ಬ್ರೇಕಿಂಗ್ ನ್ಯೂಸ್
12-07-21 12:30 pm Mangalore Correspondent ಕರಾವಳಿ
ಉಳ್ಳಾಲ, ಜು.12: ಚೆಂಬುಗುಡ್ಡೆ ರುದ್ರಭೂಮಿಗೆ ಕಾಯ್ದಿರಿಸಿದ 1.57 ಎಕರೆ ಪ್ರದೇಶವನ್ನು ಹಿಂದೂ ರುದ್ರಭೂಮಿ ಪ್ರದೇಶವೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು ಚಿತಾಗಾರ ನಿರ್ಮಾಣ ವಿಚಾರದಲ್ಲಿ ಮೂಡಿದ್ದ ಗೊಂದಲ, ವಿವಾದಗಳು ಬಗೆಹರಿದು ಇನ್ಫೋಸಿಸ್ ಪ್ರಾಯೋಜಿತ ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು.
ಇನ್ಫೋಸಿಸ್ ಕಂಪನಿಯು ಒಂದು ಕೋಟಿ ಎಪ್ಪತ್ತೆರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನಿರ್ಮಿಸಲಿರುವ ನೂತನ ವಿದ್ಯುತ್ ಚಿತಾಗಾರ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದರು. ಚೆಂಬುಗುಡ್ಡೆ ರುದ್ರಭೂಮಿಯ ಒಟ್ಟು 1.57 ಎಕ್ರೆ ಕಾಯ್ದಿರಿಸಿದ ಪ್ರದೇಶದ 36 ಸೆಂಟ್ಸ್ ಜಾಗದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಹೀಗಾಗಿ ಇನ್ಫೋಸಿಸ್ ಕಂಪನಿಯವರು ಈಗಿರುವ ಕಟ್ಟಿಗೆ ಚಿತಾಗಾರದ ಪಕ್ಕದಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಮುಂದಾಗಿದ್ದರು. ಆದರೆ ಸ್ಥಳೀಯರು ಇದು ಅಸಮರ್ಪಕ ಕಾಮಗಾರಿ, ಪಕ್ಕದ ಶವ ಹೂಳುವ ಪ್ರದೇಶದಲ್ಲೇ ಚಿತಾಗಾರ ನಿರ್ಮಿಸುವಂತೆ ಒತ್ತಾಯಿಸಿದ್ದು ಶಿಲಾನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರುದ್ರಭೂಮಿಯ ದಾಖಲೆಗಳು ಹಿಂದೂ ರುದ್ರಭೂಮಿ ಹೆಸರಲ್ಲಿ ನೋಂದಣಿ ಆಗದ ವಿಚಾರದಲ್ಲಿ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದರು.
ಶಾಸಕ ಯು.ಟಿ ಖಾದರ್ ,ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಇನ್ಪೋಸಿಸ್ ಅಧಿಕಾರಿಗಳು ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದಾರೆ. ರುದ್ರಭೂಮಿಗೆ ಕಾಯ್ದಿರಿಸಿದ ಎಲ್ಲ 1.57 ಎಕರೆ ಜಾಗವನ್ನ ಹಿಂದೂ ರುದ್ರಭೂಮಿ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಇದರಿಂದ ಸ್ಥಳೀಯರಲ್ಲಿದ್ದ ಗೊಂದಲಗಳು ಶಮನಗೊಂಡಿದ್ದು ಈಗಿರುವ ಕಟ್ಟಿಗೆ ಚಿತಾಗಾರದ ಪಕ್ಕದಲ್ಲೇ ನೂತನ ವಿದ್ಯುತ್ ಚಿತಾಗಾರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪಕ್ಕದಲ್ಲಿರುವ ಬೃಹತ್ ಅಶ್ವತ್ಥ ವೃಕ್ಷಕ್ಕೂ ಯಾವುದೇ ಹಾನಿ ಮಾಡದೆ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಸುಸಜ್ಜಿತ ನೂತನ ವಿದ್ಯುತ್ ಚಿತಾಗಾರವನ್ನೊದಗಿಸಿದ ಇನ್ಫೋಸಿಸ್ ಕಂಪನಿಯ ಮುಖ್ಯಸ್ಥೆ ಸುಧಾಮೂರ್ತಿಯವರಿಗೆ ಸಚಿವ ಶ್ರೀನಿವಾಸ್ ಪೂಜಾರಿ ಅಭಿನಂದನೆ ಸಲ್ಲಿಸಿದರು.
ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಮಾತನಾಡಿ ರುದ್ರಭೂಮಿಗೆ ಕಾಯ್ದಿರಿಸಿದ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಿದ ಸಂದರ್ಬದಲ್ಲಿ ರುದ್ರಭೂಮಿ ನಿರ್ವಹಣಾ ಸಮಿತಿಯವರು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಬೇಡಿಕೆಯಿಟ್ಟಿದ್ದರು. ಆ ಬೇಡಿಕೆಯನ್ನು ಇದೀಗ ಇನ್ಫೋಸಿಸ್ ಕಂಪನಿಯು ನೆರವೇರಿಸಿಕೊಟ್ಟಿದೆ. ಜಿಲ್ಲೆಗೆ ಮಾದರಿಯಾಗಿರುವ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣದ ಕನಸು ನನಸಾಗಿರುವುದು ಸಂತಸದ ವಿಚಾರ ಎಂದರು. ಇಂಪೋಸಿಸ್ ಕಂಪನಿಯವರ ವಿನ್ಯಾಸ ಮತ್ತು ಕಾಮಗಾರಿಗೆ ಸರಿಸಾಟಿ ಇಲ್ಲ, ಅಂತಹ ಗುಣಮಟ್ಟದ ಯೋಜನೆಗಳನ್ನೇ ಅವರು ಸಮಾಜಕ್ಕೆ ನೀಡಿದ್ದು ಕಂಪನಿ ಮುಖ್ಯಸ್ಥೆ ಸುಧಾಮೂರ್ತಿಯವರಿಗೆ ಕೃತಜ್ಞತೆ ಅರ್ಪಿಸಿದರು.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ , ಆಯುಕ್ತರಾದ ರಾಯಪ್ಪ, ಅಲೆಮಾರಿ , ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ,ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ರುದ್ರಭೂಮಿ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ನಗರಸಭಾ ಸದಸ್ಯರಾದ ಶಶಿಕಲಾ, ಬಾಝಿಲ್ ಡಿಸೋಜಾ, ನಮಿತಾ ಗಟ್ಟಿ, ರಾಜೇಶ್ ಯು.ಬಿ, ಇನ್ಫೋಸಿಸ್ ಸಂಸ್ಥೆ ಅಧಿಕಾರಿಗಳಾದ ವಾಸುದೇವ ಕಾಮತ್, ಸುಧೀರ್ ಶೆಣೈ, ಹರೀಶ್ ನಿಸರ್ಗ, ಸ್ಥಳೀಯರಾದ ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Ullal Chembugudde graveyard controversy comes to end cancelled Inscription program organised. Residents who had objection over Electric funeral Machine given by Infosys are now convinced.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm