ಹುಡುಗ - ಹುಡುಗಿಯ ಜುಮ್ಮಾರೇ ಜುಮ್, ಮಾಲ್ ಮೂಲೆಯಲ್ಲಿ ಮೈಮರೆತ ಲವರ್ಸ್ ! ವಿಡಿಯೋ ವೈರಲ್

09-11-21 08:36 pm       Mangaluru Correspondent   ಕರಾವಳಿ

ನಗರದ ಪಾಂಡೇಶ್ವರದ ಫೋರಂ ಮಾಲ್ ನಲ್ಲಿ ಹರೆಯದ ಹುಡುಗ ಮತ್ತು ಹುಡುಗಿಯ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ.

ಮಂಗಳೂರು, ನ.9: ನಗರದ ಪಾಂಡೇಶ್ವರದ ಫೋರಂ ಮಾಲ್ ನಲ್ಲಿ ಹರೆಯದ ಹುಡುಗ ಮತ್ತು ಹುಡುಗಿಯ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಹುಡುಗನೊಬ್ಬ ಬುರ್ಖಾ ಧರಿಸಿದ ಹುಡುಗಿಯನ್ನು ಅಪ್ಪಿ ಹಿಡಿದು ಕಿಸ್ ಮಾಡುತ್ತಿರುವ ದೃಶ್ಯವನ್ನು ಕಟ್ಟಡದ ಹೊರಭಾಗದಲ್ಲಿ ದೂರದಲ್ಲಿ ನಿಂತಿದ್ದ ಯಾರೋ ಝೂಮ್ ಮಾಡಿ ವಿಡಿಯೋ ಚಿತ್ರೀಕರಿಸಿದ್ದಾರೆ.

ವಿಡಿಯೋ ಮಂಗಳೂರಿನ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಿದ್ದು ಕುತೂಹಲ ಸೃಷ್ಟಿಸಿದೆ. ಫೋರಂ ಮಾಲ್ ನ ಹೊರಭಾಗದ ಬಾಲ್ಕನಿಯಲ್ಲಿ ಘಟನೆ ನಡೆದಿದ್ದು, ಮಾಲ್ ಗೆ ಬಂದಿದ್ದ ಸ್ನೇಹಿತರು ಈ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾರು, ಎಲ್ಲಿಯವರು ಈ ರೀತಿ ವರ್ತಿಸಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಯಾರೋ ಲವರ್ಸ್ ಆಗಿರಬೇಕು ಅನ್ನುವ ಮಾತು ಕೇಳಿಬರುತ್ತಿದೆ.

ಕೆಲವರ ಪ್ರಕಾರ, ಮಂಗಳೂರಿನ ಮಾಲ್ ಗಳಲ್ಲಿ ಈ ರೀತಿಯ ವರ್ತನೆ ಕಾಮನ್ ಅನ್ನುವಂತ ಆರೋಪ ಕೇಳಿಬರುತ್ತಿದೆ. ಫೋರಂ ಮಾಲ್, ಸಿಟಿಸೆಂಟರ್ ಮಾಲ್ ಹೀಗೆ ಕೆಲವು ಕಡೆ ಸಂಜೆಯಾಗುತ್ತಿದ್ದಂತೆ ಲವರ್ಸ್ ಮೂಲೆಗಳಲ್ಲಿ ನಿಂತಲ್ಲೇ ಮೈಮರೆಯುತ್ತಾರೆ ಅನ್ನುವ ಮಾತುಗಳಿವೆ. ಆದರೆ, ಒಳಭಾಗದಲ್ಲಿ ಸಾಧರಣವಾಗಿ ಸಿಸಿಟಿವಿಗಳು ಇರೋದ್ರಿಂದ ಮತ್ತು ಭದ್ರತಾ ಸಿಬಂದಿ ಇರುವುದರಿಂದ ಇಂಥವು ನಡೆಯಲ್ಲ. ಹೊರಭಾಗದಲ್ಲಿ ಮತ್ತು ಪಾರ್ಕಿಂಗ್ ಏರಿಯಾದಲ್ಲಿ ಕಾಲೇಜು ವಿದ್ಯಾರ್ಥಿಗಳು, ಲವ್ವಲ್ಲಿ ಬಿದ್ದವರು ಒಂದರೆ ಕ್ಷಣಕ್ಕೆ ಮೈಮರೆಯುತ್ತಾರೆ.

ಇದೀಗ ವಿಡಿಯೋ ವೈರಲ್ ಆಗಿರುವ ಪ್ರಕರಣದಲ್ಲಿ ಹಾಡ ಹಗಲಲ್ಲೇ ಹುಡುಗ- ಹುಡುಗಿಯ ವರ್ತನೆ ಹೇಸಿಗೆ ಹುಟ್ಟಿಸಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯೇ ಬ್ಯಾರಿ ಭಾಷೆಯಲ್ಲಿ ಹುಡುಗ - ಹುಡುಗಿಯ ಬಗ್ಗೆ ಬೈಯುತ್ತಿರುವ ಆಡಿಯೋ ಇದ್ದು, ಜನರು ಇದನ್ನು ನೋಡಿ ಫಾರ್ವರ್ಡ್ ಮಾಡುತ್ತಿದ್ದಾರೆ. 

Mangalore Video of Couple Lovers Kissing in intimate condition at Forum Mall goes viral on social media.