ಬ್ರೇಕಿಂಗ್ ನ್ಯೂಸ್
04-11-21 12:44 pm Mangaluru Correspondent ಕರಾವಳಿ
ಉಳ್ಳಾಲ, ನ.4: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ, ಪಿಲಾರು ಪಳ್ಳ ಪ್ರದೇಶಗಳಲ್ಲಿ ಚಿರತೆ ಸುತ್ತಾಡುತ್ತಿರುವ ಬಗ್ಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಕಾರಣ ಇಂದು ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿಲಾರು ಪಳ್ಳ ನಿವಾಸಿ ಶಿವರಾಜ್ ಪೊಣ್ಣುಸ್ವಾಮಿ ಎಂಬವರು ಮೊನ್ನೆ ಶನಿವಾರ ರಾತ್ರಿ 9.30 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಗಳ ಮನೆಗೆ ತೆರಳುತ್ತಿದ್ದ ವೇಳೆ ಮನೆಯ ಬಳಿಯೇ ಚಿರತೆಯೊಂದು ರಸ್ತೆ ದಾಟಿ ಪೊದೆಯೊಳಗೆ ನುಗ್ಗಿದನ್ನ ಕಣ್ಣಾರೆ ಕಂಡಿದ್ದರು. ಮೊದಲಿಗೆ ಶಿವರಾಜ್ ಅವರು ಬೆಕ್ಕೆಂದು ಗ್ರಹಿಸಿದರೂ ಅದರ ಉದ್ದನೆಯ ಬಾಲ ಮತ್ತು ಬಣ್ಣವನ್ನ ಕಂಡು ಸಣ್ಣ ಗಾತ್ರದ ಚಿರತೆಯೆಂದು ಮನದಟ್ಟು ಮಾಡಿದ್ದು ಈ ಬಗ್ಗೆ ಮಾಧ್ಯಮಕ್ಕೂ ಮಾಹಿತಿ ನೀಡಿದ್ದರು.
ಕುಂಪಲ ಸರಳಾಯ ಕಾಲನಿ ನಿವಾಸಿ ಮೌರಿಷ್ ಡಿಸೋಜ ಅವರು ಶುಕ್ರವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಸಣ್ಣ ಗಾತ್ರದ ಚಿರತೆ ಎದುರಾಗಿದ್ದು ಆಕ್ರೋಶದಿಂದ ಮೌರಿಷ್ ಅವರನ್ನು ದಿಟ್ಟಿಸಿ ಭುಸುಗುಟ್ಟಿ ಮರೆಯಾಗಿತ್ತು. ಈ ಬಗ್ಗೆ ಮೌರಿಷ್ ಡಿ ಸೋಜಾ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.




ಕುಂಪಲ ಬಾಲಕೃಷ್ಣ ಮಂದಿರ ಪರಿಸರದ ಕೃಷ್ಣನಗರ ಎಂಬಲ್ಲಿನ ಒಂದು ಎಕರೆ ಕಾಡು ಪ್ರದೇಶದಲ್ಲಿ ಬೀದಿ ನಾಯಿಯನ್ನ ಕಾಡು ಪ್ರಾಣಿ ಅರ್ಧ ಭಕ್ಷಿಸಿದ ಸ್ಥಿತಿಯಲ್ಲಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಆ ಪ್ರದೇಶಕ್ಕೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಲ್ಲಿ ಯಾವುದೇ ಪುರಾವೆ ದೊರೆತಿಲ್ಲ. ಇಬ್ಬರು ಪ್ರತ್ಯಕ್ಷದರ್ಶಿಗಳು ಚಿರತೆಯನ್ನ ಕಂಡಂತಹ ಪ್ರದೇಶದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇನ್ನು ಕುಂಪಲ, ಪಿಲಾರುವಿನ ಸ್ಥಳೀಯ ವಾಟ್ಸಪ್ ಗ್ರೂಪ್ ಗಳಲ್ಲಿ ಚಿರತೆಯೊಂದು ಪೊದೆಯೊಳಗೆ ನುಗ್ಗುತ್ತಿರುವ ಫೋಟೊ ವೈರಲ್ ಆಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡುವಂತಾಗಿದೆ. ವಾಟ್ಸಪ್ ಗ್ರೂಪಲ್ಲಿ ಹರಿದಾಡುತ್ತಿರುವ ಚಿರತೆಯ ಫೋಟೊ ಕುಂಪಲ, ಪಿಲಾರು ಪ್ರದೇಶದ್ದೇ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಕುಂಪಲ, ಪಿಲಾರು ಪ್ರದೇಶದಲ್ಲಿ ಚಿರತೆ ಇರುವಿಕೆಯ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಬಿಟ್ಟರೆ ಬೇರೆ ಯಾವುದೇ ಸಿಸಿಟಿವಿ ದಾಖಲೆ, ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಆದರೂ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದು ಮತ್ತೆ ಚಿರತೆಯನ್ನ ಯಾರಾದರೂ ಕಂಡಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದ್ದೇವೆ. ಚಿರತೆ ಇರುವುದು ಖಾತರಿಯಾದರೆ ಬೋನನ್ನು ಇಟ್ಟು ಕಾರ್ಯಾಚರಣೆ ನಡೆಸುವುದಾಗಿ ಸ್ಥಳ ಪರಿಶೀಲಿಸಿದ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ತಿಳಿಸಿದ್ದಾರೆ.
ಸ್ಥಳೀಯರಾದ ಸಚಿನ್ ಮಡಿವಾಳ, ಕೊಣಾಜೆ ಬೀಟ್ ಫಾರೆಸ್ಟ್ ಗಾರ್ಡ್ ಸವಿತಾ ಗಟ್ಟಿ, ಅರಣ್ಯ ರಕ್ಷಕಿ ಸೌಮ್ಯ ಕೆ. ಮೊದಲಾದವರು ಜೊತೆಗಿದ್ದರು.
Mangalore Kumpala Resident spots Cheetah near Pillar Forest officials visit spot. Few days ago they were rumours that Cheetah was seen by some people but again last night Pillar resident who saw the cheetah has put localities in great fear.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm