ಬಿಜೆಪಿಯವ್ರಿಗೆ ಕೆಡಹುವುದೇ ಸಂಸ್ಕೃತಿ, ಜನರ ಭಾವನೆಗಳನ್ನು ಕೆಡವಿದವರು ದೇವಸ್ಥಾನ ಒಡೆದಿದ್ದಾರೆ !

15-09-21 05:19 pm       Mangaluru Correspondent   ಕರಾವಳಿ

ಮೈಸೂರಿನ ನಂಜನಗೂಡಿನಲ್ಲಿ ಬಿಜೆಪಿ ಸರಕಾರ ದೇವಸ್ಥಾನ ಕೆಡವಿ ಹಾಕಿದ್ದನ್ನು ವಿರೋಧಿಸಿ ಮಾಜಿ ಸಚಿವ ಯು.ಟಿ.ಖಾದರ್ ತೀವ್ರ ಹರಿಹಾಯ್ದಿದ್ದಾರೆ.

ಮಂಗಳೂರು, ಸೆ.15: ಮೈಸೂರಿನ ನಂಜನಗೂಡಿನಲ್ಲಿ ಬಿಜೆಪಿ ಸರಕಾರ ದೇವಸ್ಥಾನ ಕೆಡವಿ ಹಾಕಿದ್ದನ್ನು ವಿರೋಧಿಸಿ ಮಾಜಿ ಸಚಿವ ಯು.ಟಿ.ಖಾದರ್ ತೀವ್ರ ಹರಿಹಾಯ್ದಿದ್ದಾರೆ. ಬಿಜೆಪಿಯವರಿಗೆ ಕೆಡವಿ ಹಾಕುವುದೇ ಸಂಸ್ಕೃತಿಯಾಗಿದೆ, ಅದೀಗ ಸ್ಪಷ್ಟವಾಗಿದೆ. ಜನರ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಒಡಕು ಸೃಷ್ಟಿಸುವುದು ಅವರ ಸಂಸ್ಕೃತಿ. ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ ಎಂದು ವ್ಯಂಗ್ಯ ಮಾತುಗಳಲ್ಲಿ ಚುಚ್ಚಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಖಾದರ್, ಸಮಾಜದಲ್ಲಿ ಒಡಕು ಸೃಷ್ಟಿಸುವುದರಲ್ಲಿ ಬಿಜೆಪಿಯವರ ಸಂಸ್ಕೃತಿಯೇ ಆಗಿತ್ತು. ಈಗ ಧಾರ್ಮಿಕ ಕೇಂದ್ರಗಳನ್ನು ಕೆಡಹುವುದರಲ್ಲಿಯೂ ಯಶಸ್ವಿಯಾಗಿದ್ದಾರೆ. ಜನರ ಭಾವನೆಗಳನ್ನು ಕೆಡವಿದವರು ಈಗ ದೇವಸ್ಥಾನ ಕೆಡವಿದ್ದಾರೆ. ದೇವಸ್ಥಾನ ಒಡೆದು ಹಾಕಿರುವ ಘಟನೆಗೆ ಸರಕಾರ ಯಾರನ್ನು ಜವಾಬ್ದಾರಿ ಮಾಡುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದು ಮೈಸೂರಿಗೆ ಮಾತ್ರ ಅಲ್ಲ, ಇಡೀ ದೇಶದ ಪಾಲಿಗೆ ದೊಡ್ಡ ಕಪ್ಪುಚುಕ್ಕೆ. ದೇವಸ್ಥಾನದ ಇತಿಹಾಸ, ಅಲ್ಲಿನ ಶಿಲ್ಪಕಲೆ ಒಂದೂ ಇವರಿಗೆ ಅರ್ಥ ಆಗಿಲ್ವಲ್ಲಾ.. ಇದರ ನೈತಿಕ ಹೊಣೆ ಹೊತ್ತು ಮೈಸೂರು ಉಸ್ತುವಾರಿ ಸಚಿವರು ರಾಜಿನಾಮೆ ನೀಡಬೇಕು ಎಂದು ಹೇಳಿದ ಖಾದರ್, ಸರಕಾರ ಯಾವುದೇ ಒಂದು ಆದೇಶ ಕೊಡುವಾಗ ಯಾಕೆ ಯೋಚನೆ ಮಾಡೋದಿಲ್ಲ. ಈ ವಿಚಾರದ ಬಗ್ಗೆ ಕುಳಿತು ಚರ್ಚೆ ಮಾಡುತ್ತಿದ್ದರೆ, ಬಗೆಹರಿಸಲು ಆಗುತ್ತಿರಲಿಲ್ಲವೇ.. ದೊಡ್ಡ ದೊಡ್ಡವರಿಗೆ ಬಿಜೆಪಿ ಸರಕಾರ ಅಕ್ರಮ ಜಾಗವನ್ನು ಸಕ್ರಮ ಮಾಡಿಕೊಟ್ಟಿಲ್ಲವೇ.. ಹೀಗಿರುವಾಗ ದೇವಸ್ಥಾನದ ಜಾಗವನ್ನು ಸಕ್ರಮ ಮಾಡಲು ಸರಕಾರಕ್ಕೆ ತೊಂದರೆ ಏನಿತ್ತು. ಈ ರೀತಿಯ ವರ್ತನೆ, ಬಿಜೆಪಿ ಸರಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ರು.

ಮೈಸೂರಿನ ನಂಜನಗೂಡಿನಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ದೇವಸ್ಥಾನ ಒಡೆದು ಹಾಕಿರುವ ವಿಚಾರ ಬಿಜೆಪಿ ಸರಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಇದೇ ವಿಚಾರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರೆ, ಮೈಸೂರಿನ ಬಿಜೆಪಿ ಸಂಸದರು ಆಗಿರುವ ಪ್ರಮಾದವನ್ನು ಮುಚ್ಚಿ ಹಾಕಲು ಹರಸಾಹಸ ಪಡುತ್ತಿದ್ದಾರೆ. 

“The BJP formed government with the votes of Hindus and have taken contract of Hindutva. Now they have shown their true colours with the demolition of temples. It is said that notice has been served to the Mysuru district administration over removal of unauthorized religious structure. Undoubtedly, there is government’s hand in this removal. No deputy commissioner and Tahsildar has courage to demolish religious temples without the hand of the government. This can be termed as politically sponsored move slammed U T Khader in Mangalore.