ಬ್ರೇಕಿಂಗ್ ನ್ಯೂಸ್
12-10-21 12:16 pm Mangalore Reporter ಕರಾವಳಿ
ಮಂಗಳೂರು, ಅ.12 : ತೆಂಕುತಿಟ್ಟಿನ ಅಗ್ರಪಂಕ್ತಿಯ ಭಾಗವತರಾಗಿದ್ದ ಪದ್ಯಾಣ ಗಣಪತಿ ಭಟ್ (66) ಇಂದು ನಸುಕಿನ ಜಾವದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುದೀರ್ಘ 40 ವರ್ಷಗಳಲ್ಲಿ ತೆಂಕುತಿಟ್ಟು ಯಕ್ಷಗಾನದಲ್ಲಿ ಭಾಗವತರಾಗಿ ಮಿಂಚಿದ್ದ ಪದ್ಯಾಣ ಗಣಪತಿ ಭಟ್ಟರು, ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ವ್ಯಕ್ತಿತ್ವ. ಬಂಟ್ವಾಳ ತಾಲೂಕಿನ ಕನ್ಯಾನ ಬಳಿಯ ಕೇರಳದ ಗಡಿಭಾಗ ಕರೋಪಾಡಿ ಗ್ರಾಮದ ಪದ್ಯಾಣ ಮತ್ತು ಮಾಂಬಾಡಿ ಮನೆತನ ಯಕ್ಷಗಾನಕ್ಕೆ ಕೊಡುಗೆ ನೀಡಿದ ಮೇರು ಪರಂಪರೆಯುಳ್ಳದ್ದು.
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಗೋಳ್ತಾಜೆಯಲ್ಲಿ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನಿಸಿದ್ದ ಗಣಪತಿ ಭಟ್ಟರು ಪದ್ಯಾಣ ಕುಟುಂಬಸ್ಥರು. ಮನೆಯಲ್ಲಿನ ಯಕ್ಷಗಾನದ ವಾತಾವರಣವೇ ಯಕ್ಷರಂಗದತ್ತ ಅವರನ್ನು ಸೆಳೆದಿತ್ತು. ತಮ್ಮ ಅಜ್ಜನ ಕಾಲದಿಂದಲೂ ಪದ್ಯಾಣದ ಮನೆತನ ಯಕ್ಷಗಾನದಲ್ಲಿ ತಮ್ಮದೇ ಆದ ಕೊಡುಗೆ ಕೊಟ್ಟಿತ್ತು. ಪದ್ಯಾಣ ಅಂದರೆ, ಅಲ್ಲಿನ ಪ್ರತಿ ಮನೆಯಲ್ಲೂ ಚೆಂಡೆ, ಧೀಂಗಿಣದ ವಾತಾವರಣ ಬೆಳೆದಿತ್ತು. ಒಂದು ಕಾಲದಲ್ಲಿ ಪದ್ಯಾಣ ಮೇಳವೂ ಇತ್ತು.
ಆ ಕಾಲದಲ್ಲಿ ಯಕ್ಷಗಾನದ ಭಾಗವತಿಕೆಯಲ್ಲಿ ಹೆಸರು ಮಾಡಿದ್ದ ತಮ್ಮ ಅಜ್ಜ ಮಾಂಬಾಡಿ ನಾರಾಯಣ ಭಟ್ಟರೇ ಪದ್ಯಾಣ ಗಣಪತಿ ಭಟ್ಟರಿಗೆ ಮೊದಲ ಗುರು. ತಮ್ಮ 16ರ ಹರೆಯದಲ್ಲೇ ಚೌಡೇಶ್ವರೀ ಮೇಳದಲ್ಲಿ ಕಲಾವಿದರಾಗಿ ಸೇರಿದ್ದ ಗಣಪತಿ ಭಟ್ಟರು, ಮುಂದಿನ ವರ್ಷ ಕುಂಡಾವು ಮೇಳ ಪ್ರವೇಶಿಸಿ ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ಮುಂದೆ ಕಸ್ತೂರಿ ವರದರಾಯ ಪೈ ಮಾಲೀಕತ್ವದ ಸುರತ್ಕಲ್ ಮೇಳ ಸೇರಿದ ಪದ್ಯಾಣ ತನ್ನ ವ್ಯವಸಾಯ ಜೀವನದುದ್ದಕ್ಕೂ ಸಿದ್ಧಿ- ಪ್ರಸಿದ್ಧಿ ಸಹಿತ ಅಪಾರ ಯಶಸ್ಸು ಪಡೆದಿದ್ದರು.
40 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಕೀರ್ತಿ ಪದ್ಯಾಣರದ್ದು. ಪದ್ಯಾಣ ಗಣಪತಿ ಭಟ್ಟರ ಶಿಷ್ಯವೃಂದವೂ ಅಪಾರ ಮಂದಿ ಇದ್ದಾರೆ.
ಸಂಗೀತವನ್ನು ಭಾಗವತಿಕೆಗೆ ಒಗ್ಗಿಸಿಕೊಂಡು ತಮ್ಮದೇ ಶೈಲಿ ರೂಪಿಸಿಕೊಂಡಿದ್ದ ಪದ್ಯಾಣರು, ಕೊನೆಗಾಲದಲ್ಲಿಯೂ ವಿಶಿಷ್ಟ ಕಂಠಸಿರಿಯನ್ನು ಉಳಿಸಿಕೊಂಡಿದ್ದರು. ತಮ್ಮ ಕಲ್ಮಡ್ಕದ ಮನೆಯಲ್ಲೇ ನೆಲೆಸಿದ್ದ ಗಣಪತಿ ಭಟ್ಟರು ಇಂದು ನಮ್ಮನ್ನಗಲಿದ್ದಾರೆ. ದಿಢೀರ್ ಆಗಿ ಯಕ್ಷರಂಗದ ನಂಟು ಕಳಚಿ ದೇಹ ಬಿಟ್ಟಗಲಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Padayana Ganapathi Bhat has passed away. He died of a heart attack this morning after suffering from age-related illness, family sources said.
24-04-25 06:39 pm
Bangalore Correspondent
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
24-04-25 04:59 pm
HK News Desk
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
Pahalgam terror attack, Pakistani terrorists:...
23-04-25 09:25 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm