ಬ್ರೇಕಿಂಗ್ ನ್ಯೂಸ್
12-09-21 09:51 pm Headline Karnataka News Network ಕರಾವಳಿ
ಮಂಗಳೂರು, ಸೆ.12 : ಕೋವಿಡ್ ನೆಪದಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಕಾರ್ಮಿಕರಿಗೆ ಕಿಟ್ ನೀಡಿದ್ದು, ಅದರಲ್ಲಿ ಭಾರೀ ದುರುಪಯೋಗ ಆಗಿರುವ ಬಗ್ಗೆ ಸಂಶಯ ಕೇಳಿಬಂದಿದೆ. ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ತಲಾ ಐದು ಸಾವಿರದಿಂದ ಹತ್ತು ಸಾವಿರ, ಕೆಲವೆಡೆ 15 ಸಾವಿರದಷ್ಟು ವಿವಿಧ ಬಗೆಯ ಕಿಟ್ ಗಳನ್ನು ನೀಡಲಾಗುತ್ತಿದ್ದು, ಅದರಲ್ಲಿ ಕಾರ್ಮಿಕರಿಗೆ ಅನಗತ್ಯ ವಸ್ತುಗಳನ್ನು ತುಂಬಿಸಿ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಯು.ಟಿ.ಖಾದರ್, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕೊಡಲಾಗುತ್ತಿರುವ ಕಿಟ್ ಗಳನ್ನು ಪ್ರದರ್ಶನ ಮಾಡಿದರು. ಫುಡ್ ಕಿಟ್ ಹೊರತುಪಡಿಸಿ ಇತರ ಮೂರು ಬಗೆಯ ಕಿಟ್ ಗಳನ್ನು ನೀಡಲಾಗುತ್ತಿದ್ದು, ಉಳ್ಳಾಲ ವಿಧಾನಸಭೆ ಕ್ಷೇತ್ರಕ್ಕೆ ಈ ರೀತಿಯ ತಲಾ 5 ಸಾವಿರ ಕಿಟ್ ಗಳು ಬಂದಿವೆ. ಹತ್ತು ರೀತಿಯ ಮಾಸ್ಕ್, ಎರಡೆರಡು ರೀತಿಯ ನಾಲ್ಕು ಸ್ಯಾನಿಟೈಸರ್ ಬಾಟಲಿಗಳಿದ್ದು, ಇವು ಕಾರ್ಮಿಕರಿಗೆ ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಬಡ ಕಾರ್ಮಿಕರು ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ಹತ್ತು ಮಾಸ್ಕ್ ಇರುವ ಬಂಡಲ್, ಎರಡು ಸ್ಯಾನಿಟೈಸರ್ ಬಾಟಲಿ, ನಾಲ್ಕು ಸಾಬೂನು ಇರುವ ಒಂದು ಕಿಟ್ ಬೆಲೆ 650 ರೂ. ಇದೆ. ಇನ್ನೊಂದು ಇದೇ ರೀತಿಯ ಕಿಟ್ ಇದ್ದು, ಅದರಲ್ಲಿ ಹೆಚ್ಚುವರಿಯಾಗಿ ಸ್ಯಾನಿಟರಿ ಪ್ಯಾಡ್ ಇದೆ, ಅದರ ಬೆಲೆ 700 ರೂಪಾಯಿ. ಇದಲ್ಲದೆ, ಇಮ್ಯುನಿಟಿ ಹೆಸರಲ್ಲಿ ಆಯುರ್ವೇದಿಕ್ ಔಷಧಿಯುಳ್ಳ ಎರಡೆರಡು ಬಾಟಲಿ, ಚ್ಯವನಪ್ರಾಶ್ ಬಾಟಲಿ, ಆಯುಷ್ ಕ್ವಾತ್ ಎನ್ನುವ ಮತ್ತೊಂದು ಬಾಟಲಿ ಇರುವ ಕಿಟ್ ಇದೆ. ಅದರ ಬೆಲೆ ಅಂದಾಜು ಒಂದು ಸಾವಿರ ರೂಪಾಯಿ ಎನ್ನಲಾಗುತ್ತಿದೆ. ಆಯುರ್ವೇದ ಔಷಧಿ ಕೊಡಲು ಯಾವ ಇಲಾಖೆಯಿಂದ ಮಾನದಂಡ ಪಡೆಯಲಾಗಿದೆ ಎನ್ನುವುದನ್ನು ಸರಕಾರ ತಿಳಿಸಿಲ್ಲ. ಆದರೆ, ಈ ರೀತಿ ಕೋಟ್ಯಂತರ ರೂಪಾಯಿ ಅನುದಾನವನ್ನು ಖರ್ಚು ಮಾಡಿ ಕಾರ್ಮಿಕರಿಗೆ ಅನವಶ್ಯಕ ಆಗಿರುವ ವಸ್ತುಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ ಎಂಎಲ್ಎ ಕಿಟ್, ಎಂಎಲ್ಸಿ, ಎಂಪಿ ಕಿಟ್ ಎಂದು ಬೇರೆ ಬೇರೆ ಲೆಕ್ಕದಲ್ಲಿ ಲಕ್ಷಾಂತರ ಕಿಟ್ ಗಳನ್ನು ನೀಡಲಾಗುತ್ತಿದ್ದು, ದೊಡ್ಡ ಅವ್ಯವಹಾರ ಆಗಿರುವ ಶಂಕೆಯಿದೆ ಎಂದರು.
ಹಾಸನ, ಬೆಂಗಳೂರು ಜಿಲ್ಲೆಗಳಲ್ಲಿ ತಲಾ 15 ಸಾವಿರ ಕಿಟ್ ಗಳನ್ನು ಕೊಡಲಾಗುತ್ತಿದೆ. ಈ ಜುಜುಬಿ ವಸ್ತುಗಳಿಗೆ ಇಲ್ಲಿ ನಮೂದಿಸಿರುವ ದರವನ್ನೇ ಲೆಕ್ಕ ಹಾಕಿದರೂ, ನೂರು ಕೋಟಿಗೂ ಹೆಚ್ಚು ಮೊತ್ತವನ್ನು ಕಾರ್ಮಿಕರ ಕಲ್ಯಾಣ ನಿಧಿಯಿಂದಲೇ ವ್ಯಯಿಸಲಾಗುತ್ತಿದೆ. ಈ ರೀತಿ ಅನುದಾವನ್ನು ಹಾಳು ಮಾಡುವ ಬದಲು ಕ್ಷೌರಿಕರಿಗೆ, ಟೈಲರ್, ಆಟೋ ಚಾಲಕರಿಗೆ ಮೊನ್ನೆ ನೀಡಿದ್ದ ಎರಡು ಸಾವಿರ, ಮೂರು ಸಾವಿರದ ಹಣವನ್ನು ಐದು ಸಾವಿರಕ್ಕೆ ಏರಿಸಬಹುದಿತ್ತು. ಏನೇ ಕಿಟ್ ನೀಡಲಿ, ಹಣದ ನೆರವಿನ ಅನುದಾನ ನೀಡಲಿ. ಅದು ಕಾರ್ಮಿಕರಿಗೆ ಉಪಯೋಗಕ್ಕೆ ಬರಬೇಕು. ಕೇವಲ ಕಟ್ಟಡ ಕಾರ್ಮಿಕರಿಗೆಂದು ನೀಡುವ ಈ ರೀತಿಯ ವಸ್ತುಗಳು ಅಯೋಗ್ಯ ಮತ್ತು ವೇಸ್ಟ್ ಅಂತ ನನ್ನ ಭಾವನೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಒತ್ತಾಯಿಸಿ ಕಾಂಗ್ರೆಸ್ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಲಿದೆ ಎಂದು ಹೇಳಿದರು.
ಕಳೆದ ಬಾರಿ ಬಡವರಿಗೆ ಮನೆ ಕೊಡಿಸುತ್ತೇವೆಂದು ಬಡವರ ಮನೆಗಳಿಗೆ ತೆರಳಿ ಫೋಟೋ ತೆಗೆಸಿ ಹೋಗಿದ್ದರು. ಮನೆ ಇನ್ನೂ ಯಾರಿಗೂ ತಲುಪಿಲ್ಲ. ಇಡೀ ರಾಜ್ಯದಲ್ಲಿ ಮನೆ ಕೊಡಿಸುವ ಹೆಸರಲ್ಲಿ ಮೂರ್ಖರನ್ನಾಗಿಸುವ ಕೆಲಸ ಮಾಡಿದ್ದಾರೆ. ಜನರಿಗೆ ಕಾಂಗ್ರೆಸ್ ನೀಡಿದ್ದ ಯೋಜನೆಗಳು ತಲುಪುತ್ತಿಲ್ಲ ಎಂದು ಆರೋಪಿಸಿದ ಖಾದರ್, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸದೆ ಜಾರಿಗೆ ತರಬಾರದು. ಸರಕಾರಕ್ಕೆ ಮಕ್ಕಳ ಶಿಕ್ಷಣ ನೀತಿ ಬಗ್ಗೆ ಚರ್ಚಿಸಲು ಯಾಕೆ ಆಗಲ್ಲ. ಇದರಲ್ಲಿ ವಿದೇಶಿ ಕಂಪನಿಗಳಿಗೂ ಇಲ್ಲಿ ಬಂದು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶವಿದೆ. ಹಾಗಾದಲ್ಲಿ ಸ್ಥಳೀಯ ಬಡ ಶಿಕ್ಷಣ ಸಂಸ್ಥೆಗಳು ಮುಚ್ಚುವ ಸ್ಥಿತಿ ಬರುತ್ತದೆ. ಇದು ಕೂಡ ಮತ್ತೊಂದು ಜಿಎಸ್ಟಿ ಭೂತದಂತೆ ಜನರನ್ನು ವಸೂಲಿ ಮಾಡುವ ಯೋಜನೆ ಆಗಲಿದೆ ಎಂದು ಹೇಳಿದರು.
ಕಲಬುರ್ಗಿ ಪಾಲಿಕೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಜೆಡಿಎಸ್ ತಮಗೆ ಉಪಕಾರ ಸ್ಮರಣೆ ಇದ್ದರೆ ಕಾಂಗ್ರೆಸಿಗೆ ಬೆಂಬಲ ನೀಡಬೇಕು. ರಾಜ್ಯದಲ್ಲಿ ಕಳೆದ ಬಾರಿ ಜೆಡಿಎಸ್ಸಿಗೆ ಕೇವಲ 35 ಸೀಟು ಹೊಂದಿದ್ದರೂ, ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಜೆಡಿಎಸ್ ಪಕ್ಷದ ತತ್ವ, ಸಿದ್ಧಾಂತ ನೋಡಿ ಕಾಂಗ್ರೆಸ್ ಈ ಆಫರ್ ನೀಡಿತ್ತು. ಕಾಂಗ್ರೆಸ್ ಮಾಡಿದ್ದ ಉಪಕಾರ ಸ್ಮರಣೆಯನ್ನು ನಾಯಕರು ಮರೆಯಬಾರದು. ಅಲ್ಲಿ ಕಾಂಗ್ರೆಸಿಗೆ ಅತಿ ಹೆಚ್ಚು ಸ್ಥಾನಗಳನ್ನು ಜನ ನೀಡಿದ್ದಾರೆ. ಸಹಜವಾಗೇ ಆಡಳಿತವನ್ನೂ ಕಾಂಗ್ರೆಸ್ ಮಾಡುತ್ತದೆ ಎಂದು ಹೇಳಿದರು.
Former minister and Mangaluru MLA U T Khader demanded an inquiry after he alleged that substandard kits were distributed by the labour department. Further, he suspects gross misappropriation in the distribution of food, immunity and safety kits to workers through the state.
23-04-25 10:49 pm
Bangalore Correspondent
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
23-04-25 09:25 pm
HK News Desk
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm