ಬ್ರೇಕಿಂಗ್ ನ್ಯೂಸ್
09-07-21 01:25 pm Mangalore Correspondent ಕರಾವಳಿ
ಮಂಗಳೂರು, ಜುಲೈ 9: ಪಚ್ಚನಾಡಿಯ ತ್ಯಾಜ್ಯ ಶುದ್ಧೀಕರಣ ಘಟಕದ ನೀರು ಫಲ್ಗುಣಿ ನದಿ ಸೇರುತ್ತಿರುವ ಆತಂಕದ ಮಧ್ಯೆಯೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪಚ್ಚನಾಡಿ ಮತ್ತು ಮಂದಾರ ಪ್ರದೇಶಗಳ ತ್ಯಾಜ್ಯ ರಾಶಿಯಿಂದಲೂ ಮಲಿನ ನೀರು ಫಲ್ಗುಣಿ ನದಿ ಸೇರುತ್ತಿದ್ದು, ಅತ್ಯಂತ ಕಲುಷಿತವಾಗಿರುವ ಈ ನೀರನ್ನು ಕುಡಿಯಲು ಬಳಸಲಾಗುತ್ತಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ಜುಲೈ 8ರಂದು ಮುಖ್ಯ ನ್ಯಾಯಾಧೀಶ ಎ.ಎಸ್.ಓಕಾ ಮತ್ತು ಜಸ್ಟಿಸ್ ಅಶೋಕ್ ನಿಜಗಣ್ಣವರ್ ಅವರನ್ನೊಳಗೊಂಡ ಪೀಠಕ್ಕೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಶ್ರೀಧರ್ ಪ್ರಭು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದ್ದು, ಕೂಡಲೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿಕೊಟ್ಟು ಫಲ್ಗುಣಿ ನದಿ ನೀರಿನ ವಸ್ತುಸ್ಥಿತಿಯ ಬಗ್ಗೆ ವಾರದೊಳಗೆ ಕೋರ್ಟಿಗೆ ವರದಿ ನೀಡುವಂತೆ ಹೇಳಿದೆ.




ಸ್ಥಳೀಯರ ದೂರಿನಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಮಂದಾರ ಮತ್ತು ಪಚ್ಚನಾಡಿಗೆ ಭೇಟಿ ನೀಡಿದ್ದು, ಅಲ್ಲಿನ ತ್ಯಾಜ್ಯರಾಶಿಗೆ ಬಿದ್ದ ಮಳೆನೀರು ಅತ್ಯಂತ ವಿಷಯುಕ್ತವಾಗಿದ್ದು, ಅದು ನೇರವಾಗಿ ಫಲ್ಗುಣಿ ನದಿ ಸೇರುತ್ತಿರುವುದನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ. ಪಚ್ಚನಾಡಿ ಮತ್ತು ಮಂದಾರ ಪ್ರದೇಶಗಳಲ್ಲಿ ಕಳೆದ ಬಾರಿ ಕುಸಿದು ಬಿದ್ದಿದ್ದ ಘನತ್ಯಾಜ್ಯ ಘಟಕದ ಸ್ಥಳದಿಂದ ಕಪ್ಪು ನೀರು ಕೋಡಿಯಂತೆ ಹರಿಯುತ್ತಿದ್ದು, ಅದು ನೇರವಾಗಿ ಫಲ್ಗುಣಿ ನದಿಯನ್ನು ಸೇರುತ್ತಿದೆ. ಅಲ್ಲಿಯೇ ಒಂದೆರಡು ಕಿಮೀ ಅಂತರದಲ್ಲಿ ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದ್ದು, ಅಲ್ಲಿನ ನೀರನ್ನು ಮಂಗಳೂರು ನಗರ ಮತ್ತು ಸ್ಥಳೀಯ ಪಂಚಾಯತ್ ಏರಿಯಾಗಳಲ್ಲಿ ಕುಡಿಯಲು ನೀಡಲಾಗುತ್ತಿದೆ.



ನಮ್ಮ ಪ್ರಾಧಿಕಾರದ ಸದಸ್ಯರು ಅಲ್ಲಿನ ಪರಿಸರದಲ್ಲಿ ಎರಡು ಕಿಮೀ ಆಸುಪಾಸಿನಲ್ಲಿ ನಡೆದುಕೊಂಡು ಹೋಗಿ ವಾಸ್ತವ ಪರಿಶೀಲನೆ ನಡೆಸಿದ್ದಾರೆ. ಅಲ್ಲಿರುವ ಶ್ರೀಮಂತ ರಾಜಗುಳಿಗ ದೇವಸ್ಥಾನ ಪರಿಸರದಲ್ಲಿ ಮಲಿನ ನೀರು ಹರಿದು ನದಿ ಸೇರುತ್ತಿರುವುದನ್ನು ಕುಂಡುಕೊಂಡಿದ್ದಾರೆ. ಮೇಲಿನಿಂದ ಹರಿದು ಬರುವ ಕಪ್ಪು ನೀರು ಈ ಭಾಗದಲ್ಲಿ ತಿಳಿ ನೀರಿನೊಂದಿಗೆ ಮಿಶ್ರವಾಗುತ್ತಿದೆ. ನದಿಗೆ ಈ ಪರಿಸರದಲ್ಲಿ ಎಲ್ಲ ಕಡೆಗಳಿಂದ ತ್ಯಾಜ್ಯ ನೀರು ನೇರವಾಗಿ ಹರಿದು ಬರುತ್ತಿದ್ದು, ಇದನ್ನು ಕುಡಿಯಲು ನೀಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಈ ರೀತಿಯ ಮಲಿನ ನೀರನ್ನು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕವನ್ನು ಸ್ಥಳೀಯ ಜನರು ವ್ಯಕ್ತಪಡಿಸಿದ್ದಾಗಿ ವರದಿಯಲ್ಲಿ ಹೇಳಿದ್ದಾರೆ.
ನದಿಗೆ ತ್ಯಾಜ್ಯ ನೀರನ್ನು ಬಿಡುತ್ತಿರುವುದರಿಂದ ಭವಿಷ್ಯದಲ್ಲಿ ಮಾನವ ಕೃತ ದುರಂತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಪರಿಸರಕ್ಕೂ ಮಾರಕ ಪರಿಣಾಮ ಎದುರಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಪ್ರಾಧಿಕಾರದ ಸದಸ್ಯರು ಬೊಟ್ಟು ಮಾಡಿದ್ದಾರೆ.
The district legal services authority has filed a report with the high court (HC), stating that the effluents flowing out of the garbage dump at Pachanady join River Phalguni. The report was submitted to the division bench of the high court (HC) comprising Chief Justice A S Oka and Justice Ashok Nijagannavar on Thursday July 8.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm