಬ್ಯಾಂಕ್ ರಹದಾರಿಯಾಗಿದ್ದು, ರಿಯಲ್ ಎಸ್ಟೇಟ್, ದೊಡ್ಡ ಉದ್ಯಮಿಗಳಿಗೆ ವಿವಿಧ ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ಸಾಲ ತೆಗೆಸಿಕೊಡುವುದನ್ನೇ ಅಲ್ಲಿ ದಂಧೆ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ತನ್ನ ವ್ಯಾಪ್ತಿಯ ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವಂತಿಲ್ಲ. ಅಂಥ ಕಾನೂನು ಇದ್ದರೂ, ಅದನ್ನು ಉಲ್ಲಂಘಿಸಿ ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್, ಬಿಜೆಪಿಯಲ್ಲಿ ದೊಣ್ಣೆ ನಾಯಕನಾಗಿರುವ ನಿರಾಣಿಗೆ ಮತ್ತೆ ಮತ್ತೆ ಸಾಲ ಎತ್ತಿ ಕೊಟ್ಟಿದ್ದಾರೆ.
ಈಗ ಹೇಳಿ, ಯತ್ನಾಳ್ ಹೇಳಿರುವ ಮಾತಿನಲ್ಲಿ ತಪ್ಪು ಇದೆಯೇ.. ಇಂಥ ವ್ಯಕ್ತಿ ಸಿಎಂ ಆದಲ್ಲಿ ಸಕ್ಕರೆ ಕಾರ್ಖಾನೆಗಳ ಹೆಸರಲ್ಲಿರುವ ಸಾಲವನ್ನೇ ಮನ್ನಾ ಮಾಡುವ ನಿರ್ಧಾರಕ್ಕೆ ಬರಲ್ಲ ಎಂಬ ಗ್ಯಾರಂಟಿ ಏನಿದೆ. ರಾಜ್ಯದಲ್ಲಿ ಹಲವಾರು ಮಂದಿ ರಾಜಕಾರಣಿಗಳು ಸಕ್ಕರೆ ಕಾರ್ಖಾನೆ ಹೊಂದಿದ್ದು ವಿವಿಧ ಬ್ಯಾಂಕುಗಳಲ್ಲಿ ನೂರಾರು ಕೋಟಿ ಸಾಲ ಹೊಂದಿದ್ದಾರೆ. ಅಸ್ತಿತ್ವವೇ ಇಲ್ಲದ ಸಕ್ಕರೆ ಕಾರ್ಖಾನೆ ಹೆಸರಲ್ಲೂ ಸಾಲ ತೆಗೆದವರಿದ್ದಾರೆ. ಇವರೆಲ್ಲ ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡಿಸುವಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಆಪ್ತವಾದ ಸಂಪರ್ಕವನ್ನು ಇಟ್ಟುಕೊಂಡಿರುವ ನಿರಾಣಿ ರಾಜ್ಯದಲ್ಲಿ ಸಿಎಂ ಆಗಲಿಕ್ಕಿಲ್ಲ ಅನ್ನುವುದನ್ನು ತೀರಾ ಅಲಗಳೆಯಲು ಸಾಧ್ಯವಿಲ್ಲ. ರಾಷ್ಟ್ರಹಿತದ ಭಾಷಣ ಮಾಡುವ ಆರೆಸ್ಸೆಸ್ ನಾಯಕರು ಇಂಥವರನ್ನು ಪೋಷಿಸುತ್ತಿರುವ ತಮ್ಮ ನಡವಳಿಕೆ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಬೇಕು.
In the name of Sugar Factory 250 crores loan from DCC Bank Basangouda Patil Yatnal sparks bomb.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
29-04-25 11:53 am
Mangalore Correspondent
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm