ಬ್ರೇಕಿಂಗ್ ನ್ಯೂಸ್
01-11-21 01:55 pm Mangaluru Correspondent ಕರಾವಳಿ
ಉಳ್ಳಾಲ, ಅ.31: ಸೋಮೇಶ್ವರ ಕಡಲ ಕಿನಾರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರಾವಳಿ ಕಾವಲು ಪಡೆಯ ತಾತ್ಕಾಲಿಕ ಜೀವರಕ್ಷಕ ಸಿಬ್ಬಂದಿ ಅಶೋಕ್ ಸೋಮೇಶ್ವರ ಅವರನ್ನು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಪ್ರಶಸ್ತಿ ಪಡೆದವರಲ್ಲಿ ಬಹುತೇಕ ಉಳ್ಳಾಲದವರಿಗೇ ಸಿಂಹಪಾಲು ಸಿಕ್ಕಿದೆ.
ಸೋಮೇಶ್ವರ ಕಡಲ ತೀರದಲ್ಲಿ ಕರಾವಳಿ ಕಾವಲು ಪಡೆಯ ಜೀವರಕ್ಷಕ ವಿಭಾಗದ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಶೋಕ್ ಸೋಮೇಶ್ವರ ಅವರು ತನ್ನ ಪ್ರಾಣದ ಹಂಗು ತೊರೆದು ಸಮುದ್ರ ಪಾಲಾಗುತ್ತಿದ್ದ ಅನೇಕ ಪ್ರವಾಸಿಗರ ಅಮೂಲ್ಯ ಪ್ರಾಣವನ್ನ ರಕ್ಷಿಸಿದ್ದಾರೆ. ಅಶೋಕ್ ಅವರ ನಿಸ್ವಾರ್ಥ ಸಾಹಸದ ಸೇವೆಗೆ 2021ರ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಇಂದು ಬೆಳಗ್ಗೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್.ಅಂಗಾರ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಅಶೋಕ್ ಸೋಮೇಶ್ವರ ಅವರ ಸಾಹಸಮಯ ಜೀವ ರಕ್ಷಕ ಸೇವೆಯನ್ನ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಅವರನ್ನ ಗುರುತಿಸಿ ಗೌರವಿಸಿದೆ. ಅದರಲ್ಲೂ ಅಶಕ್ತರ ಆಶಾಕಿರಣವಾಗಿ ಕರಾವಳಿಯಲ್ಲಿ ಗುರುತಿಸಿಕೊಂಡಿರುವ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್ ಅಶೋಕ್ ಅವರನ್ನ ಸೋಮೇಶ್ವರ ಕಡಲ ತೀರದಲ್ಲಿಯೇ ಸನ್ಮಾನಿಸಿ ಗೌರವಿಸಿತ್ತು. ಅಶೋಕ್ ಅವರ ಪ್ರಾಮಾಣಿಕ ಸೇವೆಗೆ ಸಾಯಿ ಪರಿವಾರ್ ನ ಗೌರವ ಸಲಹೆಗಾರರೂ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಅವರು ಸರಕಾರದಿಂದ ಸೂಕ್ತ ಗೌರವ ಮತ್ತು ವೃತ್ತಿ ಭದ್ರತೆಯನ್ನ ನೀಡೋದಾಗಿಯೂ ಹೇಳಿದ್ದರು. ಇದೀಗ ಸರಳ, ಪ್ರಾಮಾಣಿಕ ಸೇವಕರಾದ ಅಶೋಕ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಉಳ್ಳಾಲಕ್ಕೆ ಸಿಂಹಪಾಲು
ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಉಳ್ಳಾಲದ ಸಾಧಕರಿಗೆ ಸಿಂಹಪಾಲು ಸಿಕ್ಕಿದೆ. ಜಿಲ್ಲೆಯ ಒಟ್ಟು 58 ಪ್ರಶಸ್ತಿಗಳಲ್ಲಿ ಉಳ್ಳಾಲಕ್ಕೆ ಈ ಬಾರಿ 7 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಸಮಾಜ ಸೇವೆಯಲ್ಲಿ ಜೀವರಕ್ಷಕರಾದ ಅಶೋಕ್ ಸೋಮೇಶ್ವರ, ಸಾಹಿತ್ಯದಲ್ಲಿ ಡಾ.ಅರುಣ್ ಉಳ್ಳಾಲ್, ಮಾಧ್ಯಮ ಕ್ಷೇತ್ರದಲ್ಲಿ ಪೊಸಕುರಲ್ ತುಳು ವಾಹಿನಿಯ ನಿರ್ದೇಶಕರಾದ ವಿಧ್ಯಾಧರ ಶೆಟ್ಟಿ ವೈಯಕ್ತಿಕ ನೆಲೆಯಲ್ಲಿ ಪ್ರಶಸ್ತಿ ಬಾಚಿದ್ದು, ಸಂಘ ಸಂಸ್ಥೆಗಳಾದ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್, ಉಳ್ಳಾಲದ ಹೆಲ್ಪ್ ಇಂಡಿಯಾ ಫೌಂಡೇಷನ್, ಕುಂಪಲದ ಕೇಸರಿ ಮಿತ್ರವೃಂದ ಮತ್ತು ಕಿನ್ಯದ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲವು ಪ್ರಶಸ್ತಿ ಬಾಚಿಕೊಂಡಿದೆ.
Mangalore Life garud Ashok Someshwara conferred with Rajyotasava award 2021.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm