ಕುಂದಾಪುರ; ವಾಕಿಂಗ್ ತೆರಳಿದ್ದ ತಾಯಿ ಮಗ ಹೊಳೆಗೆ ಬಿದ್ದು ಸಾವು

11-09-21 06:02 pm       Udupi Correspondent   ಕರಾವಳಿ

ವಾಕಿಂಗ್ ತೆರಳಿದ್ದ ತಾಯಿ ಮಗ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗಂಗೊಳ್ಳಿ ಸಮೀಪದ ಚುಂಗಿಗುಡ್ಡೆ ಎಂಬಲ್ಲಿ ಬೆಳಗ್ಗೆ 11ಗಂಟೆ ಸುಮಾರಿಗೆ ನಡೆದಿದೆ.

ಕುಂದಾಪುರ, ಸೆ.11: ವಾಕಿಂಗ್ ತೆರಳಿದ್ದ ತಾಯಿ ಮಗ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗಂಗೊಳ್ಳಿ ಸಮೀಪದ ಚುಂಗಿಗುಡ್ಡೆ ಎಂಬಲ್ಲಿ ಬೆಳಗ್ಗೆ 11ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಎಂಬವರ ಪತ್ನಿ ರೊಸರಿಯೋ ಹಾಗೂ ಮಗ ಶಾನ್(11) ಎಂದು ಗುರುತಿಸಲಾಗಿದೆ. ಇವರು ಪ್ರತಿದಿನದಂತೆ ಇಂದು ಕೂಡ ಮನೆ ಸಮೀಪದ ಹೊಳೆ ಬದಿ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಇವರ ಮಗ ಅಕಸ್ಮಿಕವಾಗಿ ಹೊಳೆಗೆ ಬಿದ್ದರು.

ಮಗನನ್ನು ರಕ್ಷಣೆ ಮಾಡಲು ತಾಯಿ ಕೂಡ ನೀರಿಗೆ ಹಾರಿದರೆನ್ನಲಾಗಿದೆ. ಇದರಿಂದ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಮೊದಲು ಮಗನ ಮೃತದೇಹ ಪತ್ತೆಯಾಗಿದ್ದು, ನಂತರ ತಾಯಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Mother and 11-year-old Son die after accidentally falling into Canal water in Kundapura. The deceased have been identified as Rosario and Son Shan.