ಬ್ರೇಕಿಂಗ್ ನ್ಯೂಸ್

Pahalgam terror attack, Pakistani terrorists: ಭಯೋತ್ಪಾದಕ ದಾಳಿ ; ಕೆಲವು ದಿನಗಳ ಹಿಂದೆಯೇ ಸಿಕ್ಕಿತ್ತೇ ಗುಪ್ತಚರ ಸುಳಿವು, ಭದ್ರತಾ ನಿರ್ಲಕ್ಷ್ಯದ ಬಗ್ಗೆ ಆರೋಪ, ಹೆಲ್ಮೆಟ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಉಗ್ರರು, ಮೂವರ ಗುರುತು ಪತ್ತೆ     |    Bearys Group, Bearys Turning Point mall, Deralakatte, Mangalore: ಎ.26ರಂದು ದೇರಳಕಟ್ಟೆಯಲ್ಲಿ 'ಬ್ಯಾರೀಸ್ ಟರ್ನಿಂಗ್ ಪಾಯಿಂಟ್' ಮಾಲ್ ಲೋಕಾರ್ಪಣೆ ; ಶಾಪಿಂಗ್‌ ಮಾಲ್‌, 4 ಪರದೆಗಳ ಮಲ್ಟಿಫ್ಲೆಕ್ಸ್ ಥಿಯೇಟರ್‌, ಫುಡ್‌ ಕೋರ್ಟ್‌ ಆಕರ್ಷಣೆ, ಆರಂಭಿಕ ದಿನದಂದು ಗೇಮ್ಸ್‌ ಉಚಿತ     |    Cm Siddaramaiah, Pahalgam Attack: ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ ; ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ, ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಿದ್ದು ಗರಂ    |   

ಕಾವೂರಿನಲ್ಲಿ ಬೀದಿ ಕಾಳಗಕ್ಕೆ ರೆಡಿಯಾಗಿದ್ದ ಗುಂಪು ; ಪೊಲೀಸರ ಲಾಠಿ ರುಚಿ ಬೀಳುತ್ತಲೇ ಓಡಿದ ಯುವಕರು !  

26-08-21 09:34 pm       Mangaluru Correspondent   ಕರಾವಳಿ

ನಗರದ ಕಾವೂರು ಜಂಕ್ಷನ್ ಬಳಿ ಸಂಜೆ ಏಳು ಗಂಟೆ ಸುಮಾರಿಗೆ ಬೀದಿ ಕಾಳಗ ನಡೆಯುವುದು ಪೊಲೀಸರ ಸಕಾಲಿಕ ಕ್ರಮದಿಂದ ಸ್ವಲ್ಪದರಲ್ಲಿ ತಪ್ಪಿದೆ.‌

ಮಂಗಳೂರು, ಆಗಸ್ಟ್ 26: ನಗರದ ಕಾವೂರು ಜಂಕ್ಷನ್ ಬಳಿ ಸಂಜೆ ಏಳು ಗಂಟೆ ಸುಮಾರಿಗೆ ಬೀದಿ ಕಾಳಗ ನಡೆಯುವುದು ಪೊಲೀಸರ ಸಕಾಲಿಕ ಕ್ರಮದಿಂದ ಸ್ವಲ್ಪದರಲ್ಲಿ ತಪ್ಪಿದೆ.‌ ಕಾವೂರು ಠಾಣೆಯ ಕೂಗಳತೆ ದೂರದಲ್ಲಿ ಘಟನೆ ನಡೆದಿದ್ದು ಎರಡು ಕೋಮುಗಳ ಯುವಕರು ಸೇರಿ ಬೀದಿ ಕಾಳಗ ನಡೆಸಲು ರೆಡಿಯಾಗಿದ್ದರು. 

ಯುವಕರಿದ್ದ ಕಾರು ಎದುರಿನಲ್ಲಿ ಸಾಗುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾಗಿತ್ತು. ಸ್ಕೂಟರಿನಲ್ಲಿದ್ದ ಹಿಂದು ಸಂಘಟನೆಯ ಯುವಕರು ಕಾರು ಚಾಲಕನ ಬಗ್ಗೆ ಆಕ್ಷೇಪ ತೆಗೆದಿದ್ದರು. ಈ ವಿಚಾರ ಎರಡೂ ತಂಡಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ, ಎರಡೂ ಕಡೆಯ ಯುವಕರು ಸ್ಥಳದಲ್ಲಿ ಸೇರಿದ್ದು ಉದ್ವಿಗ್ನ ಸ್ಥಿತಿ ಎದುರಾಗಿತ್ತು.‌ ಕಾವೂರು ಕೋರ್ದಬ್ಬು ಸ್ಥಾನದ ಬಳಿ ಘಟನೆ ನಡೆದಿತ್ತು.‌

ಎರಡೂ ಗುಂಪುಗಳು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ, ಪೊಲೀಸರು ಧಾವಿಸಿದ್ದು ಸೇರಿದ್ದ ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಅಷ್ಟಾಗುತ್ತಲೇ ಸೇರಿದ್ದ ಯುವಕರೆಲ್ಲಾ ಓಡಿ ತಪ್ಪಿಸಿಕೊಂಡಿದ್ದಾರೆ. ಎದುರಿಗೆ ಸಿಕ್ಕವರಿಗೆಲ್ಲಾ ಲಾಠಿ ರುಚಿ ಬಿದ್ದಿದೆ. ಪೊಲೀಸರ ಸಕಾಲಿಕ ಕ್ರಮದಿಂದಾಗಿ ಎರಡು ಕೋಮುಗಳ ನಡುವಿವ ಬೀದಿ ಕಾಳಗ ತಪ್ಪಿದೆ.

Police Mild Lati Charge after Accident of car and bike turns to a clash between groups at Kavoor in Mangalore.