ನಿಫಾ ಭಯದಲ್ಲಿ ದಾಖಲಾಗಿದ್ದ ಯುವಕನಿಗೆ ನೆಗೆಟಿವ್ ; ದೂರವಾಯ್ತು ಮಂಗಳೂರಿನ ಆತಂಕ !

15-09-21 11:57 am       Mangaluru Correspondent   ಕರಾವಳಿ

ನಿಫಾ ಸೋಂಕಿನ ಆತಂಕದಲ್ಲಿ ಮಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗಿದ್ದ ಕಾರವಾರ ಮೂಲದ ಯುವಕನ ವರದಿ ನೆಗೆಟಿವ್ ಬಂದಿದ್ದು, ಆತಂಕ ದೂರವಾಗಿದೆ ಎಂದು ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು, ಸೆ.15: ನಿಫಾ ಸೋಂಕಿನ ಆತಂಕದಲ್ಲಿ ಮಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗಿದ್ದ ಕಾರವಾರ ಮೂಲದ ಯುವಕನ ವರದಿ ನೆಗೆಟಿವ್ ಬಂದಿದ್ದು, ಆತಂಕ ದೂರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಕಾರವಾರ ಮೂಲದ ಯುವಕ ಗೋವಾದಲ್ಲಿ ಆರ್​ಟಿ ಪಿಸಿಆರ್​ ಕಿಟ್ ತಯಾರಿಸುವ ಲ್ಯಾಬ್​ಒಂದರಲ್ಲಿ ಮೈಕ್ರೋ ಬಯಾಲಜಿಸ್ಟ್​ ಆಗಿ ಕೆಲಸ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಈ ವ್ಯಕ್ತಿಗೆ ಜ್ವರ, ಹೃದಯ ಬಡಿತದಲ್ಲಿ ಏರಿಳಿತ ಹಾಗೂ ತಲೆನೋವು ಕಂಡು ಬಂದ ಹಿನ್ನೆಲೆಯಲ್ಲಿ ನಿಫಾದ ಲಕ್ಷಣ ಇರಬಹುದು ಎಂಬ ಶಂಕೆಯಲ್ಲಿ ಕಾರವಾರದಲ್ಲಿ ಆಸ್ರತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಬಂದು ನಂತರ ಮಂಗಳೂರಿಗೆ ಬಂದು ದಾಖಲಾಗಿದ್ದರು. ಮಂಗಳೂರಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ರಕ್ತ, ಗಂಟಲು ದ್ರವ ಹಾಗೂ ಯೂರಿನ್ ಮಾದರಿಯನ್ನು ತಪಾಸಣೆಗಾಗಿ ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಸೋಂಕಿನ ಆತಂಕ ದೂರವಾಗಿದೆ. 

ಜ್ವರ, ತಲೆನೋವು ಹಿನ್ನೆಲೆಯಲ್ಲಿ ಸ್ವತಃ ನಿಫಾ ವೈರಸ್ ಸೋಂಕಿನ ಬಗ್ಗೆ ಆತಂಕಗೊಂಡು ಯುವಕ ಪರೀಕ್ಷೆಗೆ ಒಳಗಾಗಿದ್ದ. ಈ ಬಗ್ಗೆ ಜಿಲ್ಲಾಧಿಕಾರಿ ರಾಜೇಂದ್ರ ಕೂಡ ಯುವಕ ಗಾಬರಿಗೊಂಡಿದ್ದಾನೆ ಅಷ್ಟೇ. ಆತನಿಗೆ ಯಾವುದೇ ರೋಗ ಲಕ್ಷಣ ಇಲ್ಲವೆಂದು ಸ್ಪಷ್ಟನೆ ನೀಡಿದ್ದರು.

Read:  ಮಂಗಳೂರಿನಲ್ಲಿ ನಿಫಾ ಆತಂಕ ; ಯುವಕನಿಗೆ ಸೋಂಕಿನ ಲಕ್ಷಣಗಳಿಲ್ಲ, ಭಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ; ಜಿಲ್ಲಾಧಿಕಾರಿ

Mangalore Man with Nipah virus fear test reports turn negative. It is said that a Karwar-based microbiologist, who works in Goa, self-reported suspicion of being infected with Nipah virus. His sample was sent to National Institute of Virology, Pune on Monday. Result is awaited. He has been isolated.