ಬ್ರೇಕಿಂಗ್ ನ್ಯೂಸ್
21-07-21 11:02 pm Mangaluru Correspondent ಕರಾವಳಿ
ಬೆಂಗಳೂರು, ಜುಲೈ 21: ಇತ್ತೀಚೆಗೆ ಅಕ್ರಮವಾಗಿ ಒಳನುಗ್ಗಿ ಮಂಗಳೂರಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದ ಲಂಕನ್ನರ ಕೇಸನ್ನು ರಾಷ್ಟ್ರೀಯ ತನಿಖಾ ದಳ ತನಿಖೆಗೆ ಮುಂದಾಗಿದೆ. 40ಕ್ಕೂ ಹೆಚ್ಚು ಲಂಕನ್ನರು ಅಕ್ರಮ ಪ್ರವೇಶ ಮಾಡಿದ್ದು ಮೂರು ತಿಂಗಳ ಕಾಲ ತಮಿಳುನಾಡು, ಬೆಂಗಳೂರು, ಮಂಗಳೂರಿನಲ್ಲಿ ನೆಲಸಿದ್ದು ಆಂತರಿಕ ಭದ್ರತೆಗೆ ಸವಾಲಾದ ಪ್ರಕರಣವಾಗಿತ್ತು.
ಮಂಗಳೂರಿನಿಂದ ಕೆನಡಾಕ್ಕೆ ಮಾನವ ಕಳ್ಳಸಾಗಣೆ ಆಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಯಾವುದೋ ಬೋಟ್ ಹಿಡಿದು ಸದ್ದಿಲ್ಲದೆ ಮಂಗಳೂರಿನಿಂದ ಪರಾರಿಯಾಗಲು ಪ್ಲಾನ್ ಹಾಕಿದ್ದಾಗಲೇ ಗುಟ್ಟು ರಟ್ಟಾಗಿ ಪೊಲೀಸರ ಬಲೆಗೆ ಬಿದ್ದಿದ್ದರು. ಇದೀಗ ಈ ಪ್ರಕದಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಇಲಾಖೆ ಎನ್ಐಎ ತನಿಖೆಗೆ ವಹಿಸಿದೆ.
ಬೆಂಗ್ಲೂರು ಬಾಂಗ್ಲಾನ್ನರ ಅಕ್ರಮ ನೆಲೆಯೂ ಎನ್ಐಎ ತೆಕ್ಕೆಗೆ
ಬೆಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಬಾಂಗ್ಲಾದೇಶ ಮೂಲದ ಯುವತಿಯ ಸಾಮೂಹಿಕ ರೇಪ್ ಮತ್ತು ಬಾಂಗ್ಲಾನ್ನರ ಅಕ್ರಮ ಪ್ರವೇಶದ ಪ್ರಕರಣವನ್ನೂ ಎನ್ಐಎ ತನಿಖೆಗೆ ವಹಿಸಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿರುವ ಅಧಿಕಾರಿಗಳು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿಗಳನ್ನು ಕೋರ್ಟ್ ನಲ್ಲಿ ಬಾಡಿ ವಾರೆಂಟ್ ಪಡೆದು ಶೀಘ್ರದಲ್ಲೇ ಎನ್ಐಎ ವಶಕ್ಕೆ ಪಡೆಯಲಿದ್ದಾರೆ.
ಮೇ 27ರಂದು ಬೆಂಗಳೂರಿನ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಂಗ್ಲಾ ಯುವತಿಯ ಮೇಲೆ ಪೈಶಾಚಿಕ ರೀತಿಯ ಲೈಂಗಿಕ ಹಿಂಸೆ ಘಟನೆ ನಡೆದಿತ್ತು. ವಿಡಿಯೋ ಬಾಂಗ್ಲಾದೇಶದಲ್ಲಿ ವೈರಲ್ ಆಗಿ ವಾರ ಕಳೆಯುತ್ತಿದ್ದಂತೆ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು ಅನ್ನುವ ಮಾಹಿತಿ ಪಡೆದ ಪೊಲೀಸರು ಪ್ರಕರಣ ಸಂಬಂಧಿಸಿ 10 ಮಂದಿ ಆರೋಪಿಗಳನ್ನ ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಬಾಂಗ್ಲಾ ಯುವತಿಯರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿರುವುದು ಬಯಲಾಗಿತ್ತು.
ಅಲ್ಲದೆ, ಆರೋಪಿಗಳ ವಶದಲ್ಲಿದ್ದ ಏಳು ಮಂದಿ ಬಾಂಗ್ಲಾ ಮೂಲದ ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಇವರೆಲ್ಲ ನಕಲಿ ಭಾರತೀಯ ದಾಖಲೆಗಳನ್ನು ಮಾಡಿಕೊಂಡು ಬೆಂಗಳೂರಿಗೆ ಬಂದು ನೆಲೆಸಿರುವುದನ್ನು ಪತ್ತೆ ಮಾಡಲಾಗಿತ್ತು. ಬಳಿಕ ಇಡೀ ಪ್ರಕರಣವನ್ನು ಹೆಣ್ಣೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಬಾಂಗ್ಲಾದಿಂದ ಅಕ್ರಮವಾಗಿ ಒಳನುಗ್ಗಿ ಪಶ್ಚಿಮ ಬಂಗಾಳದ ಗಡಿಜಿಲ್ಲೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಬಳಿಕ ಸದ್ದಿಲ್ಲದೆ ಬೆಂಗಳೂರಿಗೆ ಬರುತ್ತಿದ್ದರು. ಯುವತಿಯರನ್ನು ಕೂಡ ಅದೇ ರೀತಿಯಲ್ಲಿ ಕರೆತರಲಾಗಿತ್ತು ಎನ್ನೋ ಮಾಹಿತಿ ಇದೆ. ಹೀಗಾಗಿ ಇದೆಲ್ಲವನ್ನೂ ತನಿಖೆ ಮಾಡುವ ಸಲುವಾಗಿ ಅಧಿಕೃತವಾಗಿ ಎನ್ಐಎ ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.
Read: ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲ ಪತ್ತೆ ; ಕೆನಡಾಕ್ಕೆ ತೆರಳಲು ಪ್ಲಾನ್ ಹಾಕಿದ್ದ 38 ಲಂಕನ್ನರ ಸೆರೆ !
38 Sri Lankan refugees detained in Mangalore NIA to probe the case. The Mangaluru City Police had detained 38 Sri Lankan nationals who were illegally staying in lodges of the city, in small groups, for more than a month and without passports.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm