ಬ್ರೇಕಿಂಗ್ ನ್ಯೂಸ್
11-09-21 05:59 pm Mangaluru Correspondent ಕರಾವಳಿ
ಮಂಗಳೂರು, ಸೆ.11: ಪ್ರಧಾನಿ ಮೋದಿ, ಅವ ಶಿಷ್ಯಂದಿರು ಬಾಯಿ ತೆಗೆದರೆ 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ, ಏನೂ ಮಾಡಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ಏನೂ ಮಾಡದೇ ಇರುತ್ತಿದ್ದರೆ, ಈ ಮೋದಿ ಪ್ರಧಾನಿಯಾಗಲು ಸಾಧ್ಯವಿತ್ತೇ..? ದೇಶಾದ್ಯಂತ ರಸ್ತೆ, ರೈಲ್ವೇ, ವಿದ್ಯುಚ್ಚಕ್ತಿ ಹೀಗೆ ಎಲ್ಲವನ್ನೂ ಕಟ್ಟಿಕೊಟ್ಟಿದ್ದೇವೆ. ಅದರಲ್ಲಿ ನೀವೆಲ್ಲ ಸುಖ ಅನುಭವಿಸುತ್ತಿದ್ದೀರಿ. ಹಾಗಿದ್ದರೂ, ಜನರು ಕಾಂಗ್ರೆಸನ್ನು ಬೈತಿದ್ದಾರೆ. ಬಿಜೆಪಿ, ಮೋದಿಯನ್ನು ಒಳ್ಳೆ ಜನ ಅನ್ನುತ್ತಿದ್ದಾರೆ. ಬಿಜೆಪಿಯವರು ನಾವು ಮಾಡಿದ್ದನ್ನೆಲ್ಲ ಮಾರಲು ಹೊರಟಿದ್ದಾರೆ. ಯಾಕೆ ಸುಮ್ಮನಿದ್ದೀರಿ ಜನರೇ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಾಧನೆಗಳನ್ನು ಪಟ್ಟಿ ಮಾಡುತ್ತಲೇ ಅಂಕಿ ಅಂಶಗಳನ್ನು ಹೇಳುತ್ತಲೇ ಏಳು ವರ್ಷಗಳ ಬಿಜೆಪಿ ಸಾಧನೆಯೇನೆಂದು ಹೋಲಿಕೆ ಮಾಡಿದ್ರು. 1951ರಲ್ಲಿ ದೇಶದಲ್ಲಿ ಕೇವಲ 5 ಪಬ್ಲಿಕ್ ಸೆಕ್ಟರ್ ಸಂಸ್ಥೆಗಳಿದ್ದವು. 70 ವರ್ಷದಲ್ಲಿ 366 ಪಬ್ಲಿಕ್ ಸೆಕ್ಟರ್ ಸಂಸ್ಥೆಗಳಿವೆ, ಇದರ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ದೇಶದಲ್ಲಿ 400ಕ್ಕೂ ಹೆಚ್ಚು ರೈಲ್ವೇ ಸ್ಟೇಶನ್, 150 ವಿವಿಧ ಮಾದರಿಯ ರೈಲ್ವೇ ಹಳಿಗಳನ್ನು ಮಾಡಿದ್ದೇವೆ. 26 ಸಾವಿರ 700 ಕಿಮೀ ರಸ್ತೆಯನ್ನು ಮಾಡಿದ್ದೇವೆ. ವಿದ್ಯುಚ್ಚಕ್ತಿ, ಬಿಎಸ್ಸೆನ್ನೆಲ್, ಅದರ ಟವರ್ ಗಳು ಇವನ್ನೆಲ್ಲ ಯಾರು ಮಾಡಿದ್ದು ? ಕಾಂಗ್ರೆಸ್ ಮಾಡಿದ್ದನ್ನೆಲ್ಲಾ ಬಿಜೆಪಿಯವರು ಮಾರುತ್ತಿದ್ದೀರಲ್ಲಾ..
ನಾವು ಮಾಡಿದ್ದ ರಸ್ತೆ, ರೈಲ್ವೇಯಲ್ಲೇ ನೀವು ಓಡಾಡುತ್ತಿದ್ದೀರಿ. ನಾವು ಮಾಡಿದ ಕಾಲೇಜು, ಶಾಲೆಗಳಲ್ಲೇ ಓದುತ್ತಿದ್ದೀರಿ. ಇಂದಿರಾ ಗಾಂಧಿ ಭೂಸುಧಾರಣೆ ಕಾನೂನು ತಂದರು, ದೇವರಾಜು ಅರಸು ಇದ್ದಾಗ ರಾಜ್ಯದಲ್ಲಿ ಅದನ್ನು ಅನುಷ್ಠಾನಕ್ಕೆ ತಂದ್ರು. ಕರಾವಳಿಯ ಜಿಲ್ಲೆಗಳಲ್ಲಿ 3.5 ಲಕ್ಷ ಹೆಕ್ಟೇರ್ ಜಮೀನನ್ನು ಖಾಸಗಿಯವರಿಗೆ ಕೊಟ್ಟು ಭೂಮಿಯ ಮಾಲೀಕರಾಗಿ ಮಾಡಿದ್ದೆವು. 70 ವರ್ಷದಲ್ಲಿ ಪೂರ್ತಿ ಕಾಂಗ್ರೆಸ್ ಆಳಿದ್ದಲ್ಲ. ಆರು ವರ್ಷ ವಾಜಪೇಯಿ, ದೇವೇಗೌಡ, ಚಂದ್ರಶೇಖರ್, ಮೊರಾರ್ಜಿ ದೇಸಾಯಿ, ವಿಪಿ ಸಿಂಗ್ ದೇಶವನ್ನಾಳಿದ್ದಾರೆ. ಕಾಂಗ್ರೆಸ್ ಆಳಿದ್ದು 55-60 ವರ್ಷ ಇರಬಹುದು. ನಮ್ಮ ಪಾಲಿಸಿ, ಬಡವರ ಪರ, ರೈತರ, ಅಲ್ಪಸಂಖ್ಯಾತ, ಮಿಡ್ಲ್ ಕ್ಲಾಸ್, ಲೋ ಮಿಡ್ಲ್ ಕ್ಲಾಸ್ ಉದ್ಧಾರಕ್ಕಾಗಿ ಇದೆ.
ನೆಹರು ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೇಗಿರಬೇಕು ಅನ್ನುವ ಬಗ್ಗೆ ಐಡಿಯಾಲಜಿ ಕೊಟ್ಟಿದ್ದರು. ಮಹತ್ವದ ಪ್ಲಾನಿಂಗ್ ಕಮಿಷನ್ ಕೊಟ್ಟಿದ್ದರು. ಅದರ ಹೆಸರನ್ನು ಬಿಜೆಪಿಯವರು ನೀತಿ ಆಯೋಗ ಮಾಡಿದ್ರು. ನೀತಿ ಆಯೋಗದ ಸಾಧನೆ ಏನಿದೆ ಅನ್ನೋದನ್ನೇ ಅವರೇ ಹೇಳಬೇಕು. ಪ್ರಪಂಚದಲ್ಲೇ ಹೆಸರು ಇರುವಂತಹ ಈ ದೇಶವನ್ನು ಕಟ್ಟಿದ ವ್ಯಕ್ತಿ ನೆಹರು. ಆದರೆ, ಅವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ. ಕಾಂಗ್ರೆಸ್ ಮಾಡಿದ್ದ 366 ಪಬ್ಲಿಕ್ ಸೆಕ್ಟರ್ ಸಂಸ್ಥೆಗಳಲ್ಲಿ ಎಲ್ಲವೂ ನಷ್ಟದಲ್ಲಿಲ್ಲ. ಕೆಲವಷ್ಟೇ ನಷ್ಟದಲ್ಲಿದೆ. ಇದರಿಂದ ನೂರು ಲಕ್ಷ ಕೋಟಿ ರೂಪಾಯಿ ತೆರಿಗೆ, ಜಿಎಎಸ್ಟಿ, ಇನ್ನಿತರ ಮೂಲಗಳ ಮೂಲಕ ಸರಕಾರಕ್ಕೆ ಬರುತ್ತದೆ. 85 ಲಕ್ಷ ಕೋಟಿ ರೂಪಾಯಿಯಷ್ಟು ಈ ಸಂಸ್ಥೆಗಳು ಪ್ರತಿ ವರ್ಷ ಲಾಭ ಮಾಡುತ್ತದೆ. ಲಕ್ಷಾಂತರ ಜನರಿಗೆ ಉದ್ಯೋಗ ಕೊಡುತ್ತಿವೆ.
ದೇಶದಲ್ಲಿ ರಸ್ತೆಗಳನ್ನು ಮಾಡಿದ್ದು ಜನಸಾಮಾನ್ಯರ ಹಿತಕ್ಕಾಗಿ, ಅವರ ಸೌಕರ್ಯಕ್ಕಾಗಿ. ಆದರೆ, ಈಗಿನ ಸರಕಾರಗಳು ಅಲ್ಲಲ್ಲಿ ಟೋಲ್ ಗೇಟ್ ಮಾಡಿ ಸುಲಿಗೆ ಮಾಡುತ್ತಿವೆ. ಟೋಲ್ ಗೇಟ್ ಮೂಲಕ ಸರಕಾರಕ್ಕೆ ವರ್ಷಕ್ಕೆ 1.60 ಲಕ್ಷ ಕೋಟಿ ಕೊಡುತ್ತದೆ. ಇಷ್ಟೊಂದು ಹಣವನ್ನು ಸರಕಾರಕ್ಕೆ ಕೊಡಬೇಕಿದ್ದರೆ, ಇದನ್ನು ಗುತ್ತಿಗೆ ಪಡೆದ ಸಂಸ್ಥೆಗಳು ಎಷ್ಟು ಸುಲಿಗೆ ಮಾಡಬೇಕು. 30-40 ವರ್ಷ ಗುತ್ತಿಗೆ ವಹಿಸ್ಕೊಂಡು ಇದರ ನಾಲ್ಕು ಪಟ್ಟು ದುಡ್ಡನ್ನು ಜನರಿಂದ ವಸೂಲಿ ಮಾಡುತ್ತವೆ. ಲೆಕ್ಕ ಹಾಕಿದರೆ, ಪ್ರತಿ ಕಿಮೀ ದೂರ ಪ್ರಯಾಣಕ್ಕೆ ಒಂದು ಕೋಟಿ ರೂ. ತೆತ್ತಂತಾಗುತ್ತದೆ.
ಈಗ ರೈಲ್ವೇ, ಏರ್ಪೋರ್, ಬಂದರು ಮತ್ತಿತರ ಮೂಲ ಸೌಕರ್ಯದ ಯೋಜನೆಗಳನ್ನೇ ಖಾಸಗಿಯವರಿಗೆ ಕೊಡುತ್ತಿದ್ದಾರೆ. ಆನಂತರ ಆಪತ್ತಿನ ಕಾಲದಲ್ಲಿ ಮತ್ತೆ ಭಿಕ್ಷೆ ಕೇಳಬೇಕು. ನರಸಿಂಹ ರಾವ್ ಕಾಲದಲ್ಲಿ ಬ್ರಾಡ್ ಗೇಜ್, ಮೀಟರ್ ಗೇಜ್ ಹೀಗೆ ಮೂರು ಸ್ತರದಲ್ಲಿ ರೈಲು ಹಳಿ ಮಾಡಿದ್ದೆವು. ಅಂದು ರೈಲ್ವೇ ಟಿಕೆಟ್ ಒಂದು ರೂಪಾಯಿ ಜಾಸ್ತಿ ಮಾಡಿದರೆ ಜನರು ಗಲಾಟೆ ಮಾಡುತ್ತಿದ್ದರು. ಪ್ರತಿಭಟನೆ ಮಾಡುತ್ತಿದ್ದರು. ಈಗ ರೈಲಿಗೆ ಮೂರು ಪಟ್ಟು ಕೊಟ್ಟು ಹೋಗಬೇಕು, ಈಗ ಯಾಕೆ ಜನರು ಗಲಾಟೆ ಮಾಡುತ್ತಿಲ್ಲ ಎಂದು ಖರ್ಗೆ ಪ್ರಶ್ನೆ ಮಾಡಿದರು. ಸರಕಾರಿ ಸೊತ್ತುಗಳನ್ನು ಬಿಜೆಪಿ, ಮೋದಿ ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ, ಜನರು ಎದ್ದು ಪ್ರತಿಭಟನೆ ಮಾಡದೇ ಇದ್ದರೆ, ಈ ದೇಶಕ್ಕೆ ಮುಂದೆ ಕಷ್ಟ ಆಗಲಿದೆ ಎಂದರು.
ಪೆಟ್ರೋಲ್, ಡೀಸೆಲ್ ರೇಟ್ ನೂರು ರೂಪಾಯಿ ದಾಟಿದೆ. 2014ರಲ್ಲಿ ಕಾಂಗ್ರೆಸ್ ಸರಕಾರ ಕಚ್ಚಾತೈಲಕ್ಕೆ 109 ಡಾಲರ್ ಇತ್ತು. 140, 190 ಡಾಲರ್ ಆಗಿದ್ದೂ ಇತ್ತು. ಆದರೆ ಪೆಟ್ರೋಲ್ ದರ 70 ರೂ., ಡೀಸೆಲ್ 57 ರೂ. ಅಷ್ಟೇ ಇತ್ತು. ನಾವು ಕಷ್ಟ ನುಂಗಿಕೊಂಡು ಜನರಿಗೆ ಅದರ ಹೊರೆಯನ್ನು ದಾಟಿಸುತ್ತಿರಲಿಲ್ಲ. ಗ್ಯಾಸ್ ಸಿಲಿಂಡರ್ ದರ 14 ಕೇಜಿಗೆ 414 ರೂ. ಇತ್ತು. ಈಗ 885 ಇದೆ. ಯಾರು ಕೂಡ ತುಟಿ ಬಿಚ್ಚುತ್ತಿಲ್ಲ. ಬಿಜೆಪಿ ಈಸ್ ಗುಡ್, ಮೋದಿ ಈಸ್ ಗುಡ್. ಬಡವರಿಗೆ ಅನುಕೂಲ ಆಗಬೇಕೆಂದು ಗ್ಯಾಸ್ ಜೊತೆಗೆ ಸಬ್ಸಿಡಿ ಕೊಡುತ್ತಿದ್ದೆವು. ಕಾಂಗ್ರೆಸ್ ಆಯಿಲ್ ಬಾಂಡ್ ಪರ್ಚೇಸ್ ಮಾಡಿ ಸಾಲ ಮಾಡಿದ್ರು ಅಂತಾ ಹೇಳುತ್ತಿದ್ದೀರಲ್ಲಾ.. ಎಷ್ಟು ಸಾಲ ಇದೆ, 1.34 ಲಕ್ಷ ಕೋಟಿ ಸಾಲ ಇದ್ದುದು ಅಷ್ಟೇ ಅಲ್ವಾ.. ಏಳು ವರ್ಷದಲ್ಲಿ ಎಕ್ಸೈಸ್, ಜಿಎಸ್ಟಿ ರೂಪದಲ್ಲಿ ಇವರು ಕಲೆಕ್ಟ್ ಮಾಡಿರುವ ದುಡ್ಡು 75 ಲಕ್ಷ ಕೋಟಿಗೂ ಹೆಚ್ಚು. ಅದರ್ಲಲಿ ಒಂದು ಪರ್ಸೆಂಟ್ ದುಡ್ಡನ್ನು ಅತ್ತ ಕಟ್ಟುತ್ತಿದ್ದರೆ, ಸಾಲ ಚುಕ್ತಾ ಆಗುತ್ತಿತ್ತು. ಆದರೆ, ಇವರು ಎಲ್ಲರನ್ನೂ ಮೋಸ ಮಾಡುತ್ತಿದ್ದಾರೆ. ಸಬ್ಸಿಡಿಯನ್ನು ನುಂಗಿಹಾಕಿ, ಸಾಲದ ಹೆಸರಲ್ಲಿ ಜನರಿಗೆ ಸುಳ್ಳು ಹೇಳುತ್ತಾ ಮೋಸ ಮಾಡುತ್ತಿದ್ದಾರೆ..
ನಿರುದ್ಯೋಗದಿಂದಾಗಿ ಜನ ಸಾಯುತ್ತಿದ್ದಾರೆ. ಇವರು ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಬದಲು ಸಾರ್ವಜನಿಕ ಸಂಸ್ಥೆಗಳನ್ನೇ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆ. ಇನ್ನು ಉದ್ಯೋಗ ಹೇಗೆ ಕೊಡುವುದು ಸ್ವಾಮಿ.. ದೇಶದಲ್ಲಿ ಕಾಲೇಜು, ವಿವಿಗಳು, ಹೀಗೆ ಬೇರೆ ಬೇರೆ ಶಿಕ್ಷಣ ವಲಯದಲ್ಲಿಯೇ 36 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಕೇಂದ್ರ ಸರಕಾರದಲ್ಲಿ 6 ಲಕ್ಷ ಹುದ್ದೆ ಖಾಲಿಯಿದೆ, ರಾಜ್ಯದಲ್ಲಿ 30 ಲಕ್ಷ ಹುದ್ದೆಗಳು ಖಾಲಿಯಿವೆ. ಯಾಕೆ ಇವರಿಗೆ ತುಂಬಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ ಖರ್ಗೆ, ಜನರನ್ನು ಮರುಳು ಮಾಡುವ ಬದಲು ಕೆಲಸ ಮಾಡಿ ತೋರಿಸಿ ಸ್ವಾಮಿ ಎಂದು ಸವಾಲು ಹಾಕಿದರು.
ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ JDS ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಬುರ್ಗಿ ಜನರ ಬೆಂಬಲ ಕಾಂಗ್ರೆಸ್ ಗೆ ಇದೆ. 27 ಕಾಂಗ್ರೆಸ್, 23 ಬಿಜೆಪಿ, 4 ಜೆಡಿಎಸ್, 1 ಪಕ್ಷೇತರ ಇದೆ. ಬಿಜೆಪಿ ವಿರೋಧಿ ಸದಸ್ಯರು 32 ರಷ್ಟಿದ್ದಾರೆ. ಹೀಗಾಗಿ ದೇವೇಗೌಡರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಕಾಂಗ್ರೆಸ್ ಪರ ಜನ ಬೆಂಬಲವಿರುವುದಾಗಿ ತಿಳಿಸಿದ್ದೇನೆ. ಇಲ್ಲಿ ಎಲ್ಲವೂ ವಿಶ್ವಾಸದ ಮೇಲಷ್ಟೇ ನಡೆಯುತ್ತದೆ. ಮೇಯರ್ ಸ್ಥಾನದ ಬಗ್ಗೆ ಸ್ಥಳೀಯ ನಾಯಕರು ತೀರ್ಮಾನಿಸುತ್ತಾರೆ. ಬಕ್ರೀದ್ ಮೇ ಬಚೇಂಗೆ ತೋ, ಮೊಹರಂ ಮೇ ನಾಚೇಂಗೆ" ಎಂದು ಖರ್ಗೆ ವ್ಯಾಖ್ಯಾನಿಸಿದ್ರು. ಮೇಯರ್ ಸ್ಥಾನ JDS ಗೆ ನೀಡುವ ಕುರಿತ ಪ್ರಶ್ನೆಗೆ, ಮೊದಲು ಅಧಿಕಾರ ಸಿಗಲಿ. ಆನಂತರ ಮೇಯರ್ ಸ್ಥಾನ ನೀಡುವ ಬಗ್ಗೆ ಯೋಚಿಸಲಿ ಅಂದರು.
“The BJP questions every now and then on what Congress did in the last 70 years. Let us assume that we did nothing. From where the IIT, numerous medical and engineering colleges and 366 public sectors come from? In 1951, there were only five public sectors which increased up to 366 which are now being sold one after another by the BJP government.
23-04-25 10:49 pm
Bangalore Correspondent
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
23-04-25 09:25 pm
HK News Desk
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm