ಬ್ರೇಕಿಂಗ್ ನ್ಯೂಸ್
12-08-21 05:51 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 12: ಯಾವುದೇ ಮಗುವಿಗೆ ಕೊರೊನಾ ಸೋಂಕಿನಿಂದ ತೊಂದರೆ ಆಗಬಾರದು ಎನ್ನುವ ಕಾಳಜಿ ಇಟ್ಟುಕೊಂಡು ಕೆಲಸ ಮಾಡಬೇಕು. ಇನ್ನು ಒಂದೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳನ್ನೂ ತಪಾಸಣೆಗೆ ಒಳಪಡಿಸಬೇಕು. ಪರೀಕ್ಷೆಯಿಂದ ಯಾವುದೇ ಮಗು ಹೊರಗೆ ಉಳಿಯಬಾರದು. ಜನಪ್ರತಿನಿಧಿಗಳು, ಅಧಿಕಾರಿಗಳು ಕಲೆಕ್ಟಿವ್ ಜವಾಬ್ದಾರಿ ಹೊತ್ತುಕೊಳ್ಳಬೇಕು. ಈ ಮೀಟಿಂಗ್ ಪರಿಣಾಮ ನಾಳೆ, ನಾಡಿದ್ದು ಫೀಲ್ಡಲ್ಲಿ ಕಾಣಬೇಕು. ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಯುದ್ಧೋಪಾದಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಶಾಸಕರು ಮತ್ತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದರು. ಸಭೆಯಲ್ಲಿ ಕೊರೊನಾ ಲಸಿಕೆ ಕೊರತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಶಾಸಕರು ಮುಖ್ಯಮಂತ್ರಿಯ ಗಮನ ಸೆಳೆದರು.
ಸದ್ಯಕ್ಕೆ ತಿಂಗಳಿಗೆ 65 ಲಕ್ಷ ಕೋವಿಡ್ ವ್ಯಾಕ್ಸಿನ್ ರಾಜ್ಯಕ್ಕೆ ಬರ್ತಿದೆ. ಆದರೆ, ಇದು ಸಾಕಾಗಲ್ಲ. ತಿಂಗಳಿಗೆ ಒಂದೂವರೆ ಕೋಟಿ ಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಈ ತಿಂಗಳಲ್ಲಿ ಸಾಧ್ಯವಿಲ್ಲ. ಮುಂದಿನ ತಿಂಗಳಿಂದ ಒಂದು ಕೋಟಿ ಲಸಿಕೆ ನೀಡುವುದಾಗಿ ಹೇಳಿದ್ದಾರೆ. ಹೆಚ್ಚುವರಿ ಬಂದ ಲಸಿಕೆಯನ್ನು ಗಡಿಭಾಗದ ಜಿಲ್ಲೆಗಳಿಗೆ ಕಳಿಸಿಕೊಡುತ್ತೇನೆ. ಗಡಿಯಿಂದ ಹತ್ತು ಕಿಮೀ ವ್ಯಾಪ್ತಿಯಲ್ಲಿ ಇತರ ರಾಜ್ಯಗಳ ನಿವಾಸಿಗಳೂ ಬಂದು ಲಸಿಕೆ ಪಡೆಯುವುದರಿಂದ ಈ ಭಾಗಕ್ಕೆ ಹೆಚ್ಚು ಲಸಿಕೆ ಬೇಕಾಗುತ್ತದೆ. ಅದನ್ನು ಪೂರೈಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪ್ರಮುಖವಾಗಿ ಕೇರಳದಿಂದ ಆಗಮಿಸುವ ಜನರಿಂದಾಗಿ ಕೋವಿಡ್ ಆತಂಕ ಎದುರಾಗಿರುವ ಬಗ್ಗೆ ಚರ್ಚೆ ನಡೆಯಿತು. ಶಾಸಕ ಯು.ಟಿ.ಖಾದರ್, ಕೇರಳದಲ್ಲಿ ಕೋವಿಡ್ ಹೆಚ್ಚಿರುವುದರಿಂದ ಗಡಿಯನ್ನು ಹೊಂದಿಕೊಂಡಿರುವ ತನ್ನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಲಸಿಕೆ ನೀಡಬೇಕು. ಅಲ್ಲದೆ, ಕೋವಿಡ್ ಲಸಿಕೆ ಪಡೆದವರನ್ನು ಕರ್ನಾಟಕ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು. ಡೈಲಿ ಬಂದು ಹೋಗುವ ಮಂದಿಗೆ ರಿಯಾಯ್ತಿ ಕೊಡಬೇಕು ಎಂದು ಸಿಎಂ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋವಿಡ್ ಲಸಿಕೆ ಹೆಚ್ಚುವರಿ ಬೇಕೆಂದು ಕೇಳಿದ್ದನ್ನು ಒಪ್ಪುತ್ತೇನೆ. ಆದರೆ, ಕೋವಿಡ್ ವಿಚಾರದಲ್ಲಿ ಯಾವುದೇ ರಿಯಾಯ್ತಿ ನೀವು ಕೇಳಬಾರದು. ನೀವು ಕೂಡ ಇಲ್ಲಿ ಕುಳಿತು ಆಡಳಿತ ನಡೆಸಿದವರು. ಒಬ್ಬೊಬ್ಬರಿಗೆ ಒಂದೊಂದು ರಿಯಾಯ್ತಿ ಕೊಡುವುದರಿಂದ ಕೋವಿಡ್ ನಿಯಂತ್ರಣಕ್ಕೆ ಬರುವುದಿಲ್ಲ. ಗಡಿಭಾಗದಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಮಾಡಿ ನೆಗೆಟಿವ್ ಇದ್ದವರನ್ನು ಮಾತ್ರ ಬಿಡುತ್ತೇವೆ. ಎರಡು ಡೋಸ್ ಪಡೆದರೂ ಕೋವಿಡ್ ನೆಗೆಟಿವ್ ಹೊಂದಿರಬೇಕು. ಡೈಲಿ ಹೋಗುವ ಮಂದಿ ಏಳು ದಿನಕ್ಕೊಮ್ಮೆ ಟೆಸ್ಟ್ ಮಾಡಿಸಲಿ. 14 ದಿನಕ್ಕೊಮ್ಮೆ ಮಾಡಿದರೆ ಸಾಕು ಎಂದಿದ್ದ ನಿಯಮವನ್ನು ಮತ್ತಷ್ಟು ಬಿಗಿ ಮಾಡಲಾಗಿದೆ ಎಂದು ಹೇಳಿದರು.
ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ನೂರು ಬೆಡ್ ಇರುವ ತಾಲೂಕು ಆಸ್ಪತ್ರೆಯಲ್ಲಿ ಐಸಿಯು ಆಗಬೇಕು. ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಮೂರನೇ ಅಲೆಯಲ್ಲಿ ತೊಂದರೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಮುಖ್ಯಮಂತ್ರಿ, ಬ್ಯಾಂಕು, ಸೊಸೈಟಿ, ಕಟ್ಟಡ ನಿರ್ಮಾಣ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಮಿಕರು, ಉದ್ಯೋಗಸ್ಥರಿಗೆ ಲಸಿಕೆ ಕೊಡಿಸುವ ಬಗ್ಗೆ ಆಯಾ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಅಧಿಕೃತ ಆದೇಶ ಕೊಡಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಮಂಗಳೂರಿನಲ್ಲಿ 12 ಸಾವಿರ ಕಿಲೋ ಲಿಕ್ವಿಡ್ ಆಕ್ಸಿಜನ್ ಸ್ಟೋರೇಜ್ ಇರಬೇಕು. ತಾಲೂಕು ವ್ಯಾಪ್ತಿಯಲ್ಲಿ ನೂರು ಬೆಡ್ ಇರುವ ಆಸ್ಪತ್ರೆಗಳಲ್ಲಿ ಆರು ಸಾವಿರ ಕಿಲೋ ಲಿಕ್ವಿಡ್ ಆಕ್ಸಿಜನ್ ಸ್ಟೋರೇಜ್ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
Chief minister (CM) Basavaraj Bommai directed officials to scientifically separate Covid patients who are in home isolation and shift them to Covid care centers.He was speaking at a review meeting held regarding the controlling of pandemic at zilla panchayat office on Thursday August 12. Bommai said, “There is a need to control the rising cases in the district. During the second wave, the district administration has managed very well. We have to now control the positivity rate in the district. Among the active cases, 80% of them are in home isolation which is not a good sign in this situation. We need to shift them to Covid care centres at the earliest.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm