ಡಿಕೆಶಿ ಕಲೆಕ್ಷನ್ ಗಿರಾಕಿಯೆಂದು ನಾವು ಹೇಳಿಲ್ಲ, ಕಾಂಗ್ರೆಸ್ ನಾಯಕರೇ ಹೇಳ್ತಿದಾರೆ, ಸಿದ್ದರಾಮಯ್ಯ ಹೇಳಿಸಿದ್ದಾರೆ ! 

13-10-21 08:56 pm       Mangaluru Correspondent   ಕರಾವಳಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರಿಬ್ಬರು ಖಾಸಗಿಯಾಗಿ ಕೇವಲವಾಗಿ ಮಾತನಾಡಿಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಮಂಗಳೂರು, ಅ.13: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರಿಬ್ಬರು ಖಾಸಗಿಯಾಗಿ ಕೇವಲವಾಗಿ ಮಾತನಾಡಿಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ವ್ಯಂಗ್ಯವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ನ ಭ್ರಷ್ಟಾಚಾರ, ಕರ್ಮಕಾಂಡ ಇವತ್ತು ಬಯಲಿಗೆ ಬಂದಿದೆ. ಇವರು ಕಲೆಕ್ಷನ್ ಗಿರಾಕಿಗಳು ಅಂತ ನಾವು ಹೇಳಿಲ್ಲ, ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಬಹಳ ಕೀಳಾಗಿ ಕಲೆಕ್ಷನ್ ಗಿರಾಕಿ ಎಂದು ಹೇಳಿ ಅವರು ನಡೆಸುವ ಹಫ್ತಾ ವಸೂಲಿ, ಭ್ರಷ್ಟಾಚಾರ ಎಲ್ಲವನ್ನೂ ಹೊರಗೆ ಹಾಕಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ. 

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನಳಿನ್, ಅವರ ಹುಡುಗರಲ್ಲೇ ನೂರಾರು ಕೋಟಿ ಇದೆ ಅಂತ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಿಬಿಐ ಮತ್ತು ಐಟಿ ತನಿಖೆ ಆಗಬೇಕು. ಈ ಹಿಂದೆ ಡಿಕೆಶಿಯವ್ರು ಐಟಿ ರೈಡ್ ವೇಳೆ ಅದು ರಾಜಕೀಯ ಪ್ರೇರಿತ ಅಂದಿದ್ರು. ಆದ್ರೆ ಇವತ್ತು ಯಾವುದೇ ರಾಜಕೀಯ ಪ್ರೇರಿತ ಇಲ್ಲದೇ ಕಾಂಗ್ರೆಸ್ ಕಚೇರಿಯಲ್ಲೇ ಇಬ್ಬರು ಮಾತನಾಡಿದ್ದಾರೆ.‌ ಉಗ್ರಪ್ಪ ಮತ್ತು ಸಲೀಂ ಕಾಂಗ್ರೆಸ್ ನ ಭ್ರಷ್ಟಾಚಾರವನ್ನು ಅನಾವರಣ ಗೊಳಿಸಿದ್ದಾರೆ. ಇದರ ಜೊತೆಗೆ ಇದರ ಹಿಂದೆ ಡಿಕೆಶಿ ಮುಗಿಸೋ ತಂತ್ರಗಾರಿಕೆಯೂ ಇದೆ.‌ ಡಿಕೆಶಿ ಪ್ರಭಾವ ಕಡಿಮೆ ಮಾಡಲು ಮತ್ತು ಕುಗ್ಗಿಸಲು ಸಿದ್ದರಾಮಯ್ಯ ಮಾಡಿರೋ ತಂತ್ರಗಾರಿಕೆ ಇರಬಹುದು.‌ ಸಿದ್ದರಾಮಯ್ಯ ಅವರೇ, ಉಗ್ರಪ್ಪ ಹಾಗೂ ಸಲೀಂ ಮೂಲಕ ಈ ಹೇಳಿಕೆ ಮಾಡಿಸಿದ್ದಾರೆ. 

ಇದರ ಹಿಂದಿನ ಸತ್ಯಾಸತ್ಯತೆ ಬಯಲಾಗಲು ತನಿಖೆ ಆಗಬೇಕು, ಆಗ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ತಾರೆ. ಇದನ್ನ ಬಿಜೆಪಿ ಹೇಳಿದ್ರೆ ರಾಜಕಾರಣ ಅಂತಾರೆ, ಆದ್ರೆ ಉಗ್ರಪ್ಪ ಡಿಕೆಶಿಯ ತಕ್ಕಡಿ ಮೇಲೇಳಲ್ಲ ಅಂದಿದ್ದಾರೆ.‌ ಕಾಂಗ್ರೆಸ್ ಪಕ್ಷ ನಾಶದ ಅಂಚಿನಲ್ಲಿದೆ, ಮತ್ತೆ ಮೇಲೆ ಏಳೋದೇ ಇಲ್ಲ. ಮುಂದಿನ ಚುನಾವಣೆ ಮತ್ತು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ, ಅದಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ನಾಯಕರ ಈ ಹೇಳಿಕೆಗಳು ಬಿಜೆಪಿ ಅಥವಾ ರಾಜಕೀಯ ಪ್ರೇರಿತವಲ್ಲ. ಸಿದ್ದರಾಮಯ್ಯನವರ ಗುಂಪುಗಾರಿಕೆ ಪ್ರೇರಿತ ಎಂದು ನಳಿನ್ ಕುಮಾರ್ ಕಟೀಲ್ ಟಾಂಗ್ ಇಟ್ಟಿದ್ದಾರೆ. 

ಮುಂದಿನ ಉಪ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರ ಈ ಭ್ರಷ್ಟಾಚಾರವನ್ನು ಜನರು ಗಮನಿಸುತ್ತಾರೆ. ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಜನ ನೀಡುತ್ತಾರೆ. ಹಾಗೆಂದು ಬಿಜೆಪಿ ಯಾವತ್ತೂ ಇವರ ಒಳಜಗಳದ ಲಾಭ ಪಡೆಯಲ್ಲ. ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಾ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನ ಭದ್ರತೆಗೆ ಯತ್ನಿಸ್ತಿದಾರೆ. ಜೆಡಿಎಸ್ ಈಗಾಗಲೇ ಸರ್ವನಾಶ ಆಗಿದೆ.‌ ಸಿದ್ದರಾಮಯ್ಯ ಒಬ್ಬ ಈ ರಾಜ್ಯದ ಹಿಟ್ಲರ್. ಅವರಿದ್ದಾಗ ರಾಜ್ಯದಲ್ಲಿ ಅತಿ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ.‌

ಸಿದ್ದರಾಮಯ್ಯ ಆರ್ ಎಸ್ ಎಸ್ ಗೆ ಬೈದಾಗ ಯೋಚನೆ ಮಾಡಬೇಕಿತ್ತು. ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಇವರ ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ. ಸಿದ್ದರಾಮಯ್ಯ ‌ಕುಟುಂಬಕ್ಕೆ ಆಸ್ತಿ ಮಾಡಿದ್ದಾರೆ.  ಆದರೆ ಒಂದು ಕಾಂಗ್ರೆಸ್ ಕಚೇರಿಯನ್ನೂ ಮಾಡಿಲ್ಲ.‌ ಆರ್ ಎಸ್ ಎಸ್ ಬಗ್ಗೆ ಮಾತನಾಡೋದು ಸಿದ್ದರಾಮಯ್ಯ ತಮ್ಮನ್ನು ಪ್ರಚಾರದಲ್ಲಿ ಉಳಿಸಿಕೊಳ್ಳಲು ಒಂದು ತಂತ್ರ ಅಷ್ಟೇ. ಈಗ ಸಲೀಂ ಹಾಗು ಉಗ್ರಪ್ಪ ಅವರಿಂದ ಹೊಸ ಹೇಳಿಕೆಯನ್ನು ಲೀಕ್  ಮಾಡಿಸಿದ್ದಾರೆ. ಡಿಕೆಶಿ ಅವರನ್ನು ಮುಗಿಸಲು ಸಿದ್ದರಾಮಯ್ಯ ಅವರ ಇನ್ನೊಂದು ಕುತಂತ್ರ.‌ ಜೆಡಿಎಸ್ ನಲ್ಲಿ ಇದ್ದಾಗಲೂ ದೇವೇಗೌಡರನ್ನ ತುಳಿದವರು ಇವರು. ಸೋನಿಯಾ ಗಾಂಧಿ ಬಗ್ಗೆಯೇ ಕೆಟ್ಟ ಶಬ್ದದಲ್ಲಿ ಮಾತನಾಡಿದವರು ಮತ್ತೆ ಅದೇ ಸೋನಿಯಾ ಕಾಲಿಗೆ ಬಿದ್ದಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌

 Congress gossip caught on camera DK Shivkumar called collection king slams Naleen Kumar Kateel in Mangalore.  Video of Karnataka Congress has gone viral where in a conversation that indicates scams in the Irrigation department is being shown. The conversation is between party media coordinator M A Saleem and former Lok Sabha member VS Ugrappa. They talk about how Party President DK Shivakumar receives bribes and how one of his close aides has collected between 50 and 100 crores. They also talk about how DK Shivakumar stutters when he speaks, as if he's drunk. Watch the video to know more.