ಬ್ರೇಕಿಂಗ್ ನ್ಯೂಸ್
24-07-21 04:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 24: ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಅದೇ ನಾಯಿಯನ್ನು ಪಳಗಿಸಿ, ಅಪರಾಧ ಪತ್ತೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಷ್ಟೇ ತಾಕತ್ತು ಇರುವ ವ್ಯಕ್ತಿಯ ರೀತಿ ಪೊಲೀಸರು ರೂಪಿಸುತ್ತಾರೆ. ಹೌದು.. ಡಾಬರ್ ಮನ್, ಮುಧೋಳ ಜಾತಿಯ ನಾಯಿಗಳು ಜಗತ್ತಿನಲ್ಲೇ ಹೆಸರು ಮಾಡಿರುವ ತಳಿಗಳು. ಇವತ್ತು ಮಂಗಳೂರಿನ ಡಾಗ್ ಸ್ಕ್ವಾಡ್ ನಲ್ಲಿ ಡಾಬರ್ ಮನ್ ನಾಯಿಯೊಂದು ಅಕಾಲ ಮೃತ್ಯುಗೀಡಾಗಿತ್ತು. ತಮ್ಮ ಸಿಬಂದಿ ಜೊತೆಗೇ ನಿಷ್ಠಾವಂತ ಸದಸ್ಯನಾಗಿದ್ದ ಶ್ವಾನ ಇನ್ನಿಲ್ಲವಾಗಿದ್ದು ಅಲ್ಲಿದ್ದ ಎಲ್ಲ ಸಿಬಂದಿಯ ಕಣ್ಣಂಚು ಒದ್ದೆ ಮಾಡಿತ್ತು.
2011ರ ಮಾರ್ಚ್ 15ರಂದು ಜನಿಸಿದ್ದ ಈ ಡಾಬರ್ ಮನ್ ನಾಯಿಗೆ ಸುಧಾ ಎಂದು ಹೆಸರಿಡಲಾಗಿತ್ತು. ಹುಟ್ಟಿದಂದಿನಿಂದ ಈ ನಾಯಿಯನ್ನು ಡಾಗ್ ಸ್ಕ್ವಾಡ್ ನಲ್ಲಿ ಪೊಲೀಸ್ ಸಿಬಂದಿಯಾಗಿದ್ದ ಸಂದೀಪ್ ಅವರೇ ಸಾಕಿ ಬೆಳೆಸಿದ್ದರು. ಮಂಗಳೂರಿನ ಡಾಗ್ ಸ್ಕ್ವಾಡ್ ನಲ್ಲಿ ಅದನ್ನು ಪಳಗಿಸಿ, ಒಂದೇ ವರ್ಷದಲ್ಲಿ ಕ್ರೈಮ್ ಡಿಟೆಕ್ಟಿವ್ ಆಗಿ ಡಾಗ್ ಸ್ಕ್ವಾಡ್ ತಂಡಕ್ಕೆ ಸೇರಿಸಲಾಗಿತ್ತು. ಹತ್ತು ವರ್ಷಗಳಿಂದ ಸಂದೀಪ್ ಅವರೇ ಅದನ್ನು ನೋಡಿಕೊಳ್ಳುತ್ತಿದ್ದರು. ಮಂಗಳೂರಿನಲ್ಲಿ ಹಲವಾರು ಕೊಲೆ, ಇನ್ನಿತರ ಅಪರಾಧ ಪತ್ತೆ ಕೃತ್ಯಗಳಲ್ಲಿ ತೊಡಗಿಸಿದ್ದ ಸುಧಾ ಪ್ರಭಾವಿ ಡಿಟೆಕ್ಟಿವ್ ಆಗಿ ಬೆಳೆದಿತ್ತು.
ಎಂಟು ವರ್ಷಗಳ ಹಿಂದೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದಿದ್ದ ವಾಚ್ ಮನ್ ಕೊಲೆ, ಐದು ವರ್ಷಗಳ ಹಿಂದೆ ಮುಚ್ಚೂರಿನ ಗಂಜಿಮಠದಲ್ಲಿ ಮಗನೇ ತಂದೆಯನ್ನು ಕೊಲೆಗೈದ ಕೃತ್ಯ, ವಾಮಂಜೂರಿನಲ್ಲಿ ನಡೆದ ಕೊರಗಜ್ಜ ಕಟ್ಟೆ ಕಳವು ಸೇರಿದಂತೆ ಹಲವಾರು ಕೊಲೆ, ಕಳವು ಪ್ರಕರಣಗಳಲ್ಲಿ ಸುಳಿವುಗಳನ್ನು ಕೊಟ್ಟಿದ್ದ ಬಗ್ಗೆ ಶ್ವಾನವನ್ನು ಸಾಕಿದ್ದ ಸಂದೀಪ್ ನೆನಪಿಸುತ್ತಾರೆ.
ಆದರೆ, ಏಳು ತಿಂಗಳ ಹಿಂದೆ ಶ್ವಾನದ ಸ್ವೀಟ್ ಹಾರ್ಟ್ ಆಗಿದ್ದ ಸಂದೀಪ್ ಬೇರೆ ಕಡೆಗೆ ವರ್ಗಾವಣೆ ಆಗಿದ್ದರು. ಆಬಳಿಕ ಸೊರಗಿದ ನಾಯಿಗೆ ತಲೆಯ ಭಾಗದಲ್ಲಿ ಮೂರು ತಿಂಗಳ ಹಿಂದೆ ಕ್ಯಾನ್ಸರ್ ರೀತಿಯ ಗಡ್ಡೆ ಕಾಣಿಸಿತ್ತು. ಆನಂತರ ತೀವ್ರವಾಗಿ ಬಳಲಿದ ನಾಯಿ ಇಂದು ಬೆಳಗ್ಗೆ ಸಾವು ಕಂಡಿದೆ. ಆದರೆ, ನಿಷ್ಠಾವಂತ ನಾಯಿ ಸತ್ತಿದ್ದನ್ನು ಸಂದೀಪ್ ಮತ್ತು ಡಾಗ್ ಸ್ಕ್ವಾಡ್ ತಂಡದ ಸದಸ್ಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದುಕೊಂಡೇ ಇಂದು ಶ್ವಾನದ ಅಂತ್ಯಕ್ರಿಯೆಗೆ ಬಂದಿದ್ದರು.
ಡಾಗ್ ಸ್ಕ್ವಾಡ್ ನಲ್ಲಿದ್ದ ನಾಯಿ ಕರ್ತವ್ಯದಲ್ಲಿದ್ದಾಗಲೇ ಸತ್ತಿದ್ದರಿಂದ ಪೊಲೀಸ್ ಗ್ರೌಂಡಿನಲ್ಲಿ ರಾಜ್ಯ ಸರಕಾರಿ ಮರ್ಯಾದೆ ನೀಡಲಾಯ್ತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಸಹೋದ್ಯೋಗಿ ನಾಯಿಗೆ ಹೂಹಾರ ತೊಡಿಸಿ, ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಆಬಳಿಕ ಸಿಎಆರ್ ಪಡೆಯಿಂದ ಮೂರು ಸುತ್ತು ಕುಶಾಲು ತೋಪು ಹಾರಿಸಿ ಸರಕಾರಿ ಗೌರವ ಸಲ್ಲಿಸಲಾಯ್ತು. ಸಿಡಿ ಗುಂಡನ್ನು ಗಾಳಿಯಲ್ಲಿ ಹಾರಿಸಿ, ಶ್ವಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು.
ಇದೇ ವೇಳೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ನಿಷ್ಠಾವಂತ ಶ್ವಾನದ ಗುಣಗಾನ ಮಾಡಿದ್ರು. ಅಲ್ಲದೆ, ನಾಯಿ ಸಾಕಿ ಬೆಳೆಸಿದ ಸಿಬಂದಿ ಸಂದೀಪ್ ಅವರ ಬಳಿ ತೆರೆಳಿ ಸಮಾಧಾನ ಸೂಚಿಸುವ ಮಾತನಾಡಿದ್ದು ವಿಶೇಷವಾಗಿತ್ತು. ಡಾಗ್ ಸ್ಕ್ವಾಡ್ ತಂಡದ ನಿಷ್ಠೆಯ ಸದಸ್ಯನಾಗಿದ್ದ ಸುಧಾ ಮರಳಿ ಮಣ್ಣಿಗೆ ಸೇರಿದೆ. ಆದರೆ, ತನ್ನ ವೃತ್ತಿಯ ಉದ್ದಕ್ಕೂ ತೋರಿದ ಛಾಪು ಮಾತ್ರ ಡಾಗ್ ಸ್ಕ್ವಾಡ್ ತಂಡದ ಸದಸ್ಯರಿಗೆ ಶಾಶ್ವತ ಆಗಿರುತ್ತದೆ.
Video:
Karnataka's Mangalore police In Saturday conducted with full police honors including a Gun Salute, the last rites of detective sniffer dog Sudha who died today morning after putting in a decade of service. Sudha, a Doberman who had helped to cracked many crimes had fallen sick two months back and passed away on Monday night. Police sniffer dog Sudha laid to rest with full state honor in Mangalore.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm