ಹಸಿರು ಉಳಿಸಲು ವಿದ್ಯಾರ್ಥಿಗಳ ಗ್ರೀನ್ ವಾಕಥಾನ್ ; ಮಂಗಳೂರು ವಿವಿ ಆವರಣದಲ್ಲಿ ಚಾಲನೆ

25-09-21 03:13 pm       Mangaluru Correspondent   ಕರಾವಳಿ

ಸ್ವಚ್ಛ ಮನಸ್ಸು ಹೊಂದಿದ್ದರೆ ಮಾತ್ರ ಪರಿಸರವೂ ಸ್ವಚ್ಛವಾಗಲಿದೆ ಎಂದು ಮಂಗಳೂರು ವಿವಿಯ ಉಪಕುಲಪತಿ ಪಿ.ಎಸ್.ಯಡಪಡಿತ್ತಾಯ ಹೇಳಿದರು. 

ಉಳ್ಳಾಲ, ಸೆ.25: ಸ್ವಚ್ಛ ಮನಸ್ಸು ಹೊಂದಿದ್ದರೆ ಮಾತ್ರ ಪರಿಸರವೂ ಸ್ವಚ್ಛವಾಗಲಿದೆ ಎಂದು ಮಂಗಳೂರು ವಿವಿಯ ಉಪಕುಲಪತಿ ಪಿ.ಎಸ್.ಯಡಪಡಿತ್ತಾಯ ಹೇಳಿದರು. 

ಬ್ಯಾರೀಸ್ ಗ್ರೂಪ್ ಆಯೋಜಿಸಿರುವ "ಗ್ರೀನ್ ವಾಕಥಾನ್ 2021"ಕ್ಕೆ ಕೊಣಾಜೆ  ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದ ಮುಂದೆ ಚಾಲನೆ ನೀಡಿ ಮಾತನಾಡಿದರು. ನಮಗೆ ಜೀವ ಮೊದಲು, ಜೀವನ ಆಬಳಿಕ. ಜೀವ ಉಳಿಯಲು ಪ್ರಕೃತಿ ಮುಖ್ಯವಾಗಿದೆ. ಹಾಗಾಗಿ ಪ್ರಕೃತಿ ಉಳಿಸುವ ಕೈಂಕರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರಕೃತಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಆದರೆ ಪ್ರಕೃತಿಗೆ ನಾವೇನು ಕೊಡುತ್ತಿದ್ದೇವೆ ಎಂಬುದು ಮುಖ್ಯವಾಗಿದೆ. ಒಂದು ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಸಾಕಷ್ಟು ಮರಗಳನ್ನು ಕಡಿಯುತ್ತೇವೆ. ಆದರೆ ಮತ್ತೆ ಸಸಿ ನೆಡಲು ಮುಂದಾಗುವುದಿಲ್ಲ. ಸಸಿಗಳನ್ನು ನೆಟ್ಟರಷ್ಟೆ ಪರಿಸರ ಹಸುರೀಕರಣಗೊಳ್ಳಬಹುದು. ಪ್ರಕೃತಿ ಪ್ರೇಮ, ಪರಿಸರ ಸ್ವಚ್ಛತೆ ವಾಕಥಾನ್‌‌ ಉದ್ದೇಶವಾಗಿದೆ. ವಿಶ್ವದಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಇದು ಮನುಕುಲದ ಮೇಲೆ ಭಾರೀ ಪರಿಣಾಮ ಬೀರಿದೆ. ಹಾಗಾಗಿ ಭೂಮಿಯನ್ನು ರಕ್ಷಿಸಲು ಮಾನವನು ಅಪಾರವಾಗಿ ಶ್ರಮಿಸಬೇಕಿದೆ. ಪ್ರಕೃತಿಯ ಮುಂದೆ ನಾವು ಏನೂ ಅಲ್ಲ. ಪ್ರಕೃತಿಗಿಂತ ದೊಡ್ಡವರೂ ನಾವಲ್ಲ. ಪ್ರಕೃತಿಯನ್ನು ಉಳಿಸಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದರು. 

ಬಿಐಟಿ ಮತ್ತು ಬೀಡ್ಸ್ ಹಮ್ಮಿಕೊಂಡ "ವಿಶ್ವ ಹಸಿರು  ಸಪ್ತಾಹ"- "ಗ್ರೀನ್ ವಾಕಥಾನ್"  ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಿಂದ ಆರಂಭಗೊಂಡು ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ (ಬಿಟಿಪಿ)ನತ್ತ ಸಾಗಿತು.    

ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ. ಮಂಜೂರು ಬಾಷಾ, ಬೀಡ್ಸ್ ಪ್ರಾಂಶುಪಾಲ ಎ.ಆರ್. ಅಶೋಕ್ ಮೆಂಡೋನ್ಸ, ಡಾ.ಅಝೀಝ್ ಮುಸ್ತಫಾ, ವೆಂಕಟೇಶ್ ಪೈ, ಸಂತೋಷ್ ಡಿಸೋಜ, ಬಿಐಟಿ- ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಮೊದಲಾದವರು ಇದ್ದರು.

The 'Green Walkathon - 2021' organized by Beary's Group was initiated in front of Mangala Auditorium of Mangalore University on Saturday September 25 morning. The Green Walkathon, which is a part of the International Green Week - 2021 that started from in front of the university's Mangala Auditorium moved towards Beary's Turning Point at Deralakatte.