ವಾರಂಟ್ ಪ್ರಕರಣ ; ಸುಳ್ಯ ನ್ಯಾಯಾಲಯಕ್ಕೆ ನಾಳೆ ಡಿಕೆಶಿ ಹಾಜರು

04-10-21 03:51 pm       Mangaluru Correspondent   ಕರಾವಳಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊನೆಗೂ ವಾರಂಟ್ ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ಅ.5ರಂದು ಬೆಳಗ್ಗೆ 11.30ಕ್ಕೆ ಸುಳ್ಯ ನ್ಯಾಯಾಲಯಕ್ಕೆ ಸ್ವತಃ ಡಿಕೆಶಿ ಹಾಜರಾಗಲಿದ್ದಾರೆ.

ಸುಳ್ಯ, ಅ.4: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊನೆಗೂ ವಾರಂಟ್ ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ಅ.5ರಂದು ಬೆಳಗ್ಗೆ 11.30ಕ್ಕೆ ಸುಳ್ಯ ನ್ಯಾಯಾಲಯಕ್ಕೆ ಸ್ವತಃ ಡಿಕೆಶಿ ಹಾಜರಾಗಲಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲಿದ್ದಾರೆ.

ಸಾಯಿ ಗಿರಿಧರ್ ರೈ ಎಂಬವರು ಸುಳ್ಯದಲ್ಲಿ ವಿದ್ಯುತ್ ಕೈಕೊಡುತ್ತಿದ್ದ ಬಗ್ಗೆ ಆರು ವರ್ಷಗಳ ಹಿಂದೆ ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗೆ ಫೋನ್ ಮಾಡಿ ಬೈದಿದ್ದರು. ಆನಂತರ, ಸಚಿವ ಡಿಕೆಶಿ ಸುಳ್ಯ ಎಇ ಮೂಲಕ ಗಿರಿಧರ್ ರೈ ವಿರುದ್ಧ ಪೊಲೀಸ್ ಕೇಸು ದಾಖಲಿಸಿದ್ದರು. ಪ್ರಕರಣ ಈಗ ಸುಳ್ಯ ನ್ಯಾಯಾಲಯದಲ್ಲಿದ್ದು, ನ್ಯಾಯಾಧೀಶರು ಸಾಕ್ಷಿದಾರ ಡಿಕೆಶಿಗೆ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡುವಂತೆ ವಾರಂಟ್ ನೀಡಿದ್ದರು. ಮೂರು ಬಾರಿ ವಾರಂಟ್ ನೀಡಿದರೂ, ಕೋರ್ಟಿಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರಿಂದ ನ್ಯಾಯಾಧೀಶರು ಗರಂ ಆಗಿದ್ದರು.

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಎಚ್ಚೆತ್ತ ಡಿಕೆಶಿ, ಅ.5ರಂದು ಸುಳ್ಯ ನ್ಯಾಯಾಲಯಕ್ಕ ಹಾಜರಾಗಲು ನಿರ್ಧರಿಸಿದ್ದಾರೆ. ಇದರ ಜೊತೆಗೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗಲು ಪ್ಲಾನ್ ಹಾಕಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ ಎಂಟುಪ ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿರುವ ಡಿಕೆಶಿ, ಅಲ್ಲಿಂದ ರಸ್ತೆ ಮೂಲಕ ಸುಳ್ಯಕ್ಕೆ ತೆರಳಲಿದ್ದಾರೆ. ಆನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಲಿದ್ದು ಮಧ್ಯಾಹ್ನ ಪೂಜೆ ಬಳಿಕ ಮೂರು ಗಂಟೆಗೆ ಅಲ್ಲಿಂದ ನಿರ್ಗಮಿಸಿ ಸಂಜೆ 5 ಗಂಟೆಗೆ ಮಂಗಳೂರು ತಲುಪಲಿದ್ದಾರೆ. ರಾತ್ರಿ ಎಂಟು ಗಂಟೆ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ತೆರಳಲಿದ್ದಾರೆ. 

Karnataka Pradesh Congress Committee (KPCC) president D K Shivakumar will attend a court hearing at 11.30 am on October 5 as a witness with regards to a telephonic conversation case that was held between him and Sai Giridhar, a resident of Bellare six years ago.