ಬ್ರೇಕಿಂಗ್ ನ್ಯೂಸ್
06-12-21 12:10 pm HK Desk news ಕರಾವಳಿ
Photo credits : Headline Karnataka
ಉಳ್ಳಾಲ, ಡಿ.6: ಪಜೀರು ಗ್ರಾಮದ ಕಂಬಳಪದವಿನಲ್ಲಿರುವ ಬ್ಲೂ ಲೈನ್ ಫಿಶ್ ಮಿಲ್ ಫ್ಯಾಕ್ಟರಿಯಲ್ಲಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ನಿಗೂಢ ಸಾವನ್ನಪ್ಪಿದ್ದು ಮೃತದೇಹವನ್ನ ಕಂಪನಿಯ ಆಡಳಿತ ವಿಮಾನದಲ್ಲಿ ತರಾತುರಿಯಲ್ಲಿ ಸಾಗಿಸಿದೆ.
ಝಾರ್ಖಂಡ್ ರಾಜ್ಯದ ಜಸ್ಪುರ್ ಜಿಲ್ಲೆಯ ನಿವಾಸಿ ಜುಗನ್ ರಾಮ್ (19) ಮೃತ ವಲಸೆ ಕಾರ್ಮಿಕ. ಮೃತ ಜುಗನ್ ರಾಮ್ ಮೂರು ತಿಂಗಳುಗಳಿಂದ ಕಂಬಳಪದವಿನ ಬ್ಲೂ ಲೈನ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದನೆನ್ನಲಾಗಿದೆ. ಕಳೆದ ನವೆಂಬರ್ 30 ರಂದು ಜುಗನ್ ರಾಮ್ ಫ್ಯಾಕ್ಟರಿ ಒಳಗೆ ಸರಕು ಗೋಣಿ ಚೀಲ ಎತ್ತಿ ಸಾಗಿಸುತ್ತಿದ್ದ ವೇಳೆ ಜಾರಿ ಬಿದ್ದು ತಲೆಯ ಹಿಂಭಾಗಕ್ಕೆ ಏಟು ತಗಲಿ ಗಾಯಗೊಂಡಿದ್ದನೆನ್ನಲಾಗಿದೆ. ಗಾಯಾಳುವನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಜುಗನ್ ರಾಮ್ ಡಿಸೆಂಬರ್ 3 ರ ಶುಕ್ರವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಸಹಜ ( ಸೆಕ್ಷನ್ 174 ಸಿ) ಸಾವು ಪ್ರಕರಣ ದಾಖಲಾಗಿದ್ದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬ್ಲೂ ಲೈನ್ ಕಂಪನಿಯು ಕಾರ್ಮಿಕನ ಮೃತದೇಹವನ್ನ ತರಾತುರಿಯಲ್ಲಿ ವಿಮಾನದ ಮೂಲಕ ಜಾರ್ಖಂಡ್ ಗೆ ಆತನ ಊರಿಗೆ ರವಾನಿಸುವ ಕೆಲಸ ಮಾಡಿದೆ. ವಲಸೆ ಕಾರ್ಮಿಕ ಜುಗನ್ ರಾಮ್ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಕಂಬಳ ಪದವಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬ್ಲೂ ಲೈನ್ ಕಂಪನಿಯ ಎರಡು ಫಿಶ್ ಮಿಲ್ ಫ್ಯಾಕ್ಟರಿಗಳು ಕಾರ್ಯಾಚರಿಸುತ್ತಿವೆ. ಫ್ಯಾಕ್ಟರಿ ಒಳಗೆ ಬಹುತೇಕ ಹೊರ ರಾಜ್ಯದ ವಲಸೆ ಕಾರ್ಮಿಕರೇ ಕೆಲಸದಲ್ಲಿದ್ದಾರೆ. ಕಾರ್ಮಿಕರಿಗೆ ಈ ಫ್ಯಾಕ್ಟರಿಯಲ್ಲಿ ಸರಿಯಾದ ಸುರಕ್ಷತಾ ವ್ಯವಸ್ಥೆಗಳಿಲ್ಲವೆಂದು ಹೇಳಲಾಗುತ್ತಿದೆ. ಸ್ಥಳೀಯರಿಗಾಗಲಿ, ಮಾಧ್ಯಮ ಮಂದಿಗಳಾಗಲಿ ಈ ಫ್ಯಾಕ್ಟರಿ ಒಳಗಡೆ ಪ್ರವೇಶ ಕಷ್ಟ ಸಾಧ್ಯ. ಹಾಗಾಗಿ ಕಾರ್ಮಿಕ ಜುಗನ್ ರಾಮ್ ಜಾರಿ ಬಿದ್ದು ಸತ್ತನೇ ಅಥವಾ ಇನ್ನಾವುದೋ ಕಾರಣದಿಂದ ಸಾವು ಆಗಿದೆಯೇ ಎಂಬ ಬಗ್ಗೆ ಸಂಶಯವಿದ್ದು ವಲಸೆ ಕಾರ್ಮಿಕನ ಸಾವಿಗೆ ನ್ಯಾಯ ಸಿಗಬೇಕಿದೆ.
ಪರಿಸರದಲ್ಲಿ ದುರ್ನಾತ ಹಬ್ಬಿಸಿರುವ ಫ್ಯಾಕ್ಟರಿ
ಪಜೀರು ಗ್ರಾಮದ ಕಂಬಳ ಪದವಿನಲ್ಲಿ ಮೀನಿನ ಉತ್ನನ್ನಗಳನ್ನ ತಯಾರಿಸುವ ಬ್ಲೂ ಲೈನ್ ಫ್ಯಾಕ್ಟರಿಯಿಂದ ನಿತ್ಯವೂ ದುರ್ನಾತ ಬರುತ್ತಿದ್ದು ಪರಿಸರ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ನಿಯಮ ಮೀರಿ ಕಾರ್ಯಾಚರಿಸುತ್ತಿರುವ ಕಂಪನಿ ವಿರುದ್ಧ ಸ್ಥಳೀಯ ಪಜೀರು ಪಂಚಾಯತ್ ಆಡಳಿತ ಕ್ರಮ ಕೈಗೊಂಡಿಲ್ಲವೆಂದು ಕಂಬಳಪದವಿನ ಸ್ಥಳೀಯ ನಿವಾಸಿಯೋರ್ವರು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ. ಫ್ಯಾಕ್ಟರಿಯಿಂದ ದುರ್ನಾತ ಹೊರ ಬರುತ್ತಿದ್ದು ಈ ಬಗ್ಗೆ ಸ್ಥಳೀಯ ಯಾರೊಬ್ಬರು ಗ್ರಾಮ ಸಭೆಗಳಲ್ಲಿ ಧ್ವನಿ ಎತ್ತುವುದಾಗಲೀ, ಲಿಖಿತ ದೂರುಗಳನ್ನಾಗಲಿ ನೀಡಿಲ್ಲವೆಂದು ಪಜೀರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಫೀಕ್ ಪಜೀರು ಹೇಳಿದ್ದಾರೆ.
Blueline fish mill Jarkand employee dies in suspicious way in Mangalore office, body shifted via flight to home town. A case has been registered at the Konaje Police Station.
25-04-25 06:30 pm
Bangalore Correspondent
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
25-04-25 06:37 pm
HK News Desk
ಪಹಲ್ಗಾಮ್ ದುಷ್ಕೃತ್ಯ ; ಐದು ವರ್ಷ ಕಾಲ ಪಾಕಿನಲ್ಲಿದ್...
25-04-25 02:54 pm
BSF jawan, Pakistan: ಗಡಿಯಲ್ಲಿ ಬಿಕ್ಕಟ್ಟು ; ಪಾಕ...
25-04-25 01:16 pm
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm