ಬ್ರೇಕಿಂಗ್ ನ್ಯೂಸ್

Pahalgam terror attack, Pakistani terrorists: ಭಯೋತ್ಪಾದಕ ದಾಳಿ ; ಕೆಲವು ದಿನಗಳ ಹಿಂದೆಯೇ ಸಿಕ್ಕಿತ್ತೇ ಗುಪ್ತಚರ ಸುಳಿವು, ಭದ್ರತಾ ನಿರ್ಲಕ್ಷ್ಯದ ಬಗ್ಗೆ ಆರೋಪ, ಹೆಲ್ಮೆಟ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಉಗ್ರರು, ಮೂವರ ಗುರುತು ಪತ್ತೆ     |    Bearys Group, Bearys Turning Point mall, Deralakatte, Mangalore: ಎ.26ರಂದು ದೇರಳಕಟ್ಟೆಯಲ್ಲಿ 'ಬ್ಯಾರೀಸ್ ಟರ್ನಿಂಗ್ ಪಾಯಿಂಟ್' ಮಾಲ್ ಲೋಕಾರ್ಪಣೆ ; ಶಾಪಿಂಗ್‌ ಮಾಲ್‌, 4 ಪರದೆಗಳ ಮಲ್ಟಿಫ್ಲೆಕ್ಸ್ ಥಿಯೇಟರ್‌, ಫುಡ್‌ ಕೋರ್ಟ್‌ ಆಕರ್ಷಣೆ, ಆರಂಭಿಕ ದಿನದಂದು ಗೇಮ್ಸ್‌ ಉಚಿತ     |    Cm Siddaramaiah, Pahalgam Attack: ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ ; ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ, ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಿದ್ದು ಗರಂ    |   

ಬಿ.ಆರ್.ಶೆಟ್ಟಿ ಆಸ್ಪತ್ರೆಯಲ್ಲಿ ವೇತನ‌ ಸಮಸ್ಯೆ ; ಪ್ರತಿಭಟಿಸಿದ 16 ಮಂದಿಗೆ ವಜಾ ಶಿಕ್ಷೆ ! ಮತ್ತೆ ಮುಷ್ಕರಕ್ಕಿಳಿದ ನೂರಾರು ಸಿಬಂದಿ !!

25-08-21 01:08 pm       Udupi Correspondent   ಕರಾವಳಿ

ಬಿ.ಆರ್. ಶೆಟ್ಟಿ ತಾಯಿ ಮತ್ತು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಎಲ್ಲ ವಿಭಾಗದ ಸಿಬ್ಬಂದಿ ದಿಢೀರ್ ಮುಷ್ಕರ ಹೂಡಿದ್ದಾರೆ.‌

ಉಡುಪಿ, ಆಗಸ್ಟ್ 25: ಬಿ.ಆರ್. ಶೆಟ್ಟಿ ತಾಯಿ ಮತ್ತು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಎಲ್ಲ ವಿಭಾಗದ ಸಿಬ್ಬಂದಿ ದಿಢೀರ್ ಮುಷ್ಕರ ಹೂಡಿದ್ದಾರೆ.‌ ಹೀಗಾಗಿ ಇಂದು ಎಮರ್ಜೆನ್ಸಿ ಸೇವೆಗಳನ್ನು ಹೊರತುಪಡಿಸಿ ಇತರ ಯಾವುದೇ ಚಿಕಿತ್ಸೆ ನೀಡದೇ ವೈದ್ಯಕೀಯ ಸಿಬಂದಿ ಮುಷ್ಕರ ನಡೆಸಿದ್ದಾರೆ. 

ಇದರಿಂದಾಗಿ ಚಿಕಿತ್ಸೆಗಾಗಿ ಬಂದ ರೋಗಿಗಳು ಆಸ್ಪತ್ರೆ ಹೊರಗಡೆ ಪರದಾಟ ಅನುಭವಿಸುತ್ತಿದ್ದಾರೆ.‌ ವೇತನ ನೀಡದ ಕಾರಣವೊಡ್ಡಿ ಎರಡು ದಿನಗಳ ಹಿಂದೆ ಮುಷ್ಕರ ಹೂಡಿದ್ದಕ್ಕಾಗಿ ಅಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ 16 ಸಿಬಂದಿಯನ್ನು ನಿನ್ನೆ ಬಿಆರ್ ಎಸ್ ಆಸ್ಪತ್ರೆಯ ಆಡಳಿತ ಕೆಲಸದಿಂದ ವಜಾ ಮಾಡಿತ್ತು. 

16 ಮಂದಿಯನ್ನು ದಿಢೀರ್ ಕೆಲಸದಿಂದ ಕಿತ್ತು ಹಾಕಿದ್ದನ್ನು ವಿರೋಧಿಸಿ ಇಂದು ಆಸ್ಪತ್ರೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ಹೂಡಿದ್ದು ಕೆಲಸ ಮಾಡದೆ ಹೊರಗಡೆ ನಿಂತಿದ್ದಾರೆ.‌ 16 ಸಿಬ್ಬಂದಿಯನ್ನು ವಜಾ ಮಾಡಿದ್ದಕ್ಕೆ ಕಾರಣ ಕೊಡಬೇಕು. ಹಾಗೇ ತೆಗೆಯುವುದಿದ್ದರೆ ನಮ್ಮೆಲ್ಲರನ್ನೂ ಕೆಲಸದಿಂದ ತೆಗೆಯಬೇಕು. ನ್ಯಾಯ ಸಿಗುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಮುಷ್ಕರ ನಿರತರು ಪಟ್ಟು ಹಿಡಿದಿದ್ದಾರೆ. 

ಮಹಿಳೆಯರು, ಪುರುಷರು ಸೇರಿ ಆಸ್ಪತ್ರೆ ಸಿಬ್ಬಂದಿ ಮುಷ್ಕರ ನಿರತರಾಗಿದ್ದು ಆಸ್ಪತ್ರೆ ಮ್ಯಾನೇಜ್ ಮೆಂಟ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ‌ನಿನ್ನೆ ರಾತ್ರಿಯಿಂದ ನಿರಂತರ ಮುಷ್ಕರ ನಡೆಯುತ್ತಿದ್ದು ಆಸ್ಪತ್ರೆಯ ಸ್ಥಿತಿ ಬಿಗಡಾಯಿಸಿದೆ. ಈ ನಡುವೆ, ಶಾಸಕ ರಘುಪತಿ ಭಟ್ ಮುಷ್ಕರ ನಿರತರನ್ನು ಮಾತುಕತೆಗೆ ಕರೆದಿದ್ದಾರೆ.

Video: 

B R Shetty hospital in Udupi faces salary issue staffs and doctors protest 16 staffs suspended