ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಇದ್ದಂತೆ, ಅವ್ರು ಆಡಳಿತದಲ್ಲಿದ್ದಾಗ ಅತಿ ಹೆಚ್ಚು ಕೊಲೆಗಳಾಗಿದ್ದವು ; ನಳಿನ್

29-09-21 12:11 pm       Mangaluru Correspondent   ಕರಾವಳಿ

ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಇದ್ದಂತೆ ಎಂದು ಪರೋಕ್ಷವಾಗಿ ಕರಾವಳಿಯಲ್ಲಿ ನಡೆದಿರುವ ಕೊಲೆಗಳನ್ನು ಉಲ್ಲೇಖಿಸಿ, ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರು, ಸೆ.29: ಆರೆಸ್ಸೆಸ್ ತಾಲಿಬಾನ್ ಇದ್ದಂತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಇದ್ದಂತೆ ಎಂದು ಪರೋಕ್ಷವಾಗಿ ಕರಾವಳಿಯಲ್ಲಿ ನಡೆದಿರುವ ಕೊಲೆಗಳನ್ನು ಉಲ್ಲೇಖಿಸಿ, ಗಂಭೀರ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯರೇ ಒಬ್ಬ ಭಯೋತ್ಪಾದಕ ಇದ್ದಂತೆ. ಕಾಂಗ್ರೆಸ್ ನಲ್ಲಿಯೇ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಾಲಿಬಾನ್ ರೀತಿಯ ಸಂಸ್ಕೃತಿ ಅವರದ್ದೇ. ಕಳೆದ ಬಾರಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅತಿ ಹೆಚ್ಚು ಹತ್ಯೆಗಳು ನಡೆದಿದ್ದವು.

ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೇ ದೀಪಕ್ ರಾವ್, ಶರತ್ ಮಡಿವಾಳ, ಪ್ರಶಾಂತ ಪೂಜಾರಿ ಹೀಗೆ ಹಲವು ಹಿಂದು ಕಾರ್ಯಕರ್ತರ ಹತ್ಯೆಗಳು ನಡೆದಿದ್ದವು. ರಾಜ್ಯದಲ್ಲಿ ಒಟ್ಟು 24 ಮಂದಿ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಕೊಲ್ಲಲಾಗಿತ್ತು. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಅತಿ ಹೆಚ್ಚು ಹತ್ಯೆಗಳು ನಡೆದಿತ್ತು ಎನ್ನುವುದೇ ತಾಲಿಬಾನ್ ಸಂಸ್ಕೃತಿ. ಅವರಲ್ಲಿನ ತಾಲಿಬಾನ್ ಮನೋಭಾವವನ್ನು ಸೂಚಿಸುತ್ತದೆ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಸಂಸದ ನಳಿನ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

Read: ಆರೆಸ್ಸೆಸಿಗರದ್ದು ತಾಲಿಬಾನಿಗಳದ್ದೇ ಸಂಸ್ಕೃತಿ, ಅವ್ರು ಹಿಟ್ಲರ್ ವಂಶಸ್ಥರು, ರಾಕ್ಷಸೀ ಪ್ರವೃತ್ತಿಯವರು ; ಸಿದ್ದರಾಮಯ್ಯ ಲೇವಡಿ

State bjp President Nalin Kumar Kateel slams Siddaramayya like a terrorist