ಹೊಯ್ಗೆ ಬಜಾರ್ ; ಸಮುದ್ರ ದಂಡೆಯಲ್ಲಿ ತೇಲುತ್ತಿದ್ದ ಮಂಗಳಮುಖಿಯ ಶವ !

12-09-21 10:15 am       Mangaluru Correspondent   ಕರಾವಳಿ

sdfsdfsdaನಗರದ ಪಾಂಡೇಶ್ವರ ಬಳಿಯ ಹೊಯ್ಗೆಬಜಾರ್‌ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಮಂಗಳೂರು, ಸೆ.12: ನಗರದ ಪಾಂಡೇಶ್ವರ ಬಳಿಯ ಹೊಯ್ಗೆಬಜಾರ್‌ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮೀನುಗಾರರು ಬೋಟಿನಲ್ಲಿ ತೆರಳುತ್ತಿದ್ದಾಗ ಶವ ಪತ್ತೆಯಾಗಿದೆ.‌

ಮೀನುಗಾರಿಕಾ ದಕ್ಕೆಗೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ತೇಲುತ್ತಿದ್ದ  ಯುವತಿಯ ಮೃತದೇಹ ನೋಡಿದ್ದಾರೆ. ಉಳ್ಳಾಲ ಉಳಿಯದ ಪ್ರೇಮಪ್ರಕಾಶ್ ಹಾಗೂ ಅನಿಲ್ ಮೊಂತೇರೋ ಮೀನುಗಾರಿಕೆ ಮುಗಿಸಿ ಮೀನನ್ನು ಧಕ್ಕೆಗೆ ಪೂರೈಸಲು ತೆರಳುತ್ತಿದ್ದಾಗ ಶವ ಕಂಡಿದ್ದು ಎಳೆದು ದಡಕ್ಕೆ ಹಾಕಿದ್ದಾರೆ. ಅಲ್ಲದೆ, ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ವೆನ್ಲಾಕ್‌ ಶವಾಗಾರಕ್ಕೆ ತಂದಿದ್ದಾರೆ. ಸ್ಥಳೀಯರು ಮತ್ತು ಪೊಲೀಸರ ಪ್ರಕಾರ, ಶವ ಮಂಗಳಮುಖಿಯದ್ದು ಎನ್ನುವ ಮಾಹಿತಿಯಿದೆ. ೫ ಅಡಿ ಎತ್ತರ, ಕಪ್ಪು ಬಣ್ಣದ ಟೀಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.‌ ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂಡಲು ಹೊಂದಿದ್ದಾರೆ. ಮೃತದೇಹದ‌‌ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ನೇತ್ರಾವತಿ ಸೇತುವೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

The body of a young woman transgender was found floating in river Netravati. Fishermen of Ullal rescued the same from washing away into the sea and brought it to shore at Hoige Bazaar. The mortal remains found are that of a woman aged 30 to 35 years. She is wearing trousers and a t-shirt. Whether it is suicide or death by any other reason needs to be confirmed after investigation by the police.