ಬ್ರೇಕಿಂಗ್ ನ್ಯೂಸ್
21-12-21 01:38 pm Mangalore correspondent ಕರಾವಳಿ
ಪುತ್ತೂರು, ಡಿ.21 : ಹಲ್ಲೆ ಘಟನೆಯ ನೆಪದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದ್ದು ಆತಂಕಕಾರಿಯಾಗಿದ್ದು, ಆಂಬುಲೆನ್ಸ್ ನಲ್ಲಿ ಸೋಡಾ ಬಾಟ್ಲಿ, ತಲವಾರು ಇಟ್ಟು ಪೊಲೀಸರನ್ನೇ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಈ ರೀತಿಯ ಘಟನೆಯಿಂದಾಗಿ ಜಿಲ್ಲೆಯ ಸಮಸ್ತ ನಾಗರಿಕ ಸಮಾಜ ಭಯಕ್ಕೆ ಒಳಗಾಗಿದ್ದಾರೆ. ಪಕ್ಕದ ಮಸೀದಿಯಲ್ಲಿ ಅಡಗಿ ಕುಳಿತು ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಇಲಾಖೆಯ ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಘಟನೆಗೆ ಕಾರಣವಾದ ಎಲ್ಲ ಆರೋಪಿಗಳ ಮೇಲೆ ದೇಶದ್ರೋಹದ ಕೇಸು ದಾಖಲಿಸಬೇಕೆಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಶರಣ್ ಪಂಪ್ವೆಲ್, ಈ ಕೃತ್ಯವು ಪೂರ್ವಯೋಜಿತವಾಗಿದ್ದು, ಕೇರಳ ಭಾಗ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವಾರು ಜಿಹಾದಿ ಮಾನಸಿಕತೆ ಇರುವ ಯುವಕರು ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯಕ್ಕೆ ಸಮಾನವಾದ ಘಟನೆ. ಬೆಂಗಳೂರಿನಲ್ಲಿ ಕೂಡ ಡಿಜೆ ಹಳ್ಳಿ- ಕೆಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಇಂತಹದ್ದೇ ಕೃತ್ಯ ಎಸಗಿದ್ದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ್ದಾರೆ. ಪೊಲೀಸ್ ಠಾಣೆ ಮತ್ತು ಹತ್ತಾರು ಮನೆಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲಿನ ಆರೋಪಿಗಳ ಮೇಲೆ ದೇಶದ್ರೋಹದ ಕೇಸು ದಾಖಲಿಸಲಾಗಿತ್ತು. ಉಪ್ಪಿನಂಗಡಿಯಲ್ಲಿ ನಡೆದ ಘಟನೆ ಕೂಡ ದೇಶದ ಸುರಕ್ಷತೆ ವ್ಯವಸ್ಥೆ ಮೇಲಾದ ದಾಳಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ತಾರು ಕೊಲೆಗಳಲ್ಲಿ ಇವರ ನೇರ ಪಾತ್ರವಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮೀನು ಮಾರಾಟಗಾರರಾದ ಅಶೋಕ್, ಮೋಹನ್ ಮತ್ತು ಮಹೇಶ್ ಭಂಡಾರಿ ಎಂಬವರ ಮೇಲೆ 5 ಬೈಕ್ ಗಳಲ್ಲಿ ಬಂದ ಪಿಎಫ್ಐ ಕಾರ್ಯಕರ್ತರು ತಲವಾರಿನಿಂದ ಕೊಲೆ ಮಾಡಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ ಮೂವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹತ್ತು ಮಂದಿ ಆರೋಪಿಗಳ ಬಂಧನ ಆಗಿಲ್ಲ. ಆರೋಪಿಗಳಾದ ಅಜೀಜ್, ತಸ್ಲೀಮ್, ಸರ್ಫುದ್ದೀನ್, ಮುಸ್ತಫಾ, ರಫೀಕ್, ಅನ್ವರ್ ಪೆರ್ನೆ, ಇರ್ಫಾನ್ ಕೋಲ್ಪೆ, ಸಿದ್ದಿಕ್ ನೆಲ್ಯಾಡಿ, ನೌಫಾಲ್ ಪೆರ್ನೆ ಅವರನ್ನು ಬಂಧಿಸಿಲ್ಲ. ಅಲ್ಲದೆ ಪೊಲೀಸ್ ಠಾಣೆಗೆ ದಾಳಿ ನಡೆಸಿದ ಪ್ರಕರಣದಲ್ಲಿ ಕೇವಲ 10 ಮಂದಿಯನ್ನು ಮಾತ್ರ ಬಂಧಿಸಿದ್ದು, ಕೃತ್ಯದಲ್ಲಿ ತೊಡಗಿದ್ದ ನೂರಾರು ಮಂದಿಯ ಬಂಧನ ಆಗಬೇಕಾಗಿದೆ.
ಆರೋಪಿಗಳು ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಬಗ್ಗೆ ಸುಳ್ಳು ನೆಪವೊಡ್ಡಿ ದಾಖಲಾಗಿದ್ದು ಅವರನ್ನು ಪೊಲೀಸರು ಬಂಧಿಸಲು ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಒತ್ತಡಕ್ಕೆ ಮಣಿದು ಎರಡು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಇವರ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಜಿಲ್ಲೆಯ ಎಲ್ಲ ಹಿಂದು ಸಂಘಟನೆಗಳನ್ನು ಜೊತೆಯಾಗಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Vishwa Hindu Parishat (VHP) divisional secretary Sharan Pumpwell has demanded the police to book a sedition case against Popular Front of India ( PFI) workers who were involved in the violence related to Uppinangadi police station recently. Addressing media at Puttur press club, Sharan referred to the December 14 incident where the protest outside Uppinangadi police station took a violent turn. The PFI and SDPI activists attacked DySP Ganakumari, SI Prasanna, women police personnel and several others with weapons leaving them severely injured.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm