ಬ್ಯಾಂಕ್‌ನಲ್ಲಿದ್ದ ಐದು ಲಕ್ಷ ಫಿಕ್ಸೆಡ್ ಹಣವೇ ಮಂಗಮಾಯ ; ಗ್ರಾಹಕರ ಕೋರ್ಟ್ ಕದತಟ್ಟಿದ ಸಂತ್ರಸ್ತನಿಗೆ ಗೆಲುವು

06-09-21 01:50 pm       Udupi Correspondent   ಕರಾವಳಿ

ಬ್ಯಾಂಕಿನಲ್ಲಿ ಭದ್ರವಾಗಿರಲಿ ಅಂತ ಇಟ್ಟಿದ್ದ ಫಿಕ್ಸೆಡ್ ಡೆಪಾಸಿಟ್​ ಹಣವೇ ಕಾಣೆಯಾಗಿದ್ದು ಆನಂತರ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ ವ್ಯಕ್ತಿಗೆ ಗ್ರಾಹಕರ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿದೆ. 

ಉಡುಪಿ, ಸೆ.6 : ಬ್ಯಾಂಕಿನಲ್ಲಿ ಭದ್ರವಾಗಿರಲಿ ಅಂತ ಇಟ್ಟಿದ್ದ ಫಿಕ್ಸೆಡ್ ಡೆಪಾಸಿಟ್​ ಹಣವೇ ಕಾಣೆಯಾಗಿದ್ದು ಆನಂತರ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ ವ್ಯಕ್ತಿಗೆ ಗ್ರಾಹಕರ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿದೆ. 

ಕುಂದಾಪುರದ ಉಪ್ಪೂರು ನಿವಾಸಿ ಹರೀಶ್ ಗುಡಿಗಾರ್‌ ಹಣ ಕಳೆದುಕೊಂಡವರು. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ಮಲ್ಲೇಶ್ವರಂನ ಸ್ಟೇಟ್ ಬ್ಯಾಂಕಿನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿದ್ದರು. ಊರಿನಲ್ಲಿ ಸ್ವಂತದೊಂದು ಮನೆ ನಿರ್ಮಿಸಬೇಕೆಂದು ಅಕೌಂಟ್​ನಲ್ಲಿ ಹಣ ಕೂಡಿಟ್ಟಿದ್ದರು. ಬೆಂಗಳೂರು ತೊರೆದ ಬಳಿಕ 2019ರಲ್ಲಿ ಉಡುಪಿಯ ಸಂತೆಕಟ್ಟೆಯ ಎಸ್​ಬಿಐ ಬ್ರಾಂಚಿಗೆ ತಮ್ಮ ಖಾತೆಯನ್ನು ವರ್ಗಾವಣೆ ಮಾಡಿದ್ದರು. ತನ್ನ ದುಡಿಮೆಯ ಐದೂವರೆ ಲಕ್ಷ ರೂ.ವನ್ನು ಹರೀಶ್ ಫಿಕ್ಸೆಡ್ ಡಿಪಾಸಿಟ್ ಆಗಿ ಇಟ್ಟಿದ್ದರು. 

ಈ ನಡುವೆ, 2019 ಆಗಸ್ಟ್ 23 ರಂದು ಮೊಬೈಲ್​ಗೆ ಬಂದ ಮೆಸೇಜ್ ಗಮನಿಸಿ ಬ್ಯಾಂಕಿಗೆ ತೆರಳಿ ನೋಡಿದಾಗ, ಫಿಕ್ಸೆಡ್ ಡೆಪಾಸಿಟ್​ನಲ್ಲಿದ್ದ ಹಣವೇ ಮಂಗ ಮಾಯವಾಗಿತ್ತು. ಅದರಲ್ಲಿ, ರೂ. 6360 ಮಾತ್ರ ಉಳಿದಿತ್ತು. ಹಣ ಕಳೆದುಕೊಂಡ ಹರೀಶ್ ಪೊಲೀಸರಿಗೆ ದೂರು ಕೊಟ್ಟಿದ್ದರು.‌ ಬ್ಯಾಂಕ್ ಮ್ಯಾನೇಜರ್​ ಬಳಿ ಕೇಳಿದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಎರಡು ವರ್ಷ ಹಣ ಕಳೆದುಕೊಂಡು ಓದ್ದಾಡಿದ ಹರೀಶ್, ಬಳಿಕ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿದ್ದಾರೆ. 

ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನುಬಾಗ್ ಬಳಿ ತಮ್ಮ ಅಳಲನ್ನು ತೋಡಿಕೊಂಡು ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಎಲ್ಲ ತನಿಖೆ ನಡೆದ ಬಳಿಕ ಹರೀಶ್ ಪರವಾಗಿ ತೀರ್ಪು ಬಂದಿತ್ತು. ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ಅಂದ್ರೆ, ಐದೂವರೆ ಲಕ್ಷಕ್ಕೆ 10% ಬಡ್ಡಿ ನೀಡಬೇಕು, ಜೊತೆಗೆ 50 ಸಾವಿರ ಪರಿಹಾರ, ಕೋರ್ಟ್‌ ವೆಚ್ಚ ಎಂದು ಹೆಚ್ಚುವರಿ 10 ಸಾವಿರ ರೂ.  ಮೂವತ್ತು ದಿನಗಳ ಒಳಗೆ ನೀಡಬೇಕು ಅಂತ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.

In public sector bank SBI lacs of fixed deposit is wrong doing customer court given,