ಅಫ್ಘಾನ್‌ಗೆ ತೆರಳಿದ ಐದೇ ದಿನದಲ್ಲಿ ಸಂಕಷ್ಟ ಎದುರಾಗಿತ್ತು..! ಅಮೆರಿಕನ್ ಯೋಧರು ರಕ್ಷಣೆ ನೀಡಿದ್ರು!

24-08-21 02:00 pm       Mangaluru Correspondent   ಕರಾವಳಿ

ವಿಮಾನದಲ್ಲಿ ಕುಳಿತಾಗ ನಿಲ್ದಾಣದ ಹೊರಗೆ ಜನಜಂಗುಳಿ ಕಾಣಿಸಿತು. ಜನರು ಜೀವ ರಕ್ಷಣೆಗಾಗಿ ಬಸ್‌ ನಿಲ್ದಾಣಕ್ಕೆ ನುಗ್ಗಿದಂತೆ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿರುವುದು ಅಲ್ಲಿನ ಭೀಕರತೆಗೆ ಸಾಕ್ಷಿಯಾಗಿತ್ತು ಎಂದು ಬಿಕರ್ನಕಟ್ಟೆಯ ನಿವಾಸಿ ರಾಕಿ ಚರಣ್ ಮೊಂತೇರೋ ಹೇಳಿದ್ದಾರೆ. ‌

ಮಂಗಳೂರು, ಆಗಸ್ಟ್ 23: ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದೆ.‌ ಆದರೆ, ತುರ್ತು ಕರೆಗೆ ಸ್ಪಂದಿಸಿ ಆಗಸ್ಟ್‌ 9ರಂದು ಅಫ್ಘಾನಿಸ್ತಾನಕ್ಕೆ ತಲುಪಿದ್ದೆ. ಕೇವಲ ಐದು ದಿನ ಕರ್ತವ್ಯ ನಿರ್ವಹಿಸುವಷ್ಟರಲ್ಲಿ ದೇಶವನ್ನು ತಾಲಿಬಾನಿ ಭಯೋತ್ಪಾದಕರು ಸ್ವಾಧೀನ ಪಡಿಸಿಕೊಂಡಿದ್ದರು. ಆದರೆ ಅಮೆರಿಕದ ಮಿಲಿಟರಿ ಬೇಸ್ ನಲ್ಲಿದ್ದ ಕಾರಣ ನಮಗೇನೂ ತೊಂದರೆ ಆಗಿಲ್ಲ ನಗರದ ಬಿಕರ್ನಕಟ್ಟೆಯ ನಿವಾಸಿ ರಾಕಿ ಚರಣ್ ಮೊಂತೇರೋ ಹೇಳಿದ್ದಾರೆ. ‌

ಅಮೆರಿಕ ಸೇನಾಪಡೆಯಲ್ಲಿ ಮೆಕಾನಿಕಲ್‌ ಇನ್‌ಚಾರ್ಜ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕಿ ಚರಣ್ ಕಳೆದ ಮಾರ್ಚ್‌ ತಿಂಗಳಲ್ಲಿ ಊರಿಗೆ ಬಂದಿದ್ದೆ. ಈ ಮಧ್ಯೆ ಸೇನಾ ವಿಭಾಗದಿಂದ ತುರ್ತು ಕರೆ ಬಂದ ಕಾರಣಕ್ಕೆ ಆ. 9ರಂದು ಅಪಘಾನಿಸ್ಥಾನಕ್ಕೆ ತೆರಳಿದ್ದೆ. ಅಲ್ಲಿ ಅಮೆರಿಕ ಸೇನೆಯ ಅಗತ್ಯ ಕಾರ್ಯಗಳನ್ನ ನಿರ್ವಹಣೆ ಮಾಡುತ್ತಿದ್ದಾಗಲೇ ಇಡೀ ದೇಶವನ್ನು ತಾಲಿಬಾನ್‌ಗಳು ಆಕ್ರಮಿಸಿದ್ದರು. ರಜೆಯಲ್ಲಿ ಬಂದು ಮತ್ತೆ ಕರ್ತವ್ಯಕ್ಕೆ ಹಾಜರಾದ ಐದೇ ದಿನದಲ್ಲಿ ಈ ರೀತಿ ಆಗಿದ್ದು ಆತಂಕಗೊಂಡಿದ್ದೆ.‌

ಆದರೆ, ಈ ನಡುವೆ ಆ.16ರ ರಾತ್ರಿ ಕಾಬೂಲ್‌ನಿಂದ ಕತಾರ್ ಗೆ ಏರ್‌ಲಿಫ್ಟ್ ಮಾಡುವುದೆಂದು ತಿಳಿಸಿದರು. ವಿಮಾನದಲ್ಲಿ ಕುಳಿತಾಗ ನಿಲ್ದಾಣದ ಹೊರಗೆ ಜನಜಂಗುಳಿ ಕಾಣಿಸಿತು. ಜನರು ಜೀವ ರಕ್ಷಣೆಗಾಗಿ ಬಸ್‌ ನಿಲ್ದಾಣಕ್ಕೆ ನುಗ್ಗಿದಂತೆ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿರುವುದು ಅಲ್ಲಿನ ಭೀಕರತೆಗೆ ಸಾಕ್ಷಿಯಾಗಿತ್ತು ಎಂದಿದ್ದಾರೆ. 

ಅಮೆರಿಕ ಸೇನೆ ಭಾರತೀಯರು ಸಹಿತ ತಮ್ಮ ಹಿಡಿತದಲ್ಲಿರುವ ಮಿಲಿಟರಿ ಬೇಸ್ ನೌಕರರನ್ನು ಕತಾರ್‌ ನಿಲ್ದಾಣಕ್ಕೆ ಸ್ಥಳಾಂತರ ಮಾಡುತ್ತಿದೆ. ಅಲ್ಲಿಂದ ಭಾರತೀಯ ರಾಯಭಾರಿಗಳು ಸೇರಿ ನಮ್ಮನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ ರಾಕಿ ಚರಣ್‌ ಮೊಂತೆರೋ ನಿಟ್ಟುಸಿರು ಬಿಟ್ಟಿದ್ದಾರೆ.

Rocky Sharan stranded in Afghan reaches Mangalore shares his experience in Kabul. Last night five stranded people reached Managalore airport.