ಬ್ರೇಕಿಂಗ್ ನ್ಯೂಸ್
05-08-21 03:56 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 5: 18 ವರ್ಷದ ಹುಡುಗನೊಬ್ಬ ಸೈಕಲಿನಲ್ಲೇ ಮಂಗಳೂರಿನಿಂದ ಕಾಶ್ಮೀರಕ್ಕೆ ಹೊರಟಿದ್ದಾನೆ. ತುಳುನಾಡಿನ ಕೆಂಬಣ್ಣದ ಬಾವುಟ ಹಾರಿಸಿಕೊಂಡು ಹುಡುಗನ ಜಾಥಾ ಮೂಡುಬಿದ್ರೆಯಿಂದ ಆಗಸ್ಟ್ 2ರಂದು ಆರಂಭಗೊಂಡಿದ್ದು ಮೂರು ದಿನದಲ್ಲಿ ಗೋವಾ ಗಡಿ ತಲುಪಿದೆ. ಸೈಕಲ್ ನಲ್ಲಿ ದೇಶ ಸುತ್ತ ಹೊರಟ ಹುಡುಗನ ಹೆಸರು ಮೊಹಮ್ಮದ್ ಆರಿಫ್.
ಮೂಡುಬಿದ್ರೆಯಿಂದ ನೇರವಾಗಿ ಉಡುಪಿಗೆ ತೆರಳಿದ್ದು ಅಲ್ಲಿ ಕೃಷ್ಣಮಠದ ಆವರಣದಲ್ಲಿ ತಂಗಿದ್ದಾನೆ. ಮರುದಿನ ಬೆಳಗ್ಗೆ ಮತ್ತೆ ಸೈಕಲ್ ಪೆಡಲ್ ತುಳಿಯುತ್ತಾ ಭಟ್ಕಳ ತಲುಪಿದ್ದಾನೆ. ಭಟ್ಕಳದಲ್ಲಿ ಇರುವಾಗಲೇ ಕೇರಳ ಮೂಲದ ಇನ್ನೊಬ್ಬ ಸೈಕಲ್ ಯಾತ್ರಿ ಜೊತೆಯಾಗಿದ್ದಾನೆ. ಕೇರಳದ ತೃಶ್ಶೂರಿನಿಂದ ಅರವಿಂದ್ ಎನ್ನುವ ಮತ್ತೊಬ್ಬ ಯುವಕನೂ ಅದೇ ದಾರಿಯಲ್ಲಿ ಕಾಶ್ಮೀರಕ್ಕೆ ಹೊರಟಿದ್ದ. ಈಗ ಇಬ್ಬರೂ ಒಂದೇ ಗಮ್ಯದತ್ತ ಜೊತೆಯಾಗಿ ಹೊರಟಿದ್ದಾರೆ.
ಆಗಸ್ಟ್ 5ರಂದು ಮಧ್ಯಾಹ್ನ ಗೋವಾಕ್ಕೆ ಇನ್ನು 12 ಕಿಮೀ ಬಾಕಿಯಿದೆ ಎಂದಿದ್ದಾನೆ ಆರಿಫ್. ಮುಂದಿನ ದಾರಿ ಗೋವಾ, ರತ್ನಗಿರಿ, ಥಾಣೆ ಮೂಲಕ ನವೀ ಮುಂಬೈ ತಲುಪುವುದು. ಆಬಳಿಕ ಅಲ್ಲಿಂದ ಅಜ್ಮೀರ್, ದೆಹಲಿ ಸೇರುವುದು. ಅಲ್ಲಿಂದ ಚಂಡೀಗಢ, ಶಿಮ್ಲಾ, ಮನಾಲಿ ಮೂಲಕ ಲಡಾಖ್ ತಲುಪುವುದು. ದಿನಕ್ಕೆ ಕನಿಷ್ಠ ಅಂದರೂ ನೂರು ಕಿಮೀನಂತೆ ಸಾಗುತ್ತಲೇ ಅಂದಾಜು 45 ದಿನಗಳಲ್ಲಿ ಲಡಾಖ್ ತಲುಪುವ ಗುರಿ ಇಟ್ಟುಕೊಂಡಿದ್ದಾನೆ.
ಅಂದಹಾಗೆ, ಮಹಮ್ಮದ್ ಹಾರಿಫ್ ಮೂಡುಬಿದ್ರೆ ಬಳಿಯ ಪ್ರಾಂತ್ಯ ಗ್ರಾಮದ ಲಾಡಿ ಶಾಲಿಮಾರ್ ನಿವಾಸಿ. ಮೂಡುಬಿದ್ರೆಯಲ್ಲಿ ಅಲ್ಯುಮಿನಿಯಂ ಮತ್ತು ಹಾರ್ಡ್ ವೇರ್ ಶಾಪ್ ನಲ್ಲಿ ಕೆಲಸಕ್ಕಿದ್ದ. ಎಸ್ಸೆಸ್ಸೆಲ್ಸಿ ಮುಗಿಸಿ ನಿಡ್ಡೋಡಿಯಲ್ಲಿ ಐಟಿಐ ಕಲಿಯುತ್ತಿದ್ದಾನೆ. ಆತನಿಗೆ ವಿದೇಶಕ್ಕೆ ಹೋಗಬೇಕು ಎಂದಿತ್ತು. ಲಾಕ್ಡೌನ್ ಮೊದಲು ವಿದೇಶಕ್ಕೆ ಹಾರಲು ಎಲ್ಲ ತಯಾರಿ ಮಾಡಿಕೊಂಡಿದ್ದ. ಪಾಸ್ ಪೋರ್ಟ್ ಎಲ್ಲ ರೆಡಿಯಾದಾಗ ಲಾಕ್ಡೌನ್ ಆಗಿತ್ತು. ಹಾಗಾಗಿ ವಿದೇಶಕ್ಕೆ ಹೋಗುವುದು ಬಾಕಿಯಾಗಿತ್ತು.
ಇದಕ್ಕೂ ಮೊದಲೇ ಕಾಶ್ಮೀರಕ್ಕೆ ಹೋಗಬೇಕೆಂಬ ಕನಸನ್ನೂ ಹೊಂದಿದ್ದ. ರೈಲಿನಲ್ಲಿ ಹೋಗುವುದೋ ಎನ್ನುವ ಚಿಂತನೆಯಲ್ಲಿದ್ದಾಗಲೇ ತಾನು ಕೆಲಸ ಮಾಡುತ್ತಿದ್ದ ಹಾರ್ಡ್ ವೇರ್ ಶಾಪ್ ಮಾಲಕರು ಸೈಕಲಿನಲ್ಲಿ ಯಾತ್ರೆ ಹೋಗುವಂತೆ ಪ್ರೇರಣೆ ನೀಡಿದ್ದಾರೆ. ತುಸು ಕಷ್ಟವಾಗಬಹುದು. ಆದರೆ ವಿಭಿನ್ನ ಅನುಭವ ನೀಡುತ್ತದೆ ಎಂಬ ಅವರ ಸಲಹೆಯನ್ನೇ ಸವಾಲಾಗಿ ಸ್ವೀಕರಿಸಿದ ಆರಿಫ್ ಅದನ್ನೇ ಪಾಲಿಸಿದ್ದಾನೆ. ಸೈಕಲ್ ಮತ್ತು ಆತನ ದೈನಂದಿನ ಖರ್ಚನ್ನು ಅಂಗಡಿಯವರೇ ಭರಿಸಿದ್ದಾರಂತೆ. ದಿನವೂ ಎಲ್ಲಿ ಮುಟ್ಟಿದ್ದೀಯಾ, ಹೇಗಿದ್ದೀಯಾ ಎಂದು ಕೇಳಿ ಪ್ರಯಾಣಕ್ಕೆ ಶುಭ ಹಾರೈಕೆ ಮಾಡುತ್ತಾರೆ ಎಂದು ಸ್ಮರಿಸಿದ್ದಾನೆ ಆರಿಫ್.
ದಿನಾ ಸಂಜೆ ಆರು ಗಂಟೆ ವೇಳೆಗೆ ಎಲ್ಲಿಯಾದ್ರೂ ಪ್ರಯಾಣ ನಿಲ್ಲಿಸುತ್ತೇವೆ. ಮೊನ್ನೆ ಉಡುಪಿಯಲ್ಲಿ. ಮರುದಿನ ಭಟ್ಕಳ, ನಿನ್ನೆ ಗೋಕರ್ಣ ಬಳಿಯ ಬಾರ್ಗಿ ಪಂಚಾಯತ್ ಕಟ್ಟಡದಲ್ಲಿ ಉಳಿದುಕೊಂಡಿದ್ದೆವು. ಇವತ್ತು ಕಾರವಾರ ದಾಟಿ ಗೋವಾ ಹತ್ತಿರ ಮುಟ್ಟಿದ್ದೇವೆ. ಸಾಮಾನ್ಯವಾಗಿ ಕೇರಳದವರು ಸೈಕಲಿನಲ್ಲಿ ಯಾತ್ರೆ ಹೋಗುತ್ತಲೇ ಇರುತ್ತಾರೆ. ನಮ್ಮ ಕರ್ನಾಟಕದ ಜನ ಹಾಗೆ ನೋಡಿದರೆ ಸೈಕಲ್ ಸವಾರಿ ಮಾಡುವುದು ಕಡಿಮೆ ಎನ್ನುವ ಆರಿಫ್, ದಿನಾ ಬೆಳಗ್ಗೆ ಆರು ಗಂಟೆಗೆ ಎದ್ದು ಸೈಕಲ್ ತುಳಿಯುತ್ತೇವೆ. ಬಿಸಿಲು ಏರುವ ಮೊದಲು 50-60 ಕಿಮೀ ಸಾಗುತ್ತೇವೆ ಎನ್ನುತ್ತಾನೆ.
ದಾರಿಯಲ್ಲೇ ಊಟ, ತಿಂಡಿ ಮಾಡುತ್ತೇವೆ. ಈಗ ಒಬ್ಬ ಜೊತೆಗಾರ ಸಿಕ್ಕಿದ್ದಾನೆ. ಇಲ್ಲಾಂದ್ರೆ, ಒಬ್ಬಂಟಿಯಾಗೇ ಹೊರಟಿದ್ದೆ. ಎಷ್ಟು ಬೇಗ ತಲುಪುತ್ತೇವೋ ಅಷ್ಟು ಸಕ್ಸಸ್. ಕಾಶ್ಮೀರದ ಲಡಾಖ್ ವರೆಗೆ ಹೋಗಿ ಬರುವುದು ದೊಡ್ಡ ಕನಸು. ಅಲ್ಲಿಂದ ತಿರುಗಿ ರೈಲಿನಲ್ಲಿ ಬರುತ್ತೇನೆ. ಕೆಲಸ, ಜೀವನ ಅಂತೆಲ್ಲಾ ಜಂಜಾಟ ಎದುರಾದ ಬಳಿಕ ಹೀಗೆಲ್ಲಾ ಹೋಗುವುದು ಕಷ್ಟ ಎಂದು ಈಗಲೇ ಹೊರಟಿದ್ದೇನೆ ಎಂದುಸುರಿದ ಮಹಮ್ಮದ್ ಆರಿಫ್. ಹುಡುಗನ ಉತ್ಸಾಹ, ಸೈಕಲಿನಲ್ಲಿ ಸುತ್ತುವ ಹುಮ್ಮಸ್ಸು, ಕಾಶ್ಮೀರ ನೋಡಿ ಬರಬೇಕು ಎಂಬ ಕನಸು ಹೊತ್ತು ಹೊರಟ ಆರಿಫ್ ಪ್ರಯಾಣಕ್ಕೆ ನಮ್ಮದೂ ಶುಭ ಹಾರೈಕೆ.
18 year old boy is now on road trip cycling from Mangalore to Kashmir. Mohammad Arif will take 42 days to reach Kashmir via cycle.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm