ಬ್ರೇಕಿಂಗ್ ನ್ಯೂಸ್
09-08-21 11:00 am Mangaluru Correspondent ಕರಾವಳಿ
ಸುಳ್ಯ, ಆಗಸ್ಟ್ 8: ಸಚಿವರು, ಶಾಸಕರಂದ್ರೆ ತಾವು ಹೋಗೋ ದಾರಿಯೆಲ್ಲ ಸರಿ ಇರಬೇಕು. ಇಲ್ಲಾಂದ್ರೆ ಸರಿ ಇರದ ಜಾಗದಲ್ಲಿ ತಾವು ಹೋಗಲ್ಲ ಎಂದು ಅಲಿಖಿತ ನಿಯಮ ಮಾಡಿಕೊಂಡವರೇ ಹೆಚ್ಚು. ಅಂಥದರಲ್ಲಿ ಸುಳ್ಯದ ಐದು ಬಾರಿಯ ಶಾಸಕ, ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಭಡ್ತಿ ಪಡೆದಿರುವ ಎಸ್. ಅಂಗಾರ ತಮ್ಮದೇ ಕ್ಷೇತ್ರದಲ್ಲಿ ಕುಗ್ರಾಮಕ್ಕೆ ಹೋಗಿ ಸಿಕ್ಕಿಬಿದ್ದಿದ್ದಾರೆ.
ಆಲೆಟ್ಟಿ - ಕೂಟೇಲು ಸಂಪರ್ಕ ರಸ್ತೆಯ ಏರುಹಾದಿಯಲ್ಲಿ ಜೀಪಿನಲ್ಲಿ ತೆರಳುತ್ತಿದ್ದಾಗ ಮಳೆಯಿಂದಾಗಿ ಮಣ್ಣು ಜಾರಿ ಜೀಪು ಚಲಿಸಲಾಗದೆ ಸಿಕ್ಕಿಬಿದ್ದಿದೆ. ಈ ವೇಳೆ ಸಚಿವರು ಸೇರಿ ಜೊತೆಗಿದ್ದವರೆಲ್ಲಾ ರಸ್ತೆಗೆ ಇಳಿದು ನಡೆದು ಸಾಗಿದ್ದಾರೆ. ಈ ರೀತಿ ಸಚಿವರು ಸಹಜ ಎನ್ನುವಂತೆ ನಡೆದುಕೊಂಡೇ ಗುಡ್ಡ ಏರಿರುವ ವಿಡಿಯೋ ವೈರಲ್ ಆಗಿದೆ. ಜಾಲತಾಣದಲ್ಲಿ ಸುಳ್ಯದ ಕುಗ್ರಾಮಗಳ ಸ್ಥಿತಿಯ ಬಗ್ಗೆ ಮರುಕ ಪಟ್ಟು ಆಡಳಿತಗಾರರನ್ನೂ ಟೀಕಿಸಲಾಗಿದೆ.
ಸುಳ್ಯದಲ್ಲಿ ಈ ರೀತಿಯ ಕುಗ್ರಾಮ, ಡಾಮರು ಕಾಣದ ರಸ್ತೆಗಳು ಬಹಳಷ್ಟು ಇವೆ. ಮಳೆಗಾಲದಲ್ಲಿ ಅಲ್ಲೆಲ್ಲಾ ಇದೇ ಅವಸ್ಥೆ. ಇದಾದ್ರೂ ತುಂಬ ಹಿಂದುಳಿದ ಜಾಗ ಆಗಿರಬಹುದು. ಸ್ವಲ್ಪ ಮುಂದುವರಿದ ಭಾಗ ಎನಿಸಿಕೊಂಡ ಪ್ರದೇಶಗಳಲ್ಲೂ ಸುಳ್ಯದ ರಸ್ತೆಗಳು ಗಬ್ಬೆದ್ದು ಹೋಗಿವೆ. ಅದಕ್ಕೆ ಅಲ್ಲಿ ಬೀಳುವ ಮಳೆಯ ಜೊತೆಗೆ ಕಾಲ ಕಾಲಕ್ಕೆ ಡಾಮರು ಆಗದೇ ಇರುವುದೂ ಕಾರಣ.
ಸುಳ್ಯದಲ್ಲಿ ಒಬ್ಬರೇ ಐದು ಬಾರಿ ಗೆದ್ದರೂ ಸುಧಾರಣೆ ಆಗಿಲ್ಲ ಎಂಬ ಟೀಕೆಯನ್ನು ಬಿಜೆಪಿ ಪಕ್ಷದವರೇ ಮಾಡುತ್ತಿದ್ದಾರೆ. ಇದಕ್ಕಾಗಿ ಕೇವಲ ಶಾಸಕರನ್ನು ಮಾತ್ರ ದೂರಿದರೆ ಸಾಲದು. ಇಲ್ಲಿಂದ ಮೇಲಕ್ಕೆ ಹತ್ತಿ ಹೋಗಿರುವ ಎಲ್ಲರನ್ನೂ ದೂರಬೇಕು. ಯಾಕಂದ್ರೆ, ಸುಳ್ಯ ಕ್ಷೇತ್ರವೇ ಮೀಸಲು. ಅಂದರೆ ಹಿಂದುಳಿದ ಪ್ರದೇಶ. ಹಿಂದೆ ಉಳಿದ ಕ್ಷೇತ್ರವನ್ನು ಮುಂದಕ್ಕೆ ಒಯ್ಯಲು ಯಾರೂ ಈವರೆಗೆ ಮುಂದಾಗಿಲ್ಲ.
ಅದಕ್ಕೆ ಶಾಸಕರ ಪಾತ್ರ ಎಷ್ಟು ಕಾರಣವೋ, ಅಷ್ಟೇ ಇತರ ಪಕ್ಷದವರು ಮತ್ತು ಬಿಜೆಪಿಯ ಇತರ ನಾಯಕರ ಪಾತ್ರವೂ ಇದೆ. ಬೇರೆ ಕ್ಷೇತ್ರಗಳಿಗೆ ಸುರಿದಷ್ಟು ಅನುದಾನ ಇಲ್ಲಿಗೆ ಬಂದಿಲ್ಲ. ಬರುವಂತೆ ಪ್ರಯತ್ನವನ್ನೂ ಮಾಡಿಲ್ಲ. ಈ ಭಾಗದ ಬಗ್ಗೆ ಅಸಡ್ಡೆ ಎಷ್ಟು ಅಂದರೆ ಇತ್ತೀಚೆಗೆ ಗುತ್ತಿಗಾರಿನಲ್ಲಿ ಅಲ್ಲಿನ ಜನರೇ ದೇಣಿಗೆ ಸಂಗ್ರಹಿಸಿ ಸೇತುವೆ ಕಟ್ಟಿದ್ದರು.
ಹಾಗಿದ್ದರೂ, ಸುಳ್ಯದ ಶಾಸಕ ಅನುದಾನ ತರುವ ಬಗ್ಗೆ ಹೋದಲ್ಲಿ ಬಂದಲ್ಲಿ ಹೇಳುತ್ತಲೇ ಬಂದಿದ್ದರು. ಸಾಕಷ್ಟು ಕೆಲಸ ಆಗಿದ್ದರೂ, ಆಗದ ಕೆಲಸಗಳೇ ಹತ್ತು ಪಾಲು ಇದೆ. ಆದರೆ, ಮೆಚ್ಚಬೇಕಾದ ಸಂಗತಿಯಂದ್ರೆ ಆಲೆಟ್ಟಿ - ಕೂಟೇಲು ಸಂಪರ್ಕ ರಸ್ತೆಯ ದುಸ್ಥಿತಿ ಗೊತ್ತಿದ್ದರೂ ಅಲ್ಲಿನ ಜನರ ಅಹವಾಲು ಕೇಳಲು ಹೋದ ನೂತನ ಸಚಿವರದ್ದು. ಶಾಸಕರು ಸಚಿವರಾಗಿ ಬಡ್ತಿ ಪಡೆದಿದ್ದರೂ ಅದನ್ನು ತೋರಿಸಿಕೊಳ್ಳದೆ ಕಳೆದ ಬಾರಿ ಚುನಾವಣಾ ಬಹಿಷ್ಕಾರ ಹಾಕಿದ್ದ ಪ್ರದೇಶದ ಜನರ ಅಹವಾಲು ಕೇಳಲು ಮುಂದಾಗಿದ್ದಾರೆ. ಸಚಿವರಾಗಿ ಕೆಲಸ ವಹಿಸಿಕೊಂಡ ಮೊದಲ ದಿನವೇ ಕುಗ್ರಾಮಕ್ಕೆ ಹೊರಟು ನಿಂತಿದ್ದು ಅಂಗಾರ ಅವರ ಕಾರ್ಯಶೈಲಿಗೆ ಕನ್ನಡಿ ಹಿಡಿದಿದೆ.
ನಡೆದು ಹೋಗಲೂ ಸಾಧ್ಯವಾಗದ ಜಾಗಕ್ಕೆ ಅಧಿಕಾರಿಗಳನ್ನೂ ಜೊತೆಗೊಯ್ದು ಸಚಿವರು ನಡೆದು ಹೋದರೆ ಮುಂದಿನ ವರ್ಷಕ್ಕಾದರೂ, ಅಲ್ಲಿ ನಡೆಯಬಹುದಾದ ರಸ್ತೆ ಆದೀತು ಎನ್ನುವ ಭರವಸೆ ಮೂಡುತ್ತದೆ.
Sullia Minister of state for Fisheries Ports and Inland Transport Department of Karnataka Angara goes walking after Jeep stuck in Mud goes viral.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm