ದಿಢೀರ್ ವೈದ್ಯರಾದ ದ.ಕ. ಜಿಲ್ಲಾಧಿಕಾರಿ ; ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಮಹಿಳೆಗೆ ತುರ್ತು ಆರೈಕೆ 

06-12-21 11:08 pm       HK Desk news   ಕರಾವಳಿ

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಇಂದು ಸ್ವಯಂ ವೈದ್ಯರಾಗಿ ಗಮನ ಸೆಳೆದಿದ್ದಾರೆ.

ಮಂಗಳೂರು, ಡಿ.6: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಇಂದು ಸ್ವಯಂ ವೈದ್ಯರಾಗಿ ಗಮನ ಸೆಳೆದಿದ್ದಾರೆ. ಬಂಟ್ವಾಳ ಸಜಿಪದಲ್ಲಿ ದಿ. ಕದ್ರಿ ಗೋಪಾಲನಾಥ್ ಹೆಸರಿನಲ್ಲಿ  ಕದ್ರಿ ಸಂಗೀತ ಸೌರಭ ಕಾರ್ಯಕ್ರಮ ನಡೆದಿತ್ತು. ಈ ವೇಳೆ, ಕದ್ರಿ ಗೋಪಾಲನಾಥ ಅವರ ಪತ್ನಿ ಸರೋಜಿನಿ ಅಸ್ವಸ್ಥರಾಗಿದ್ದು ಕೂಡಲೇ ಅತಿಥಿಯಾಗಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಆರೈಕೆ ಮಾಡಿದ್ದಾರೆ.‌

ವೈದ್ಯಕೀಯ ಓದಿರುವ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ತಕ್ಷಣ ಅವರ ಆರೈಕೆ ಮಾಡಿ ಉಪಚರಿಸಿದ್ದಾರೆ. ಸಕ್ಕರೆ ಲೋ ಆಗಿ ಅವರಿಗೆ ಆರೋಗ್ಯ ತೊಂದರೆ ಉಂಟಾಗಿತ್ತು.‌

ಸ್ಯಾಕ್ಸೋಫೋನ್ ಚಕ್ರವರ್ತಿ ಡಾ. ಕದ್ರಿ ಗೋಪಾಲನಾಥ್ ಅವರ ಜನುಮದಿನದ ಅಂಗವಾಗಿ ಕದ್ರಿ ಸಂಗೀತ ಸೌರಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದಾಗ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಡಾ. ಕದ್ರಿ ಗೋಪಾಲನಾಥ್ ಅವರ ಪತ್ನಿ ಭಾವುಕರಾಗಿ ಅಸ್ವಸ್ಥರಾಗಿದ್ದಾರೆ.  ಈ ಸಂದರ್ಭ ಅಲ್ಲಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಕ್ಷಣ ಅವರನ್ನು ಪರಿಶೀಲಿಸಿ, ಅವರಿಗೆ ಸಕ್ಕರೆ ನೀರು ಕೊಟ್ಟು ಉಪಚರಿಸಿದರು. 

ಕದ್ರಿ ಗೋಪಾಲನಾಥರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಮೋರ್ಸಿಂಗ್ ವಿದ್ವಾನ್ ಡಾ.ಎಲ್. ಭೀಮಾಚಾರ್ಯ ಮತ್ತು ಗಾಯಕ ಹುಲ್ಯಾಳ ಮಹದೇವಪ್ಪ ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

Mangalore DC Rajendra Kumar turns doctor gives immediate treatment to woman who collapsed. The video of this has gone viral on social media.