ಪಣೋಲಿಬೈಲಿನಲ್ಲಿ ಮಹಿಳೆಯ ಸರ ಕಿತ್ತು ಓಡಿದ್ದ ಪ್ರಕರಣ ; ಇಬ್ಬರು ಯುವಕರ ಬಂಧನ

18-09-21 10:35 pm       Mangaluru Correspondent   ಕರಾವಳಿ

 ಪಣೋಲಿಬೈಲು ಕ್ಷೇತ್ರದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

ಬಂಟ್ವಾಳ, ಸೆ.18 : ಪಣೋಲಿಬೈಲು ಕ್ಷೇತ್ರದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

ಸೆ.8 ರಂದು ಪಣೋಲಿಬೈಲು ಬಳಿ ರಸ್ತೆ ಬದಿ ನಡೆದುಕೊಂಡು ತೆರಳುತ್ತಿದ್ದ ವತ್ಸಲಾ (53) ಎಂಬವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದ ಇಬ್ಬರು ಕರಿಮಣಿ ಸರ ಕಿತ್ತು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿದ ನಗರ ಠಾಣೆ ಪೊಲೀಸರು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ನಿವಾಸಿ ರೋಹಿತ್ (22) ಹಾಗೂ ಅದೇ ಗ್ರಾಮದ ಲೋಹಿತ್ ಪಿ.ಆರ್ (20) ಎಂಬವರನ್ನು ಬಂಧಿಸಿದ್ದಾರೆ. 

ಆರೋಪಿಗಳ ಕೈಯಿಂದ ಸುಲಿಗೆ ಮಾಡಿದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಅಪಾಚಿ ಮೋಟಾರು ಸೈಕಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಸೊತ್ತಿನ ಮೌಲ್ಯ 1.35 ಲಕ್ಷ ಆಗಿರುತ್ತದೆ. ಅತೀ ಕ್ಷಿಷ್ಟವಾಗಿದ್ದ ಪ್ರಕರಣವನ್ನು ಶೀಘ್ರದಲ್ಲಿ ಪತ್ತೆ ಮಾಡಿದ ಬಂಟ್ವಾಳ ಪೊಲೀಸರ ತಂಡವನ್ನು ಜಿಲ್ಲಾ ಎಸ್ಪಿ ಋಷಿಕೇಶ್ ಸೋನವಾಣೆ ಅಭಿನಂದನೆ ಸಲ್ಲಿಸಿದ್ದಾರೆ. ‌

Two arrested for chain snatching in Bantwal. Rohith and Lohith are the two arrested.